ಮೈಸೂರು: ಕ್ಲಿನಿಕ್‌ಗಳಲ್ಲಿ ತ್ಯಾಜ್ಯ ವಿಂಗಡಣೆ ಮಾಡದೆ ವಿಲೇವಾರಿ ಮಾಡುತ್ತಿರುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ನೀಡಿ ಕ್ರಮಕೈಗೊಳ್ಳುವಂತೆ ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಾದ ಡಾ.ಕೆ ವಿ ರಾಜೇಂದ್ರ ಅವರು ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ, ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಮೇಲ್ವಿಚಾರಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಸರ್ಕಾರಿ/ಖಾಸಗಿ ಮತ್ತು ಕ್ಲಿನಿಕ್‌ಗಳಲ್ಲಿ ತ್ಯಾಜ್ಯ ಸಂಗ್ರಹಣೆ ವಿಂಗಡಣೆ ಹಾಗೂ ವಿಲೇವಾರಿಯ ಬಗ್ಗೆ ಸಂಬoಧಿಸಿದ ಆಸ್ಪತ್ರೆಗಳ ವರದಿಗಳನ್ನು ನೀಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.
2023-24 ನೆ ಸಾಲಿನ ಆಸ್ಪತ್ರೆಗಳಲ್ಲಿ ಇರುವ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಆರ್ಥಿಕ ನೆರವು ನೀಡುವುದಾಗಿ ತಿಳಿಸಿದರು.
ರಾಜ್ಯ ಮಟ್ಟದ ಅತ್ಯುತ್ತಮ ಸಿ.ಹೆಚ್.ಸಿ ಜಯನಗರ( ನಗರ), ಗ್ರಾಮಾಂತರ ಸಿ.ಹೆಚ್.ಸಿ ಮೂಗೂರು (ತಿ.ನರಸೀಪುರ), ಅತ್ಯುತ್ತಮ 24*7 ಜಿಲ್ಲಾ ಮಟ್ಟದಲ್ಲಿ ಪಿ.ಹೆಚ್.ಸಿ ಮುಳ್ಳೂರು ಆಸ್ಪತ್ರೆಗಳ ವೈದ್ಯಕೀಯ ಅಧಿಕಾರಿಗಳಿಗೆ ಅಭಿನಂದಿಸಿ, ಪ್ರಸ್ತುತ ಜಿಲ್ಲೆಯಲ್ಲಿ 07 ಆಸ್ಪತ್ರೆಗಳಾದ ಸಮೂದಾಯ ಆರೋಗ್ಯ ಕೇಂದ್ರ ಜಯನಗರ, ವಿ.ವಿ.ಪುರಂ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕೆ.ಆರ್.ನಗರ, ನಂಜನಗೂಡು, ಹೆಚ್.ಡಿ.ಕೋಟೆ ಮತ್ತು ಟಿ.ನರಸೀಪುರ, ಹಾಗೂ ಚೆಲುವಾಂಬ ಆಸ್ಪತ್ರೆಗಳು ಲಕ್ಷ್ಯ ಮಾನದಂಡದಲ್ಲಿ ರಾಷ್ಟ್ರೀಯ ಪ್ರಮಾಣೀಕೃತವಾಗಿರುವುದನ್ನು ಅಭಿನಂದಿಸಿದರು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬನ್ನಿಮಂಟಪ NQAS ನಲ್ಲಿ ಪ್ರಮಾಣಿಕೃತವಾಗಿರುವುದನ್ನು ಅಭಿನಂದಿಸಿದರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಆರೋಗ್ಯ ಕೇಂದ್ರಗಳನ್ನು ಪ್ರಮಾಣೀಕರಿಸಲು ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳನ್ನೊಳಗೊಂಡoತೆ ಇತರರು ಉಪಸ್ಥಿತರಿದ್ದರು.