ಮನೆ ಮನರಂಜನೆ ದೇಹದಾನ, ಅಂಗಾಂಗದಾನಕ್ಕೆ ಮಾದರಿಯಾದ ನಟ ರಾಜವರ್ಧನ್

ದೇಹದಾನ, ಅಂಗಾಂಗದಾನಕ್ಕೆ ಮಾದರಿಯಾದ ನಟ ರಾಜವರ್ಧನ್

0

ಮನುಷ್ಯ ಸತ್ತ ಮೇಲೂ ಸಾರ್ಥಕ ಬಾಳು ಬಾಳಬೇಕು, ಅಂದ್ರೆ ದೇಹ ಮಣ್ಣಾಗುವ ಬದಲು ದೇಹದಾನ ಮಾಡಬೇಕೆಂದು ಹೇಳುತ್ತಾರೆ. ಇದೀಗ ಯುವ ನಟ ರಾಜವರ್ಧನ್ ಅಂತಹದ್ದೇ ಕಾರ್ಯಕ್ಕೆ ಮುಂದಾಗಿದ್ದಾರೆ. ದೇಹದಾನ ಮಾಡಲು ಒಪ್ಪಿರುವ ನಟ ಇತರರಿಗೆ ಮಾದರಿಯಾಗಿದ್ದಾರೆ.

ಅಂಗಾಂಗ ಬೇಡಿಕೆಯುಳ್ಳವರ ಉಪಯೋಗಕ್ಕೆ ಬರುವುದನ್ನು ತೀರ್ಮಾನಿಸುವುದು ನಮ್ಮ ಕೈಯಲ್ಲಿರುತ್ತದೆ. ದಿವಂಗತ ನಟ ಲೋಕೇಶ್ ಸೇರಿದಂತೆ ಹಲವರು ದೇಹದಾನ ಮಾಡಿ ಸಾರ್ಥಕರಾಗಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಕೂಡ ನೇತ್ರದಾನ ಮಾಡಿ ಮಾದರಿಯಾಗಿದ್ದರು. ಇದೇ ಹಾದಿಯಾಗಿ ನಟ ರಾಜವರ್ಧನ್ ಅವರು ಅಂಗಾಂಗ ದಾನ ಮಾಡೋದಾಗಿ ಘೋಷಿಸಿದ್ದಾರೆ.

ನೇತ್ರದಾನಕ್ಕೆ ಅನೇಕರಿಗೆ ಸ್ಫೂರ್ತಿಯಾದವರು ಡಾ.ರಾಜ್‌ಕುಮಾರ್, ದೇಹದಾನವೂ ಇನ್ನೂ ಶ್ರೇಷ್ಠವಾದ ದಾನವಾಗಿದೆ. ಉಸಿರು ಚೆಲ್ಲಿದ ಮೇಲೆ ಆರೋಗ್ಯವಂತ ಅಂಗಾಂಗ ಮಣ್ಣಾಗೋ ಬದಲು ಉಪಯುಕ್ತರಿಗೆ ಜೀವ ನೀಡಿದರೆ, ಎಷ್ಟೋ ಜನರನ್ನು ಉಳಿಸಬಹುದು. ದಾನಿಗಳು ಸತ್ತ ಮೇಲೂ ನಮ್ಮೊಂದಿಗೆ ಬದುಕುತ್ತಾರೆ ಎಂದರ್ಥ.

ನಟ ರಾಜವರ್ಧನ್ ಬಿಜಿಎಸ್ ಆಸ್ಪತ್ರೆ ವತಿಯಿಂದ ಏರ್ಪಡಿಸಿದ್ದ, ಈ ಕಾರ್ಯಕ್ರಮವೊಂದರರಲ್ಲಿ ಪಾಲ್ಗೊಂಡು ಅಂಗಾಂಗ ದಾನ ಹಾಗೂ ದೇಹದಾನ ಮಾಡೋದಾಗಿ ಘೋಷಿಸಿದ್ದಾರೆ. ಅಂದಹಾಗೆ ರಾಜವರ್ಧನ್ ತಂದೆ ಡಿಂಗ್ರಿ ನಾಗರಾಜ್ ಕೂಡ ದೇಹದಾನ ಮಾಡಿದ್ದಾರೆ ಎನ್ನಲಾಗಿದೆ.