ಮನೆ ಮನರಂಜನೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ಮನೋರಂಜನ್‌ ರವಿಚಂದ್ರನ್‌

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ಮನೋರಂಜನ್‌ ರವಿಚಂದ್ರನ್‌

0

ಬೆಂಗಳೂರು (Bengaluru): ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಪುತ್ರ ನಟ ಮನೋರಂಜನ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ದೂರದ ಸಂಬಂಧಿ ಸಂಗೀತಾ ದೀಪಕ್‌ ಅವರೊಂದಿಗೆ ಮನೋರಂಜನ್‌ ಅವರು ಸಪ್ತಪದಿ ತುಳಿದಿದ್ದಾರೆ. ಎರಡು ಕುಟುಂಬಸ್ಥರ ಹಿರಿಯರ ಸಮ್ಮುಖದಲ್ಲಿ ಮದುವೆ ನೆರವೇರಿದ್ದು, ನೂತನ ಜೋಡಿಗಳು ಎಲ್ಲರೂ ಹರಸಿದ್ದಾರೆ.

ಮನೆಯಲ್ಲಿ ಹುಡುಕಿದ ಹುಡುಗಿಯ ಜೊತೆ ಮನೋರಂಜನ್ ಮದುವೆಯಾಗಿದ್ದಾರೆ. ಈ ಮೊದಲೇ ರವಿಚಂದ್ರನ್ ಅವರು, ನನ್ನ ಮಗಳು ಅಂಜಲಿ ರೀತಿಯಲ್ಲಿ ಮಗನ ಮದುವೆ ಮಾಡೋದಿಲ್ಲ. ಸರಳವಾಗಿ ಮಾಡುತ್ತೇವೆ. ಹೆಣ್ಣಿನ ಕಡೆಯವರಿಗೆ ಆಡಂಬರ ಇಷ್ಟವಿಲ್ಲ ಎಂದು ಹೇಳಿದ್ದರು.

ನಿನ್ನೆ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಡಾ ಶಿವರಾಜ್‌ಕುಮಾರ್, ಅಕುಲ್ ಬಾಲಾಜಿ, ಹಂಸಲೇಖ ದಂಪತಿ, ರಾಘವೇಂದ್ರ ರಾಜ್‌ಕುಮಾರ್ ದಂಪತಿ ಭಾಗವಹಿಸಿದ್ದರು.

ಮನೋರಂಜನ್‌ಗೆ ಮದುವೆ ಮಾಡಲು ತಾಯಿ ಸುಮತಿ ರವಿಚಂದ್ರನ್ ಅವರು ವಧುವಿನ ಹುಡುಕಾಟದಲ್ಲಿದ್ದರು. ಆಗ ಸಂಗೀತಾ ಅವರ ಪ್ರಪೋಸಲ್ ಬಂದಿತ್ತು. ನಂತರ ಎರಡೂ ಕುಟುಂಬಗಳಿಗೆ ಒಪ್ಪಿಗೆಯಾಗಿ, ಈಗ ಮದುವೆಯಾಗಿದ್ದಾರೆ.

ಚಿತ್ರರಂಗದವರು, ಆತ್ಮೀಯರಿಗಾಗಿ ಆಗಸ್ಟ್ 22ರಂದು ರವಿಚಂದ್ರನ್‌ ಅವರು ಕೂಡ ಮಗನ ಮದುವೆಯ ಆರತಕ್ಷತೆಯನ್ನು ಆಯೋಜಿಸಿದ್ದಾರೆ. ಆ ಆರತಕ್ಷತೆಗೆ ದೊಡ್ಡ ಮಟ್ಟದಲ್ಲಿ ಜನರು ಬರುವ ನಿರೀಕ್ಷೆಯಿದೆ.