ಮನೆ ಮನರಂಜನೆ ಏಪ್ರಿಲ್ 14 ರಂದು ನಟ ಕೋಮಲ್ ಅಭಿನಯದ “ಉಂಡೆನಾಮ” ಚಿತ್ರ ಬಿಡುಗಡೆ

ಏಪ್ರಿಲ್ 14 ರಂದು ನಟ ಕೋಮಲ್ ಅಭಿನಯದ “ಉಂಡೆನಾಮ” ಚಿತ್ರ ಬಿಡುಗಡೆ

0

ನಟ ಕೋಮಲ್ ಅಭಿನಯದ ಹೊಸ ಸಿನಿಮಾಕ್ಕೆ “ಉಂಡೆನಾಮ’ ಎಂದು ಟೈಟಲ್ ಇಡಲಾಗಿದ್ದು, ಸದ್ದಿಲ್ಲದೆ “ಉಂಡೆನಾಮ’ ಸಿನಿಮಾದ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೇ ಏಪ್ರಿಲ್ 14ರಂದು ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ.

ಸದ್ಯ “ಉಂಡೆನಾಮ’ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ, ಸ್ಯಾಂಡಲ್ವುಡ್ನ ಅನೇಕ ಸೆಲೆಬ್ರಿಟಿಗಳು ಟೈಟಲ್ ಹೇಳುವುದರ ಮುಖಾಂತರ ವಿನೂತನವಾಗಿ “ಉಂಡೆನಾಮ’ ಟೈಟಲ್ ಅನಾವರಣ ಗೊಳಿಸಿದೆ.

ಇನ್ನು “ಉಂಡೆನಾಮ’ ಸಿನಿಮಾದ ಟೈಟಲ್ಲೇ ಹೇಳುವಂತೆ, ಇದೊಂದು ಔಟ್ ಆ್ಯಂಡ್ ಔಟ್ ಕಾಮಿಡಿ ಕಥಾಹಂದರದ ಸಿನಿಮಾ. ಕೋಮಲ್ ಅವರೊಂದಿಗೆ ಹರೀಶ್ ರಾಜ್, ಧನ್ಯಾ ಬಾಲಕೃಷ್ಣ, ತಬಲಾನಾಣಿ, ಅಪೂರ್ವಾ, ವೈಷ್ಣವಿ, ತನಿಷಾ ಕುಪ್ಪಂಡ, ಬ್ಯಾಂಕ್ ಜನಾರ್ಧನ್ ಮುಂತಾದವರು “ಉಂಡೆನಾಮ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

 “ಎನ್. ಕೆ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ಸಿ. ನಂದ ಕಿಶೋರ್ ನಿರ್ಮಿಸಿರುವ “ಉಂಡೆನಾಮ’ ಸಿನಿಮಾಕ್ಕೆ “ಮಜಾ ಟಾಕೀಸ್’ ಖ್ಯಾತಿಯ ಸಂಭಾಷಾಣೆಗಾರ ಕೆ. ಎಲ್. ರಾಜಶೇಖರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಶ್ರೀಧರ್ ಸಂಭ್ರಮ ಸಂಗೀತ ಸಂಯೋಜಿಸಿದ್ದು, ನವೀನ್ ಕುಮಾರ್ ಛಾಯಾಗ್ರಹಣ, ಕೆ. ಎಂ ಪ್ರಕಾಶ್ ಸಂಕಲನವಿದೆ.

ಒಟ್ಟಾರೆ ಬಹು ದಿನಗಳ ನಂತರ ನಗುವಿನ ಕಚುಗುಳಿ ಇಡೋಕೆ ಬರುತ್ತಿರುವ ಕೋಮಲ್ “ಉಂಡೆನಾಮ’ ಹೇಗಿರಲಿದೆ ಎಂಬುದು ಏಪ್ರಿಲ್ ವೇಳೆಗೆ ಗೊತ್ತಾಗಲಿದೆ.

ಹಿಂದಿನ ಲೇಖನಚುನಾವಣಾ ಬಾಂಡ್ ಪ್ರಕರಣ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕೆ? ಏ. 11ರಂದು ನಿರ್ಧರಿಸಲಿದೆ ಸುಪ್ರೀಂ ಕೋರ್ಟ್
ಮುಂದಿನ ಲೇಖನಬ್ಯಾಂಕ್ ನಲ್ಲಿಟ್ಟಿದ್ದ ಆಸ್ತಿ ಪತ್ರಗಳ ನಷ್ಟ: 5 ಲಕ್ಷ ರೂಪಾಯಿ ನೀಡಲು ಎಸ್’ಬಿಐಗೆ ಗ್ರಾಹಕರ ಆಯೋಗ ಸೂಚನೆ