ಮನೆ ಮನರಂಜನೆ ಹುಟ್ಟುಹಬ್ಬದ ಸಂಭ್ರಮದಲ್ಲಿ ಮೋಹಕತಾರೆ ನಟಿ ರಮ್ಯಾ

ಹುಟ್ಟುಹಬ್ಬದ ಸಂಭ್ರಮದಲ್ಲಿ ಮೋಹಕತಾರೆ ನಟಿ ರಮ್ಯಾ

0

ಸ್ಯಾಂಡಲ್‌ವುಡ್‌ನ ಮೋಹಕತಾರೆ ನಟಿ ರಮ್ಯಾ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಇಂದು 43ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ನಟಿ ರಮ್ಯಾ. ರಮ್ಯಾ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಸಾಕಷ್ಟು ಒಳ್ಳೆಯ ಸ್ಕ್ರಿಪ್ಟ್‌ ಕೇಳಿದ್ದಾರಂತೆ. ಅದರಲ್ಲಿ ಒಂದು ಐತಿಹಾಸಿಕ ಸಿನಿಮಾದ ಸ್ಕ್ರಿಪ್ಟ್‌ ಓಕೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ನಟಿ ರಮ್ಯಾ ಅಭಿ ಸಿನಿಮಾ ಮೂಲಕ ಅಪ್ಪು ಜೊತೆ ತೆರೆಹಂಚಿಕೊಳ್ಳುವ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು. ನಟಿ ರಮ್ಯಾ ಕನ್ನಡ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿ ದಕ್ಷಿಣದ ಭಾರದಲ್ಲಿ ಖ್ಯಾತಿ ಪಡೆದಿದ್ದಾರೆ. ಜೊತೆಗೆ ಸಂಸದೆಯಾಗಿ ರಾಜಕೀಯ ರಂಗದಲ್ಲೂ ಸೇವೆ ಸಲ್ಲಿಸಿದ್ದಾರೆ.

2021ರಲ್ಲಿ ತೆರೆಕಂಡ ನಾಗರಹಾವು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡಿದ್ದ ನಟಿ ರಮ್ಯಾ 2023ರಲ್ಲಿ ಬಿಡುಗಡೆಯಾದ ಹಾಸ್ಟೆಲ್ ಹುಡುಗರು ಸಿನಿಮಾ ಮೂಲಕ ಗೆಸ್ಟ್ ಅಪಿಯರೆನ್ಸ್ ಮೂಲಕ ಕಮ್‌ಬ್ಯಾಕ್ ಮಾಡಿದರು. ನಟಿ ರಮ್ಯಾ ಸಿನಿಮಾ ನಿರ್ಮಾಣ ಮಾಡಲು ಕೂಡಾ ತಯಾರಿಯನ್ನ ಮಾಡಿಕೊಂಡಿದ್ದಾರೆ. ಅದರ ಜೊತೆ ಜೊತೆಗೆ ಸಿನಿಮಾದ ಸ್ಕ್ರಿಪ್ಟ್‌ ಆಯ್ಕೆಯಲ್ಲಿ ಬ್ಯುಸಿಯಾಗಿದ್ದಾರೆ.

ಇತ್ತೀಚೆಗೆ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ನಟಿ ರಮ್ಯಾ ಅವರಿಗೆ ಕಥೆಯನ್ನ ರೆಡಿ ಮಾಡಿದ್ದೇನೆ ಎಂದು ಹೇಳಿದ್ದರು. ಅಲ್ಲದೇ ನಟಿ ರಮ್ಯಾ ಕೂಡಾ ಒಂದು ಕಥೆಯನ್ನ ಆಯ್ಕೆ ಮಾಡಿರುವುದಾಗಿ ಹೇಳಿಕೊಂಡಿದ್ದರು. ಸದ್ಯದಲ್ಲಿಯೇ ರಮ್ಯಾ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.