ಮನೆ ಕಾನೂನು 5G ಪ್ರಕರಣ; ನಟಿ ಜೂಹಿ ಚಾವ್ಲಾಗೆ ವಿಧಿಸಿದ ದಂಡದ ಪ್ರಮಾಣ ಇಳಿಸಿದ ಹೈಕೋರ್ಟ್!

5G ಪ್ರಕರಣ; ನಟಿ ಜೂಹಿ ಚಾವ್ಲಾಗೆ ವಿಧಿಸಿದ ದಂಡದ ಪ್ರಮಾಣ ಇಳಿಸಿದ ಹೈಕೋರ್ಟ್!

0

ಮುಂಬೈ: ಭಾರತದಲ್ಲಿ 5ಜಿ ಅಳವಡಿಕೆ ವಿರುದ್ಧದ ಮೊಕದ್ದಮೆಗಾಗಿ ಬಾಲಿವಡ್ ನಟಿ ಜೂಹಿ ಚಾವ್ಲಾ ಅವರಿಗೆ ಹೈಕೋರ್ಟ್ ವಿಧಿಸಿದ್ದ  20 ಲಕ್ಷ ರೂ ದಂಡವನ್ನು 2 ಲಕ್ಷಕ್ಕೆ ಇಳಿಸಿದೆ.

ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರ ವಿರುದ್ಧ 5ಜಿ ತಂತ್ರಜ್ಞಾನದ ಬಿಡುಗಡೆಗೆ ಸಂಬಂಧಿಸಿದಂತೆ ವಿಧಿಸಲಾಗಿದ್ದ ಹೈಕೋರ್ಟ್ 20 ಲಕ್ಷ ರೂ ದಂಡ ವಿಧಿಸಿತ್ತು. ಇದೀಗ ಈ ದಂಡ ಪ್ರಮಾಣವನ್ನು 2 ಲಕ್ಷಕ್ಕೆ ಇಳಿಸಲು ದೆಹಲಿ ಹೈಕೋರ್ಟ್ ಮುಂದಾಗಿದೆ. ಆದರೆ ಅವರು ಸಾರ್ವಜನಿಕರಿಗಾಗಿ ಒಂದಿಷ್ಟು ಸೇವೆ ಮಾಡಬೇಕು ಎಂದು ಕೋರ್ಟ್  ಷರತ್ತು ವಿಧಿಸಿದೆ. ನ್ಯಾಯಾಂಗದ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ಜೂಹಿ ಚಾವ್ಲಾ ಸೇರಿದಂತೆ ಇತರ ಇಬ್ಬರ ಮೇಲೆ ದಂಡ ವಿಧಿಸಿತ್ತು.

ಪ್ರಕರಣದ ವಿವರ:
2021ರ ಜೂನ್ 4 ರಂದು, ಭಾರತದಲ್ಲಿ 5ಜಿ ತಂತ್ರಜ್ಞಾನದ ಜಾರಿ ವಿರುದ್ಧ ಜೂಹಿ ಚಾವ್ಲಾ ಅವರ ಸಿವಿಲ್ ಮೊಕದ್ದಮೆ ಅರ್ಜಿ ಹಾಕಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಆರ್.ಮಿಧಾ ಅವರು ಅರ್ಜಿಯನ್ನು ವಜಾಗೊಳಿಸಿದರು. ಈ ವೇಳೆ ಫಿರ್ಯಾದಿದಾರರ ಮೇಲೆ 20 ಲಕ್ಷ ರೂ. ದಂಡ  ವಿಧಿಸಿದರು. ಪ್ರಚಾರಕ್ಕಾಗಿ ಈ ರೀತಿಯ ಮೊಕದ್ದಮೆ ಮಾಡಲಾಗಿದೆ ಎಂದು ನ್ಯಾಯಾಲಯವು ಕಳೆದ ವರ್ಷ ತಿಳಿಸಿತ್ತು.

ಈ ಹಿನ್ನೆಲೆ ನಟಿ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ್ದು, ಮೊಕದ್ದಮೆಯನ್ನು ವಜಾಗೊಳಿಸುವ ಏಕ ಪೀಠದ ಆದೇಶವು ಸರಿಯಿಲ್ಲ ಎಂದು ಕೋರ್ಟ್ ಮೊರೆ ಹೋಗಿದ್ದರು. ಆದರೆ ಕಳೆದ ವರ್ಷ ಕೊರೊನಾ 2ನೇ ಅಲೆ ಇದ್ದ ಕಾರಣ ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯದ ತಡೆದಿತ್ತು. ಆದರೂ ಈ ವಿಚಾರಣೆಗೆ  ಜೂಹಿ ಚಾವ್ಲಾ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜಾರಾಗುತ್ತಿದ್ದರು.

ಅರ್ಜಿಯನ್ನು ವಜಾಗೊಳಿಸಿದ ನಂತರ, ಜೂಹಿ ಚಾವ್ಲಾ ಅವರು ಕೆಲವು ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವೀಡಿಯೋದಲ್ಲಿ, ನಾನು 5ಜಿ ತಂತ್ರಜ್ಞಾನದ ವಿರುದ್ಧವಲ್ಲ. ಈ ತಂತ್ರಜ್ಞಾನವು ಸುರಕ್ಷಿತವಾಗಿದೆ ಎಂದು ಸರ್ಕಾರದ ಸ್ಪಷ್ಟೀಕರಣವನ್ನು ಪಡೆಯಲು ಮಾತ್ರ ಅರ್ಜಿ  ಹಾಕಲಾಗಿತ್ತು ಎಂದು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹೇಳಿದ್ದರು.