ಮನೆ ರಾಜ್ಯ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗದoತೆ ಕಾರ್ಯ ನಿರ್ವಹಿಸಿ

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗದoತೆ ಕಾರ್ಯ ನಿರ್ವಹಿಸಿ

0

ಮೈಸೂರು: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಯಾಗದಂತೆ ನಿರ್ವಹಣೆ ಹಾಗೂ ಚುನಾವಣೆ ಖರ್ಚು ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕೆಂದು ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಚುನಾವಣೆ ವೀಕ್ಷಕರಾದ ದಿಲ್ ರಾಜ್ ಸಿಂಗ್ ಸೂಚನೆ ನೀಡಿದರು.

Join Our Whatsapp Group

 ಚುನಾವಣೆ ಮಾಹಿತಿ ನೀಡುವ ನಿಟ್ಟಿನಲ್ಲಿ ಕ್ಷೇತ್ರದ ಚುನಾವಣಾ ಅಧಿಕಾರಿ ಕಮಲಾಬಾಯಿ ಹಾಗೂ ಸಹಾಯಕಾ ಚುನಾವಣಾ ಅಧಿಕಾರಿ ಬಿಎನ್ ಗಿರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವೀಕ್ಷಕರು ಮತದಾನ ಪ್ರಕ್ರಿಯೆ ಹಾಗೂ ವೆಚ್ಚದ ನಿರ್ವಹಣೆಯ ಮಾಹಿತಿ ನೀಡಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಟ್ಟು 14 ಅಭ್ಯರ್ಥಿಗಳಿದ್ದು ಅಭ್ಯರ್ಥಿಗಳ ಕರ ಪತ್ರದ ವೆಚ್ಚದ ಕುರಿತು ತಿಳಿದುಕೊಳ್ಳಬೇಕು. ಮನೆ ಮನೆಗೆ ಪ್ರಚಾರಕ್ಕೆ ತೆರಳುವಾಗ ಮತದಾರರಿಂದ ಮೊಬೈಲ್ ಸಂಖ್ಯೆಯನ್ನು ಕೇಳಿಕೊಡಲು ಹಾಗೂ ಅಭ್ಯರ್ಥಿಗಳಿಗೆ ನೀಡುವ 3 ರಿಜಿಸ್ಟರ್ ಗಳನ್ನ ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕು ಎಂದು ಹೇಳಿದರು.

ಈ ಬಾರಿ ಅಂಚೆ ಮತದಾನಕ್ಕೆ ಅವಕಾಶ ನೀಡಿದ್ದು 80 ವರ್ಷ ಮೇಲ್ಪಟ್ಟ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ನೀಡಲಾಗಿದೆ. ಹಾಗಾಗಿ ಪಕ್ಷಗಳು ಅಥವಾ ಅಭ್ಯರ್ಥಿ ಸಾಮಾನ್ಯ ಮತದಾರರನ್ನು ವಾಹನದಲ್ಲಿ ಮತಗಟ್ಟೆಗೆ ಕರೆತಂದರೆ ಆ ವಾಹನ ಜಪ್ತಿ ಮಾಡಬೇಕು ಎಂದು ತಿಳಿಸಿದರು.

 ಸಭೆಯಲ್ಲಿ ಚುನಾವಣಾ ಅಧಿಕಾರಿಗಳು ಬೂತ್ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.