ಮನೆ ರಾಜ್ಯ ಕುಟುಂಬ ಸಮೇತರಾಗಿ ಬಂದು ಮಾದಪ್ಪನ ದರ್ಶನ ಪಡೆದ ನಟ ರಾಘವೇಂದ್ರ ರಾಜಕುಮಾರ್

ಕುಟುಂಬ ಸಮೇತರಾಗಿ ಬಂದು ಮಾದಪ್ಪನ ದರ್ಶನ ಪಡೆದ ನಟ ರಾಘವೇಂದ್ರ ರಾಜಕುಮಾರ್

0

ಚಾಮರಾಜನಗರ: ನಟ ರಾಘವೇಂದ್ರ ರಾಜಕುಮಾರ್ ಹನೂರು ತಾಲೂಕಿನಲ್ಲಿರುವ ಪವಾಡ ಪ್ರಸಿದ್ಧ ಮಲೆಮಹದೇಶ್ವರ ಸ್ವಾಮಿಯ ದರ್ಶನ ಪಡೆದರು.

ಚಾಮರಾಜನಗರ ಡಾ. ರಾಜಕುಮಾರ್ ಅವರ ತವರೂರಾಗಿದ್ದು, ಕುಟುಂಬ ಸಮೇತರಾಗಿ ಮಾದಪ್ಪನ ಸನ್ನಿಧಿಗೆ ನಟ ರಾಘವೇಂದ್ರ ರಾಜಕುಮಾರ್, ಕಿರಿಯ ಪುತ್ರ ಯುವ ರಾಜಕುಮಾರ್, ಪತ್ನಿ ಮಂಗಳಾ ಅವರೊಂದಿಗೆ ಆಗಮಿಸಿದ್ದರು.

ಮಾದಪ್ಪನ ದರ್ಶನ ಪಡೆದು, ದಾಸೋಹ ಭವನದಲ್ಲಿ ಪ್ರಸಾದ ಸೇವಿಸಿದರು.

ನಮ್ಮ ತಂದೆ ರಾಜಕುಮಾರ್ ಅವರು ಒಂದು ಸಲ ಇಲ್ಲಿಗೆ ಕರೆದುಕೊಂಡು ಬಂದಿದ್ದರು. ಆಮೇಲೆ ಇಲ್ಲಿಗೆ ಬಂದಿರಲಿಲ್ಲ. ಪುತ್ರ ಯುವ ರಾಜಕುಮಾರ್ ನಟನೆಯ ಸಿನಿಮಾ ಶೂಟಿಂಗ್ ಮೈಸೂರಿನಲ್ಲಿ ನಡೀತಿದೆ. ಅದಕ್ಕಾಗಿ ಮಾದಪ್ಪನ ದರ್ಶನ ಪಡೆಯಲು ಬಂದಿದ್ದೇವೆ ಎಂದರು.

ಈ ಜಾಗ ತುಂಬಾ ಚೆನ್ನಾಗಿದೆ. ಮಲೆ ಮಹದೇಶ್ವರ ತಾಣ ಸ್ವರ್ಗದಂತೆ ಭಾಸವಾಗುತ್ತಿದೆ. ವರ್ಷಕ್ಕೆ ಒಂದು ಸಲವಾದರೂ ಇಲ್ಲಿಗೆ ಬರಬೇಕು ಅಂತ ಅನ್ನಿಸಿದೆ. ಇನ್ಮೇಲೆ ಮಾದಪ್ಪನ ದರ್ಶನ ಪಡೆಯಲು ಬರ್ತಿನಿ ಎಂದು ರಾಘವೇಂದ್ರ ರಾಜಕುಮಾರ್ ತಿಳಿಸಿದರು.

ಹಿಂದಿನ ಲೇಖನಶಿವಮೊಗ್ಗದಲ್ಲಿ ಹಿಂದೂ ಧರ್ಮೀಯರ ಅಂಗಡಿಗಳ ಲೂಟಿ, ಮನೆಗಳಿಗೆ ದಾಳಿ ನಡೆಸಿರುವುದು ಖಂಡನೀಯ: ನಳಿನ್ ಕುಮಾರ್ ಕಟೀಲು
ಮುಂದಿನ ಲೇಖನರೈಲುಗಳ ಸಮಯ ಪರಿಷ್ಕರಣೆ: ಮೈಸೂರಿನಿಂದ ಹೊರಡುವ 09 ರೈಲುಗಳ ನಿರ್ಗಮನ ಸಮಯ ಬದಲು