ಮನೆ ಅಪರಾಧ ನಟಿ, ರೂಪದರ್ಶಿ ಮೇಲೆ ರ್ಯಾಪಿಡೋ ಚಾಲಕನಿಂದ ವಿಕೃತಿ

ನಟಿ, ರೂಪದರ್ಶಿ ಮೇಲೆ ರ್ಯಾಪಿಡೋ ಚಾಲಕನಿಂದ ವಿಕೃತಿ

0

ಬೆಂಗಳೂರು(Bengaluru): ನಗರದಲ್ಲಿ ರಾತ್ರಿ ವೇಳೆ ರ್ಯಾಪಿಡೋ ಬೈಕ್ ಚಾಲಕನೊಬ್ಬ ಉದಯೋನ್ಮುಖ ನಟಿ ಹಾಗೂ ರೂಪದರ್ಶಿಯ ಖಾಸಗಿ ಭಾಗ ಸ್ಪರ್ಶಿಸಿ ವಿಕೃತ ವರ್ತನೆ ತೋರಿರುವ ಘಟನೆ ಹೆಣ್ಣೂರು ಮುಖ್ಯರಸ್ತೆಯಲ್ಲಿ ನಡೆದಿದೆ.

ಈ ಬಗ್ಗೆ ನಟಿ ನೀಡಿದ ದೂರಿನಂತೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಟೋಬರ್ 10ರ ರಾತ್ರಿ ಘಟನೆ ನಡೆದಿದೆ.

ದೂರುದಾರೆ 21 ವರ್ಷದ ಯುವತಿ, ನಟನೆಯ ಜೊತೆಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಕೆಲಸ ಮಾಡುತ್ತಿದ್ದು, ಅಕ್ಟೋಬರ್ 31ರ ರಾತ್ರಿ 10:30ರ ರಾತ್ರಿ ಜಕ್ಕೂರಿನಿಂದ ಬಾಬುಸಪಾಳ್ಯಕ್ಕೆ ರ್ಯಾಪಿಡೋ ಬೈಕ್ ಬುಕ್ ಮಾಡಿದ್ದರು.

ಬಳಿಕ KA 51 H 5965 ನಂಬರಿನ ಬೈಕ್ ಬಂದಿದೆ. ಆದರೆ ಮಾರ್ಗ ಮಧ್ಯೆ ಚಾಲಕ ಮಂಜುನಾಥ್ ತನ್ನ ಖಾಸಗಿ ಅಂಗ ಸ್ಪರ್ಶಿಸಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ದೂರಿನಲ್ಲಿ ನಟಿ ಉಲ್ಲೇಖಿಸಿದ್ದಾರೆ.

ಚಾಲಕ ಮಂಜುನಾಥ್ ತಿಪ್ಪೇಸ್ವಾಮಿ ಹಾಗೂ ರ್ಯಾಪಿಡೋ ಕಂಪನಿ ವಿರುದ್ಧ ನೊಂದ ನಟಿ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಜಿ–20 ಶೃಂಗಸಭೆ: ಮ್ಯಾಂಗ್ರೋವ್ ಕಾಡಿಗೆ ಭೇಟಿ ನೀಡಿ ಗಿಡ ನೆಟ್ಟ ವಿಶ್ವ ನಾಯಕರು
ಮುಂದಿನ ಲೇಖನನ್ಯಾಯಾಲಯದ ಆದೇಶ ಧಿಕ್ಕರಿಸಿದ ಸಾರಸ್ವತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮುಂಭಾಗ ಇಂದಿನಿಂದ ಅಮರಣಾಂತ ಉಪವಾಸ