ಮನೆ ರಾಜ್ಯ ಆಟೋ ಚಾಲಕರ ಕಷ್ಟಕ್ಕೆ ಮಿಡಿದ ನಟ ವಿನೋದ್ ರಾಜ್

ಆಟೋ ಚಾಲಕರ ಕಷ್ಟಕ್ಕೆ ಮಿಡಿದ ನಟ ವಿನೋದ್ ರಾಜ್

0

ಬೆಂಗಳೂರು ಗ್ರಾಮಾಂತರ : ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆದ ಯುದ್ಧದ ಪರಿಣಾಮ ಜನರು ಸಾಕಷ್ಟು ಸಮಸ್ಯೆಗಳನ್ನ ಅನುಭವಿ ಪರದಾಟ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ನಡುವೆ ಎಲ್‌ಪಿಜಿ ಗ್ಯಾಸ್ ಸಿಗದೆ ಆಟೋ ಚಾಲಕರು ಪರದಾಟ ನೋಡಿದ ಹಿರಿಯ ನಟ ವಿನೋದ್ ರಾಜ್ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.

ಆಟೋ ಚಾಲಕರ ಹೃದಯಗಳಿಗೆ ಮಿಡಿದ ನಟ ವಿನೋದ್ ರಾಜ್ ಸಹಾಯ ಹಸ್ತ ಚಾಚಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತಾಯಿ ಡಾ.ಲೀಲಾವತಿ ಅವರ ಸಮಾಧಿ ಬಳಿ ನೂರಾರು ಆಟೋ ಚಾಲಕರಿಗೆ ದಿನಸಿ ಕಿಟ್ ವಿತರಣೆ ಮಾಡಿದ್ದಾರೆ.

ತಾಯಿ ಹೆಸರಿನಲ್ಲಿ ಆಟೋ ಚಾಲಕರಿಗೆ ಊಟ ಹಾಕಿ, ದಿನಸಿ ಕಿಟ್ ವಿತರಣೆ ಮಾಡಿದ್ದಾರೆ. ಆಟೋ ಚಾಲಕರ ಸಂಕಷ್ಟಕ್ಕೆ ತಮ್ಮ ಕೈಲಾದ ನೆರವು ಮಾಡುವ ಮ‌ೂಲಕ ಮಾನವೀಯತೆ ಮೆರೆದಿದ್ದಾರೆ. ನಟ ವಿನೋದ್ ರಾಜ್ ಕಾರ್ಯಕ್ಕೆ ಆಟೋ ಚಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.