ಮನೆ ಮನರಂಜನೆ ಫೆ.16ರಂದು ನಟ ದರ್ಶನ್ ‘ಡೆವಿಲ್’ ಟೀಸರ್ ಬಿಡುಗಡೆ

ಫೆ.16ರಂದು ನಟ ದರ್ಶನ್ ‘ಡೆವಿಲ್’ ಟೀಸರ್ ಬಿಡುಗಡೆ

0

ಬೆಂಗಳೂರು: ಜೈಲುವಾಸದ ಬಳಿಕ ಇದೀಗ ಜಾಮೀನಿನ ಮೇಲೆ ಹೊರಗೆ ಬಂದಿರುವ ನಟ ದರ್ಶನ್ ಶೀಘ್ರದಲ್ಲೇ ತಮ್ಮ ಚಿತ್ರಗಳ ಚಿತ್ರೀಕರಣದಲ್ಲಿ ತೊಡಗಿಲಿದ್ದು, ಇದಕ್ಕೆ ಇಂಬು ನೀಡುವಂತೆ ಇದೀಗ ಡೆವಿಲ್ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ. ದರ್ಶನ್ ಅವರ ಜನ್ಮದಿನದಂದು ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

Join Our Whatsapp Group

ಬೆನ್ನು ನೋವಿನ ಕಾರಣ ಈಗಾಗಲೇ ನಟ ದರ್ಶನ್ ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ.. ಹೀಗಾಗಿ ಅಭಿಮಾನಿಗಳಲ್ಲಿ ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದರು. ಹುಟ್ಟುಹಬ್ಬದ ನೆವದಲ್ಲಾದರೂ ತಮ್ಮ ನೆಚ್ಚಿನ ನಟನ ನೋಡಲು ಕಾತುರರಾಗಿದ್ದ ಅಭಿಮಾನಿಗಳಿಗೆ ದರ್ಶನ್ ನಿರ್ಧಾರ ನಿರಾಶೆ ಮೂಡಿಸಿತ್ತು. ಆದರೆ ಇದೀಗ ಡೆವಿಲ್ ಚಿತ್ರತಂಡ ಅಭಿಮಾನಿಗಳಿಗೆ ಟೀಸರ್ ಮೂಲಕ ಉಡುಗೊರೆ ನೀಡುತ್ತಿದೆ.

ಇದೇ ಫೆಬ್ರವರಿ 16ರಂದು ನಟ ದರ್ಶನ್ ರ ಹುಟ್ಟುಹಬ್ಬವಿದ್ದು ಅಂದೇ ಡೆವಿಲ್ ಚಿತ್ರದ ಟೀಸರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಈ ಸಂಬಂಧ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಟ್ವಿಟರ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ‘ನಮ್ಮ ಹೊಸ ಪ್ರಯತ್ನದ ಹಾರಿವು ಶೀಘ್ರದಲ್ಲೇ ನಿಮ್ಮ ಮುಂದೆ!’ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಡೆವಿಲ್ ಚಿತ್ರವನ್ನು ಮಿಲನ ಖ್ಯಾತಿಯ ನಿರ್ದೇಶಕ ಪ್ರಕಾಶ್ ವೀರ್ ನಿರ್ದೇಸುತ್ತಿದ್ದು, ಚಿತ್ರವನ್ನು ಜೆ ಜಯಮ್ಮ ಅವರು ನಿರ್ಮಾಣ ಮಾಡುತ್ತಿದ್ದಾರೆ.