ಮನೆ ಮನೆ ಮದ್ದು ಬಜೆ (acorus calamus)

ಬಜೆ (acorus calamus)

0

ನೀರಿನ ಆಸರೆಯಲ್ಲಿ ಪುಷ್ಕಳವಾಗಿ ಬೆಳೆಯುವ ಆಳೆತ್ತರದ ಕ್ಷುಪ.  ಸುಗಂಧ ಭರಿತ ಉದ್ದ ಎಲೆ, ಭೂಮಿಯ ಮೇಲೆ ಅಡ್ಡಲಾಗಿ ಹರಡುವ ತೋರುಬೆರಳು ಗಾತ್ರದ ಕಾಂಡಗಳಿರುತ್ತದೆ. ಈ ಕಾಂಡಕ್ಕೆ ಗಿಣ್ಣು ಗಿಣ್ಣುಗಳಲ್ಲಿ ಹೊಸ ಸಸಿಯನ್ನು  ಪಡೆಯಬಹುದು. ಕಾಂಡ ತುದಿಯಲ್ಲಿ ಅರಳುವ ಉದ್ದನೆಯ  ಹೂಮಂಜರಿ. ಬೇರುಗಳ ಆಕಾರ ಹಸುವಿನ ಕೂದಲಿನಂತಿರುತ್ತದೆ.

ಹಾಗಾಗಿ ಗೋಲೋಮಿ ಎಂಬ ಹೆಸರು. ಹಲವು ಗಿಣ್ಣುಗಳ ದೆಸೆಯಿಂದ ಷಡ್ ಗ್ರಂಥ ಎನ್ನುವರು. ಬೇರಿನ ರೂಪದ ಕಾಂಡಕ್ಕೆ ಉಗ್ರ ವಾಸನೆ ಬರುತ್ತದೆ. ಎಲೆಗೂ ಸಹ ಇಂಥದ್ದೇ ದಟ್ಟಗಂಧವಿರುತ್ತದೆ. ಹಾಗಾಗಿ ಉಗ್ರಗಂಧ ಎಂಬ ಹೆಸರಿದೆ. ವೇದಕಾಲದಿಂದಲೂ ಅದನ್ನ ಮಂಗಳ ವಸ್ತುವಾಗಿ ಬಳಸುತ್ತಿದ್ದಾರೆ. ಹಾಗಾಗಿ ಇದಕ್ಕೆ ಮಾಂಗಲ್ಯ ಎಂದು ಹೆಸರಿದೆ. ರಕ್ಷೆ ಮತ್ತು ಧೂಪನ ಮಾತ್ರ ಅಲ್ಲ ಅದರ ಸುಗಂಧ ಸೇವನೆಗೆ ವಿಧಿಗಳಿವೆ.

ಕ್ಯಾಲಮಿನ್, ಕ್ಯಾಲ್ಸಿಯಂ ,ಒಕ್ಸಲೆಟ್ ,ಆಲ್ಢಿಹೈಡು,  ಎಕೋರಿನ್ ಗಳಿವೆ. ಎಸರಿಲ್ ಆಲ್ಡಿಹೈಡು ಎಂಬ ಆವಿಯಾಗುವ ಸ್ವಭಾವದ ತೈಲಾಂಶವಿರುತ್ತದೆ. ಹಾಗೆ ಇದರಲ್ಲಿ ಕ್ಯಾಂಫೀನ್ ತತ್ವವಿದೆ. ಬಜೆಗೆ ವಾಂತಿ ಮಾಡಿಸುವ ಗುಣವಿದೆ. ಕಫ ಕರಗಿಸುವ ಗುಣವಿದೆ. ಬಾಯಿ ನೀರು ಹೆಚ್ಚಿಸುತ್ತದೆ. ಬುದ್ಧಿ, ಸ್ವರ ಮತ್ತು ಮೇಧಾ ಶಕ್ತಿಗೆ ಬಜೆಯ ಸೇವನೆಯಿಂದ ಹಿತವಿದೆ.

 ಔಷಧೀಯ ಗುಣಗಳು:-

*ನೊಣ, ಕೀಟಗಳಿಗೆ ಭಜೆ ವಿಷಯಕಾರಿಯಾಗಿದೆ. ಹಾಗಾಗಿ ಅಕ್ಕಿಗೆ, ಬೆಳೆಗೆ, ಹುಳವಾಗದಂತೆ ಇಡಿಯಾ ಒಣಬೇರು ರಾಶಿ, ಮೂಟೆಯಲ್ಲಿ ಇಡುವುದರಿಂದ ಹುಳ, ಕೀಟ ವಾಗುವುದಿಲ್ಲ.

*ಕೆಮ್ಮು, ದಮ್ಮು, ಪರಿಹಾರಕ್ಕೆ ಸಹ ಬಜೆ ಬೇರನ್ನು ಅರೆದು ಎದೆ, ಪಕ್ಕಕೆಗೆ ಲೇಪಿಸುವುದರಿಂದ ಪರಿಹಾರ….

*ಬಜೆ ಹಾರೆದು ಲೇಪಿಸಿದರೆ ತಲೆನೋವು, ಕೀಲು ಗಂಟು ನೋವು, ಹೊಟ್ಟೆ ಉಬ್ಬರಕ್ಕೆ ಸುಲಭ ಪರಿಹಾರವಾಗಿದೆ.

*ಅಜವಾಯನ ಪುಡಿ ಮತ್ತು ಬಜೆಯನ್ನು ಸುಟ್ಟು ಬಂದ ಹೊಗಡಯನ್ನು ಗುದ ಭಾಗಕ್ಕೆ ಹಾಯಿಸಿದಾಗ ಮೂಲವ್ಯಾಧಿಯ ಮೊಳಕೆಯ ಉರಿ, ನೋವು ತೀವ್ರತೆ ವಾಸಿಯಾಗುತ್ತದೆ…

* ಮೂರ್ಚೆ ರೋಗಕ್ಕೆ ಬಜೆ ತೇಯ್ದು ನೆಕ್ಕಿಸುವುದರಿಂದ ಮರುಕಳಿಸುವ ಮುರ್ಛೆಯಲ್ಲಿ ಕೊಂಚ ಸುಧಾರಣೆ ಸಾಧ್ಯವಾಗುತ್ತದೆ. ಶಿಶುಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಬಜೆ ಬೇರು ತುಂಬಾ ಸಹಾಯಕಾರಿಯಾಗಿದೆ.

* ಶಿಶುಗಳಲ್ಲಿ, ವಯಸ್ಕರರಲ್ಲಿ ,ಬಜೆ ತೇಯ್ದು ಇದು ನೆಕ್ಕಿಸಿದಾಗ ಒಣಕೆಮ್ಮು, ಆಮಶಂಕೆ, ಭೇದಿ ಪರಿಹಾರವಾಗುತ್ತದೆ….

*ಜಾಪಾಳ ಎಂಬ ಬೇಧಿಕಾರಿ, ವಿಷ ದ್ರವ ಸೇವನೆಯ ದೋಷ ಪರಿಹಾರ. ಬಜೆ ರಾಮಬಾಣ. ಹಿರಿದ ಬಜೆಯ ಚೂರ್ಣ ನೀಡಿದಾಗ ವಿಷವು ಪರಿಹಾರವಾಗುತ್ತದೆ.

* ಮಕ್ಕಳ ಹೊಟ್ಟೆ ಉಬ್ಬರದಲ್ಲಿ ಅಲ್ಪ ಪ್ರಮಾಣ ಸೇವನೆ ಹಿತ.