‘777 ಚಾರ್ಲಿ’ ಸಿನಿಮಾಗೆ ನಾಲ್ಕು ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿರುವುದಕ್ಕೆ ಅತ್ಯುತ್ತಮ ನಟ ರಕ್ಷಿತ್ ಶೆಟ್ಟಿ ಧನ್ಯವಾದ ತಿಳಿಸಿದ್ದಾರೆ.
2021ನೇ ಸಾಲಿನ ಕನ್ನಡ ಸಿನಿಮಾಗಳಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ 2025ರಲ್ಲಿ ಪ್ರಕಟವಾಗಿದೆ. ‘777 ಚಾರ್ಲಿ’ ಸಿನಿಮಾದ ಅಭಿನಯಕ್ಕಾಗಿ ರಕ್ಷಿತ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ.
ಜೊತೆಗೆ 2ನೇ ಅತ್ಯುತ್ತಮ ಸಿನಿಮಾ ಪ್ರಶಸ್ತಿ, ಅತ್ಯುತ್ತಮ ಸಂಕಲನ (ಪ್ರತೀಕ್ ಶೆಟ್ಟಿ), ಅತ್ಯುತ್ತಮ ಗೀತರಚನೆ (ನಾಗಾರ್ಜುನ)ಯಲ್ಲೂ ಕೂಡ ಈ ಸಿನಿಮಾ ಪ್ರಶಸ್ತಿ ಬಾಚಿಕೊಂಡಿದೆ. ‘777 ಚಾರ್ಲಿ’ಗೆ ಒಟ್ಟು ನಾಲ್ಕು ಪ್ರಶಸ್ತಿಗಳು ಒಲಿದಿವೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ರಕ್ಷಿತ್ ಶೆಟ್ಟಿ, ‘777 ಚಾರ್ಲಿ’ 4 ರಾಜ್ಯ ಪ್ರಶಸ್ತಿಗಳನ್ನು ಗೆದ್ದಿದೆ. 2 ನೇ ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ಗೀತರಚನೆಕಾರ ಮತ್ತು ಅತ್ಯುತ್ತಮ ಸಂಪಾದನೆ ವಿಭಾಗಕ್ಕೆ ಸಿನಿಮಾವನ್ನು ಆಯ್ಕೆ ಮಾಡಿದ ತೀರ್ಪುಗಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
ನಮ್ಮ ಸಿನಿಮಾ ತಂಡ ಮತ್ತು ಪ್ರೇಕ್ಷಕರಿಗೂ ಧನ್ಯವಾದ. ಕಿರಣ್‌ರಾಜ್ ಅವರ ವಿಷನ್, ಪ್ರಥೀಕ್ ಅವರ ಎಡಿಟಿಂಗ್, ನಾಗಾರ್ಜುನ್ ಶರ್ಮಾ ಅವರ ಅತ್ಯುತ್ತಮ ಪದಗಳ ಗೀತರಚನೆಯು ನನ್ನ ಹೃದಯ ಮುಟ್ಟಿದೆ ಎಂದು ಬರೆದುಕೊಂಡಿದ್ದಾರೆ.














