ಮನೆ ಅಪರಾಧ ಬಿಹಾರದಲ್ಲಿ ಬಿಜೆಪಿ ನಾಯಕನ ಪುತ್ರಿ ಮೇಲೆ ಆ್ಯಸಿಡ್ ದಾಳಿ

ಬಿಹಾರದಲ್ಲಿ ಬಿಜೆಪಿ ನಾಯಕನ ಪುತ್ರಿ ಮೇಲೆ ಆ್ಯಸಿಡ್ ದಾಳಿ

0

ಪಾಟ್ನಾ,: ಬಿಹಾರದ ಬಿಜೆಪಿ ನಾಯಕರೊಬ್ಬರ ಪುತ್ರಿ ಮೇಲೆ ದುಷ್ಕರ್ಮಿ ಆ್ಯಸಿಡ್ ದಾಳಿ ನಡೆಸಿರುವ ಘಟನೆ ವರದಿಯಾಗಿದೆ. ಬೇಗುಸರಾಯ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, 24 ವರ್ಷದ ಯುವತಿ ತನ್ನ ಮನೆಯಲ್ಲಿ ಮಲಗಿರುವಾಗ ಆಕೆಯ ಮೇಲೆ ಆ್ಯಸಿಡ್ ಎರೆಚಲಾಗಿದೆ. ದಾಳಿಯಲ್ಲಿ ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ.

ಬಕ್ರಿಯಲ್ಲಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಾಜಿ ಉಪಾಧ್ಯಕ್ಷ ಸಂಜಯ್ ಕುಮಾರ್ ಸಿಂಗ್ ಅವರ ಪುತ್ರಿ ಪಲ್ಲವಿ ರಾಥೋಡ್ ಮೇಲೆ ದಾಳಿ ನಡೆದಿದ್ದು, ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಕ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಬಕ್ರಿ ಬಜಾರ್‌ನಲ್ಲಿ ಶನಿವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ರಾಥೋಡ್ ಮಲಗಿದ್ದಾಗ ಅಪರಿಚಿತ ವ್ಯಕ್ತಿಗಳು ಮನೆಯ ಗೋಡೆಯನ್ನು ಹಾರಿ ಕಿಟಕಿಯ ಮೂಲಕ ಆಸಿಡ್ ಎಸೆದಿದ್ದಾರೆ. ದಾಳಿಯಲ್ಲಿ ಆಕೆಯ ಮುಖ ಮತ್ತು ದೇಹವು ತೀವ್ರ ಸುಟ್ಟ ಗಾಯಗಳಾಗಿವೆ.

ಆಕೆಯ ಕಿರುಚಾಟ ಕೇಳಿ ಮನೆಯವರು ರೂಮಿಗೆ ಓಡಿ ಬಂದಿದ್ದರು, ಮೊದಲಿಗೆ ಅದು ಹಲ್ಲಿ ಅಥವಾ ಇಲಿ ಇರಬಹುದು ಅದನ್ನು ನೋಡಿ ಆಕೆ ಕಿರುಚಿಕೊಂಡಿರಬಹುದು ಎಂದು ನಾವು ಭಾವಿಸಿದ್ದೆವು, ಆದರೆ ನಂತರ ಆ್ಯಸಿಡ್ ದಾಳಿ ನಡೆದಿದೆ ಎಂಬುದು ಅರಿವಾಯಿತು, ಆಕೆಯನ್ನು ತಕ್ಷಣ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪೋಷಕರು ಹೇಳಿದ್ದಾರೆ.