ಮನೆ ಸ್ಥಳೀಯ ಶೀಘ್ರದಲ್ಲೇ ಭಗೀರಥ-2ನಿರ್ಮಾಣದ ಮುನ್ಸೂಚನೆ ನೀಡಿದ ನಟಿ

ಶೀಘ್ರದಲ್ಲೇ ಭಗೀರಥ-2ನಿರ್ಮಾಣದ ಮುನ್ಸೂಚನೆ ನೀಡಿದ ನಟಿ

0

ಮೈಸೂರು : ಜೆಪಿ ಎಂದೇ ಪ್ರಖ್ಯಾತರಾಗಿರುವ ನಟ ಜಯಪ್ರಕಾಶ್ ನಾಯಕನಟನಾಗಿ ನಟಿಸಿರುವ ಭಗೀರಥ ಚಿತ್ರದ ನಟಿ ಚಂದನಾ ತಮ್ಮ ಚಿತ್ರ ೫ನೇ ವಾರದಲ್ಲಿ ಮುನ್ನುಗ್ಗುತ್ತಿದ್ದು, ಚಿತ್ರದ ಯಶಸ್ವಿನಿಂದ ಚಂದನಾ ಬೀಗುತ್ತಿದ್ದು, ಮೆಟ್ರೋಪೋಲ್ ಹೋಟೆಲ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಮ್ಮ ಚಿತ್ರದ ಯಶಸ್ಸನ್ನು ಕುರಿತು ಅನಿಸಿಕೆ ವ್ಯಕ್ತಪಡಿಸಿದರು.

ಚಿತ್ರದ ಯಶಸ್ಸಿಗೆ ಅದರ ಕತೆಯೇ ಪ್ಲಸ್ ಪಾಯಿಂಟ್, ಐದು ಸುಂದರ ಹಾಡುಗಳು, ಅತ್ಯುತ್ತಮ ನಿರ್ದೇಶನ ಮತ್ತು ಛಾಯಾಗ್ರಹಣ ಪ್ರೇಕ್ಷಕರ ಮನಗೆದ್ದಿದೆ ಎಂದರು.
ಚಿತ್ರದಲ್ಲಿ ನನ್ನ ಪಾತ್ರವಂತೂ ನಾನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದೇನೆ. ಆ ತೃಪ್ತಿ ನನಗಿದೆ. ವಿಶೇಷವಾಗಿ ಯುವತಿಯರು ನನ್ನ ಪಾತ್ರವನ್ನು ಮೆಚ್ಚಿದ್ದಾರೆ. ಇಂದು ಮಹಾರಾಣಿ ಕಾಲೇಜಿನಲ್ಲಿ ಕಾಲೇಜು ಯುವತಿಯರನ್ನು ಭೇಟಿಯಾಗಿ ಸಂವಾದ ನಡೆಸಿದಾಗ ಈ ಅಭಿಪ್ರಾಯ ವ್ಯಕ್ತವಾಯಿತು ಎಂದು ಚಂದನ ತಮ್ಮ ಪಾತ್ರ ನಿರ್ವಹಣೆ ಕುರಿತು ಅಭಿಪ್ರಾಯ ಹಂಚಿಕೊಂಡರು.

ಒಂದು ಉತ್ತಮವಾದ ಸಂದೇಶ ಇಟ್ಟುಕೊಂಡು ಸಿನಿಮಾ ನಿರ್ಮಿಸಲಾಗಿದೆ. ಕತೆಯಲ್ಲಿ ಉತ್ತಮ ಸಂದೇಶವಿದೆ. ಎಲ್ಲರ ನಟನೆಯೂ ಅದ್ಭುತವಾಗಿದೆ. ಪ್ರಚಲಿತ ಘಟನೆಗಳನ್ನು ಆಧರಿಸಿ ಕತೆ ಹಣೆದು ಚಿತ್ರಕತೆ ನಿರ್ಮಿಸಲಾಗಿದೆ. ಚಿತ್ರದ ನಟ ತಾನು ಮೆಚ್ಚಿದ ಪ್ರೇಯಸಿಯನ್ನು ಪಡೆಯಲು ನಡೆಸಿದ ಪ್ರಯತ್ನವೇ ಭಗೀರಥ ಚಿತ್ರದ ಮೂಲ ಕತೆ ಆದರೂ ಚಿತ್ರದಲ್ಲಿ ಬರುವ ಎಲ್ಲ ಸನ್ನಿವೇಶಗಳೂ ಭಗೀರಥ ಪ್ರಯತ್ನದ ಹಿನ್ನಲೆಯಲ್ಲೇ ಕತೆಹಣೆಯಲಾಗಿದೆ. ಒಟ್ಟಾರೆಯಾಗಿ ಕುಟುಂಬ ಸಮೇತರಾಗಿ ಬಂದು ಜನರು ಈ ಚಿತ್ರವನ್ನು ನೋಡಬಹುದು. ಒಳ್ಳೆ ಕತೆ, ಉತ್ತಮ ಸಂದೇಶ, ಅತ್ಯುತ್ತಮ ನಟನೆ, ಅದ್ಭುತವಾದ ಛಾಯಾಗ್ರಹಣ, ಸುಂದರವಾದ ಹಾಡುಗಳು ಒಂದು ಕೌಟುಂಬಿಕ ಚಿತ್ರಕ್ಕೆ ಏನು ಬೇಕೋ ಅವೆಲ್ಲವೂ ಭಗೀರಥ ಚಿತ್ರದಲ್ಲಿದೆ ಎಂದು ಚಂದನಾ ಮೆಚ್ಚುಗೆ ಸೂಚಿಸಿದರು.