ಮಂಡ್ಯ: ಸಕ್ಕರೆನಾಡು ಮಂಡ್ಯದ ಲೋಕಸಮರ ಅಖಾಡಕ್ಕೆ ಇಂದು ನಟ ದರ್ಶನ್ ಕಾಲಿಟ್ಟಿದ್ದು, ಮಂಡ್ಯ ಅಖಾಡ ಮತ್ತಷ್ಟು ರಂಗೇರಿದೆ.
ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಪರ ದರ್ಶನ್ ಪ್ರಚಾರ ಮಾಡಿದ್ದರು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ @ಸ್ಟಾರ್ ಚಂದ್ರು ಪರವಾಗಿ ಪರವಾಗಿ ದರ್ಶನ್ ಪ್ರಚಾರ ನಡೆಸಲಿದ್ದಾರೆ.
ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಅಭ್ಯರ್ಥಿ ಜೊತೆ ದರ್ಶನ್ ಪ್ರಚಾರ ಮಾಡಲಿದ್ದಾರೆ. ಜಿಲ್ಲೆಯಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ನಟ ದರ್ಶನ್ ಹೊಂದಿದ್ದು, ನಟ ದರ್ಶನ್ ಪ್ರಚಾರದಿಂದ ಮೈತ್ರಿ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿಗೆ ಹಿನ್ನಡೆ ಯಾಗುವ ಸಾಧ್ಯತೆ ಇದೆ. ದರ್ಶನ್ ಅಭಿಮಾನಿ ಬಳಗದ ಮತಗಳು ಕೈ ತಪ್ಪುವ ಭೀತಿ ಎದುರಾಗಿದೆ.
ಇದರಿಂದಾಗಿ ಮೈತ್ರಿ ಪಕ್ಷಕ್ಕೆ ಸಂಸದೆ ಸುಮಲತಾ ಮಾಸ್ಟರ್ ಸ್ಟೋಕ್ ನೀಡಿದ್ರ ಅನ್ನೋ ಪ್ರಶ್ನೆ ಮೂಡಿದೆ.? ಇತ್ತೀಚೆಗೆ ಸಂಸದೆ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಬಿಜೆಪಿ ಸೇರುವ ನಿರ್ಧಾರ ಘೋಷಣೆ ಮಾಡಿದರು. ಅದರಂತೆ ದರ್ಶನ್ ಕೂಡ ಸುಮಲತಾ ಪರ ಇದ್ದರು.
ಒಂದೆಡೆ ಸುಮಲತಾ ಮೈತ್ರಿ ಅಭ್ಯರ್ಥಿ ಎಚ್ಚಿಕೆ ಪರ ಮತಯಾಚನೆ ಮಾಡುತ್ತಿಲ್ಲ. ಆದರೆ ನಟ ದರ್ಶನ್ ಕಾಂಗ್ರೆಸ್ ಪರ ಮತಬೇಟೆಗಿಳಿದಿರುವುದು ಕುತೂಹಲ ಮೂಡಿಸಿದೆ.
ಪ್ರಚಾರದ ವಿವರ
ಬೆಳಗ್ಗೆ 9.45ಕ್ಕೆ ಹಲಗೂರು, 11ಕ್ಕೆ ಹುಸ್ಕೂರು, 11.45ಕ್ಕೆ ಹಾಡ್ಲಿ ವೃತ್ತ, 12.15ಕ್ಕೆ ಮಳವಳ್ಳಿ ಟೌನ್, 12.45ಕ್ಕೆ ಬೆಳಕವಾಡಿ, 1ಗಂಟೆಗೆ ಬಿ.ಜಿ ಪುರ, 1.15ಕ್ಕೆ ಸರಗೂರು ಹ್ಯಾಂಡ್‌ಪೋಸ್ಟ್, 1.30ಕ್ಕೆ ಪೂರಿಗಾಲಿ, 3ಗಂಟೆಗೆ ಟಿ.ಕಾಗೇಪುರ, 3.15ಕ್ಕೆ ದುಗ್ಗನಹಳ್ಳಿ, 3.45ಕ್ಕೆ ಬಂಡೂರು, 4.ಗಂಟೆಗೆ ಹಿಟ್ಟನಹಳ್ಳಿಕೊಪ್ಪಲು, 4.15ಕ್ಕೆ ಮಿಕ್ಕೆರೆ, 4.45ಕ್ಕೆ ಕಿರುಗಾವಲು ಸಂತೆಮಾಳ, 5.30ಕ್ಕೆ ಚನ್ನಪಿಳ್ಳೆಕೊಪ್ಪಲಿನಲ್ಲಿ ದರ್ಶನ್ ಮತಯಾಚನೆ ಮಾಡಲಿದ್ದಾರೆ.
ಮಳವಳ್ಳಿ ಶಾಸಕ ಪಿಎಂ ನರೇಂದ್ರ ಸ್ವಾಮಿ ನೇತೃತ್ವದಲ್ಲಿ ನಟ ದರ್ಶನ್ ಮತಬೇಟೆಗೆ ಇಳಿಯಲಿದ್ದಾರೆ.