ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಪ್ಯಾನ್ ಇಂಡಿಯಾ ಬ್ಲಾಕ್‌ಬಸ್ಟರ್ ‘ಕಾಂತಾರ ಚಾಪ್ಟರ್ 1’ ಸಿನಿಮಾವನ್ನು ತೆಲುಗು ಸ್ಟಾರ್, ಪುಷ್ಪ ನಟ ಅಲ್ಲು ಅರ್ಜುನ್ ಶ್ಲಾಘಿಸಿದ್ದಾರೆ.
ನಿನ್ನೆ ರಾತ್ರಿ ಕಾಂತಾರ ಚಾಪ್ಟರ್ 1 ಸಿನಿಮಾ ನೋಡಿದೆ. ವಾಹ್, ಎಂತಹ ಅದ್ಭುತ ಚಿತ್ರ. ಅದನ್ನು ನೋಡುವಾಗ ಭ್ರಮಾಲೋಕದಲ್ಲಿ ಇರುವಂತೆ ಭಾಸವಾಯಿತು. ಬರಹಗಾರನಾಗಿ, ನಿರ್ದೇಶಕನಾಗಿ, ನಟನಾಗಿ ಏಕವ್ಯಕ್ತಿ ಪ್ರದರ್ಶನ ತೋರಿರುವ ರಿಷಬ್ ಶೆಟ್ಟಿ ಅವರಿಗೆ ಧನ್ಯವಾದಗಳು. ರಿಷಬ್ ಅವರು ಪ್ರತಿಯೊಂದು ಕರೆಯಲ್ಲೂ ಉತ್ತಮ ಸಾಧನೆ ಮಾಡಿದ್ದಾರೆಂದು ಅಲ್ಲು ಅರ್ಜುನ್ ತಮ್ಮ ಎಕ್ಸ್ ಖಾತೆಯಲ್ಲಿ ಬಣ್ಣಿಸಿದ್ದಾರೆ.
ನಟಿ ರುಕ್ಮಿಣಿ ವಸಂತ್, ಜಯರಾಮ್, ಗುಲ್ಶನ್ ದೇವಯ್ಯ ಮತ್ತು ಇತರರು ಅದ್ಭುತವಾಗಿ ನಟಿಸಿದ್ದಾರೆ. ತಂತ್ರಜ್ಞರು ಅದ್ಭುತ ಕೆಲಸ ಮಾಡಿದ್ದಾರೆ. ಅಜನೀಶ್ ಅವರ ಸಂಗೀತ, ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ, ಧರಣಿಯವರ ಸಾಹಿತ್ಯ ನಿರ್ದೇಶನ, ಅರ್ಜುನ್ ರಾಜ್ ಅವರ ಸಾಹಸ ಎಲ್ಲವೂ ಅದ್ಭುತ ಎಂದು ಅಲ್ಲು ಅರ್ಜುನ್ ಚಪ್ಪಾಳೆ ತಟ್ಟಿದ್ದಾರೆ.
ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ಹೊಂಬಾಳೆ ತಂಡಕ್ಕೆ ಅಭಿನಂದನೆಗಳು. ನಿಜ ಹೇಳಬೇಕೆಂದರೆ, ಆ ಅನುಭವವನ್ನು ವಿವರಿಸಲು ಪದಗಳೇ ಸಾಲದು. ನಿಮಗೆ ತುಂಬು ಹೃದಯದ ಅಭಿನಂದನೆ ಎಂದು ಹಾಡಿಹೊಗಳಿದ್ದಾರೆ.















