ಈ ನಕ್ಷತ್ರದಲ್ಲಿ ರೋಗ ಉಂಟಾದರೆ ಕ್ರೂರ ಶಾಂತಿ ಮಾಡಿಸುವುದರಿಂದ ಆರೋಗ್ಯ ಪ್ರಪ್ತಿಯಾಗುತ್ತದೆ. ಕನ್ಯೆ ಋತುಮತಿ ಯಾದರೆ ವೈಧವ್ಯ ಪ್ರಾಪ್ತಿಯಾಗಿ ಸಂತಾನಹೀನತೆಯಿಂದ ದುಃಖ ಪ್ರಾಪ್ತಿಯಾಗುತ್ತದೆ ಆದ್ದರಿಂದ ಆರು ತಿಂಗಳು ಪ್ರಸ್ತವನ್ನು ಮುಂದೂಡಿ ಶಾಂತಿ ಮಾಡಿಸಿದ ನಂತರ ಪ್ರಸ್ತ ಮಾಡುವ ಶುಭಕರ. ಇದರಲ್ಲಿ ವಿವಾಹವಾಗಬಹುದು. ಅನ್ಯ ಯಾವ ಶುಭ ಕಾರ್ಯಗಳಿಗೂ ಇದು ವರ್ಜ್ಯಿ.ಕಾಲ ಪ್ರಾಪ್ತವಾದಾಗ ಶುಭ ಕ್ರಮಗಳನ್ನು ಮಾಡಬಹುದು.
ಸಕಲ ಮಾಟ ಮಂತ್ರ,ಸೇವೆಗೆ ಅಳುಗಳ ನೇಮಕ, ಶಿಲ್ಪಿ ಕೆಲಸ, ಗಿಡ ಕಡಿಯುವುದು, ನೆಲಗಿಯುವುದು, ಕಲ್ಲು ಒಡೆಯುವುದು, ರಸ ಅರೆಯುವುದು, ಹೆಂಡ ಇಳಿಸುವುದು,ಬೆಲ್ಲ ಕಾಯಿಸುವುದು, ಹರಳು ಬೇಯಿಸುವುದು, ಬಿತ್ತುವುದು, ಬಾವಿ ತೊಡುವುದು, ಹಗೆ ತೆಗೆಯುವುದು,ನಿಕ್ಷೇಪ ಕೇಳುವುದು,ಅಂಜನ ಹಾಕುವುದು,ಚಿಕಿತ್ಸೆ ಮಾಡಿಸುವುದು, ಸಾಲ ಕೊಡುವುದು, ಬಡ್ಡಿ ತೆಗೆದುಕೊಳ್ಳುವುದು.ಅರಳೆ, ಕಬ್ಬಿಣದ ಆಯುಧ,ಕಂಬಳಿ, ಇಟ್ಟಿಗೆ, ಕಲ್ಲು ಇವುಗಳ ಕ್ರಯ ವಿಕ್ರಮ, ಪ್ರೇತ ಸಂಸಾರ ಈ ಕಾರ್ಯಗಳೇಗೆ ಮಘಾ ನಕ್ಷತ್ರ ಶುಭವಾದದ್ದು.
ಈ ನಕ್ಷತ್ರ ಒಂದನೇ ಚರಣದಲ್ಲಿ ಜನಿಸಿದ ಫಲವಿದ್ವತ್ ಪ್ರಭು ಎರಡನೇ ಚರಣದಲ್ಲಿ ಜಯಶಾಲಿ, ಮೂರನೇ ಚರಣದಲ್ಲಿ ಅಧಿಕ ಕ್ಷಾನಿ ಮತ್ತು ನಾಲ್ಕನೇ ಚರಣದಲ್ಲಿ ಅಧಿಕ ಭೋಗವಾಗುವುದು. ಈ ನಕ್ಷತ್ರದ ಜಾತಕರು ಕಪಟ ವೃತ್ತಿಯಿಂದ ಬಲಿಷ್ಠನಾಗಿ,ಹಠಮಾರಿ ಮತ್ತು ತಂತ್ರಗಾರನಾಗುತ್ತಾನೆ.ಸರ್ಪಗಳ ಮೇಲೆ ಜಯ ಸಾಧಿಸುತ್ತಾನೆ ಅಂತರಂಗದಲ್ಲಿ ಭಯಶೀಲ, ಕಾಮಾಸಕ್ತ, ಅಂತಿಮವಾಗಿ ವಿರಕ್ತನಾಗುತ್ತಾನೆ ಬಡತನದಂತೆ ವ್ಯಸನಿಯಾಗುತ್ತಾನೆ 12, 18, 33,60, 83ನೇ ವರ್ಷಗಳು ಗಂಡ ಕಾಲಗಳಾಗಿದ್ದು, 87 ವರ್ಷ ಪರಮಾಯುಷ್ಯವಿರುತ್ತದೆ.