ಮನೆ ಅಪರಾಧ ನಟ ಶಿಂಬು ಮಾಲೀಕತ್ವದ ಕಾರು ಅಪಘಾತ: ವೃದ್ಧ ಸಾವು

ನಟ ಶಿಂಬು ಮಾಲೀಕತ್ವದ ಕಾರು ಅಪಘಾತ: ವೃದ್ಧ ಸಾವು

0

ಚೆನ್ನೈ: ತಮಿಳಿನ ಖ್ಯಾತ ನಟ ಶಿಂಬು ಅವರಿಗೆ ಸೇರಿದ ಕಾರು ವೃದ್ಧರೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತರನ್ನು ಮುನುಸ್ವಾಮಿ (70) ಎಂದು ಗುರುತಿಸಲಾಗಿದ್ದು,  ಮಾರ್ಚ್‌ 18ರಂದು ಈ ಘಟನೆ ನಡೆದಿದೆ.
ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅನಾರೋಗ್ಯ ಪೀಡಿತರಾಗಿದ್ದ ಮುನುಸ್ವಾಮಿ ತೆವಳುತ್ತ ರಸ್ತೆ ದಾಟುತ್ತಿರುವಾಗ ಕಾರು ಅವರ ಮೇಲೆ ಹರಿದಿದೆ. ಈ ಕಾರು ಶಿಂಬು ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ತಮಿಳುನಾಡು ಪೊಲೀಸರು ಮಾಹಿತಿ ನೀಡಿದ್ದಾರೆ.

ಸದ್ಯ ಪೊಲೀಸರು ಶಿಂಬು ತಂದೆ ರಾಜೇಂದ್ರನ್‌ ಅವರ ಕಾರು ಚಾಲಕ ಸೆಲ್ವಂ ಎಂಬುವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಕಾರಿನಲ್ಲಿ ಶಿಂಬು ಇದ್ದರೇ? ಅಥವಾ ಯಾರೆಲ್ಲ ಇದ್ದರು? ಎಂಬುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.

ಹಿಂದಿನ ಲೇಖನಆಮ್ ಆದ್ಮಿ ಪಕ್ಷದ ಸದಸ್ಯತ್ವಕ್ಕೆ ವಕೀಲ ಜಗದೀಶ್ ರಾಜೀನಾಮೆ
ಮುಂದಿನ ಲೇಖನದಿ ಕಾಶ್ಮೀರ್ ಫೈಲ್ಸ್’ ಚಿತ್ರದಿಂದ ‘ಜೇಮ್ಸ್‌’ಗೆ ತೊಂದರೆಯಿಲ್ಲ: ಶಿವರಾಜ್​ಕುಮಾರ್​