ಮನೆ ರಾಷ್ಟ್ರೀಯ ಗೋವಾ ಸಿಎಂ ಭೇಟಿಯಾದ ನಟ ರಿಷಬ್ ಶೆಟ್ಟಿ

ಗೋವಾ ಸಿಎಂ ಭೇಟಿಯಾದ ನಟ ರಿಷಬ್ ಶೆಟ್ಟಿ

0

ಕಾಂತಾರ ಸಿನಿಮಾಗಳ ಮೂಲಕ ಜಗತ್ತಿನ ಗಮನ ಸೆಳೆದಿರುವ ಡಿವೈನ್‌ ಸ್ಟಾರ್ ರಿಷಬ್ ಶೆಟ್ಟಿ, ಎಲ್ಲೇ ಹೋದರೂ ಅದ್ಧೂರಿ ಸ್ವಾಗತ ಸಿಗುತ್ತಿದೆ. ಇದೀಗ ಗೋವಾ ಫಿಲ್ಮೋತ್ಸವದಲ್ಲಿ ಪತ್ನಿ ಜೊತೆ ಭಾಗಿಯಾಗಿದ್ದಾರೆ. ಗೋವಾದಲ್ಲಿ ನಡೆದ ಫಿಲ್ಮೋತ್ಸವದಲ್ಲಿ ರಿಷಬ್ ಶೆಟ್ಟಿ ಪತ್ನಿ ಸಮೇತ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಗೋವಾ ಸಿಎಂ ಅವರನ್ನು ಭೇಟಿ ಮಾಡಿದ್ದಾರೆ. ಗೋವಾದ ಸಿಎಂ ಪ್ರಮೋದ್ ಸಾವಂತ್, ರಿಷಬ್ ಹಾಗೂ ರಿಷಬ್ ಪತ್ನಿಗೆ ಹೂಗುಚ್ಛ ನೀಡಿ ಅಭಿನಂದಿಸಿದ್ದಾರೆ. ಈ ಹಿಂದೆ ಯಶ್ ಕೂಡ ಗೋವಾದ ಸಿಎಂ ಭೇಟಿ ಮಾಡಿ, ಅಭಿನಂದನೆ ಸ್ವೀಕರಿಸಿದ್ದರು.

ಕಾಂತಾರ ಯಶಸ್ಸಿನ ನಂತರ ರಿಷಬ್‌ಗೆ ದೇಶದಾದ್ಯಂತ ಅಭಿಮಾನಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಜೊತೆಗೆ ಪರರಾಜ್ಯದ ನಂಟು ಕೂಡಾ ವೃದ್ಧಿಸುತ್ತಿದೆ. ಕಾಂತಾರ ಚಾಪ್ಟರ್-1 ಸಿನಿಮಾ ಬಳಿಕ ರಿಷಬ್ ಶೆಟ್ಟಿ ‘ಜೈ ಹನುಮಾನ್’ ಸಿನಿಮಾದಲ್ಲಿ ನಟಿಸಲು ತಯಾರಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.