ಕಳೆದ ಕೆಲವು ದಿನಗಳಿಂದ ಕತ್ರಿನಾ ಕೈಫ್ ತಾಯಿಯಾಗುತ್ತಿರುವ ಬಗ್ಗೆ ವದಂತಿ ಹಬ್ಬಿತ್ತು. ಅಷ್ಟೇ ಅಲ್ಲದೇ ಮುಂದಿನ ತಿಂಗಳೇ ಮಗು ಆಗಮನದ ಕುರಿತಾಗಿಯೂ ಸುದ್ದಿಯಾಗಿದ್ದು, ಈ ವದಂತಿಗೆ ತೆರೆ ಬಿದ್ದಿದೆ.
ಇದೀಗ ತಮ್ಮ ಪ್ರೆಗ್ನೆನ್ಸಿಯನ್ನು ಕತ್ರಿನಾ ಖಚಿತಪಡಿಸಿದ್ದಾರೆ. ತುಂಬು ಗರ್ಭಿಣಿ ಕತ್ರಿನಾ ಕೈಫ್ ಇದೀಗ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಬೇಬಿ ಬಂಪ್ ಫೋಟೋಶೂಟ್‌ನ ಫೋಟೋವನ್ನು ಕೈಯಲ್ಲಿ ಹಿಡಿದಿರುವ ಪೋಸ್ಟ್ ಹಾಗೂ ಫೋಟೋ ಜೊತೆ ಸ್ಟಾರ್ ದಂಪತಿ “ನಮ್ಮ ಜೀವನದ ಹೊಸ ಅಧ್ಯಾಯವನ್ನು ತುಂಬಿದ ಹೃದಯಗಳೊಂದಿಗೆ ಆರಂಭಿಸುವ ಹಾದಿಯಲ್ಲಿ ನಾವಿದ್ದೇವೆ” ಎಂದು ಹೇಳುವ ಮೂಲಕ ಖುಷಿ ಕ್ಷಣವನ್ನು ಸಾಮಾಜಿಕ ಹಂಚಿಕೊಂಡಿದ್ದಾರೆ.
ನಟ ವಿಕ್ಕಿ ಕೌಶಲ್‌ರನ್ನು ಕತ್ರಿನಾ 2021ರಲ್ಲಿ ಮದುವೆಯಾಗಿದ್ದರು. ಇದೀಗ ಸ್ಟಾರ್ ದಂಪತಿ ಮೊದಲ ಮಗುವಿನ ನಿರೀಕ್ಷೆಯ ಸಂತಸವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.















