ಮನೆ ರಾಜ್ಯ ಮತ್ತೆ ಬೆನ್ನು ನೋವಿನ ಕಥೆ ಹೇಳಿದ ನಟ ದರ್ಶನ್‌ – ಮಹತ್ವ ಕೊಡದ ಜಡ್ಜ್‌

ಮತ್ತೆ ಬೆನ್ನು ನೋವಿನ ಕಥೆ ಹೇಳಿದ ನಟ ದರ್ಶನ್‌ – ಮಹತ್ವ ಕೊಡದ ಜಡ್ಜ್‌

0

ಬೆಂಗಳೂರು : ಇಂದು ವಿಚಾರಣೆಗೆ ಹಾಜರಾಗಿದ್ದ ದರ್ಶನ್‌ ಮತ್ತೆ ಬೆನ್ನು ನೋವಿನ ನಾಟಕವಾಡಿದರೂ ನ್ಯಾಯಾಧೀಶರು ಮಹತ್ವ ಕೊಡಲಿಲ್ಲ ಎಂದು ವರದಿಯಾಗಿದೆ.

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸೆಷನ್ ಕೋರ್ಟ್ ಮುಂದೆ ದರ್ಶನ್ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು.

ಈ ವೇಳೆ, ಮತ್ತೆ ಬೆನ್ನುನೋವಿನ ನಾಟಕವಾಡಿದರಾದರೂ ನ್ಯಾಯಾಧೀಶರು ಮಹತ್ವ ಕೊಡಲಿಲ್ಲ. ಕೋರ್ಟ್ ಆದೇಶದ ಬಳಿಕ ಸೌಲಭ್ಯ ನೀಡುತ್ತಾ ಇದ್ದಾರಾ ಅಂತ ಜಡ್ಜ್ ಪ್ರಶ್ನಿಸಿದರು.

ಇದಕ್ಕೆ ಇಲ್ಲ ಸರ್, ಯಾವುದನ್ನೂ ಕೊಟ್ಟಿಲ್ಲ. 12 ಅಡಿ ಜಾಗದಲ್ಲೇ ವಾಕ್ ಮಾಡಿ ಎನ್ನುತ್ತಾರೆ. ಆ ಜಾಗದಲ್ಲೇ ಸುತ್ತಾಡುತ್ತಿದ್ದೇನೆ. ತುಂಬಾ ಕಷ್ಟ ಆಗುತ್ತಿದೆ ಎಂದು ದರ್ಶನ್ ಹೇಳಿದರು.

ದರ್ಶನ್ ವಕೀಲ ಸುನೀಲ್ ವಾದಿಸಿ, ದಿನಕ್ಕೆ 20 ಬಾರಿ ಕೇಳಿದರೂ ಯಾವುದೇ ಸವಲತ್ತು ಕೊಡುತ್ತಿಲ್ಲ ಜೈಲಾಧಿಕಾರಿಗಳಿಗೆ ಕೋರ್ಟ್ ಆರ್ಡರ್ ಕೊಟ್ಟಿದರೂ ಅವಕಾಶ ನೀಡುತ್ತಿಲ್ಲ ಎಂದು ಕೋರ್ಟ್‌ ಗಮನಕ್ಕೆ ತಂದರು.

ಆಕ್ಷೇಪಣೆಗೆ ಸೆ.30ಕ್ಕೆ ಅವಕಾಶ ನೀಡಿದ ಕೋರ್ಟ್‌ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 9ಕ್ಕೆ ಮುಂದೂಡಲಾಗಿದೆ. ಈ ಮಧ್ಯೆ ಪೊಲೀಸರು ಕೂಡ ಚಾರ್ಜ್ ಫ್ರೇಮ್ ಮಾಡಿಲ್ಲ ಎಂದು ತಿಳಿದುಬಂದಿದೆ.