ಮೋಹಕ ತಾರೆ ರಮ್ಯಾ ದಸರಾ ಹಾಗೂ ವಿಜಯದಶಮಿ ಆಚರಣೆ ಮಾಡಿ ಗೋಲ್ಡನ್ ಕಲರ್ ಸ್ಯಾರಿಯಲ್ಲಿ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದ್ದಾರೆ. ಮೈಸೂರು ದಸರಾ ಜಂಬೂ ಸವಾರಿ ಹಾಗೂ ಅರಮನೆಯ ಪೇಂಟಿಂಗ್ ಮುಂದೆ ದಸರಾ ಗೊಂಬೆಯಂತೆ ಪೋಸ್ ಕೊಟ್ಟಿದ್ದಾರೆ.
ಈ ಫೋಟೋಗಳನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿರುವ ರಮ್ಯಾ, ಚೆಂದದ ಸಾಲೊಂದನ್ನು ಕ್ಯಾಪ್ಷನ್ ಕೊಟ್ಟಿದ್ದಾರೆ. ಒಳ್ಳೆಯದು ಮತ್ತು ಕೆಟ್ಟದು, ಸರಿ ಮತ್ತು ತಪ್ಪು ಎಂಬ ದ್ವಂದ್ವತೆಯನ್ನು ಮೀರಿ ದೈವಿಕತೆಯನ್ನು ಮಾತ್ರ ಕಂಡುಕೊಳ್ಳೋಣ ಎಂದು ಬರೆದುಕೊಂಡಿದ್ದಾರೆ.
ಫೋಟೋಗಳಿಗೆ ಮನಸೋತ ಫ್ಯಾನ್ಸ್ ʻಅರೆರೆ ಅಪ್ಸರೆʼ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಫೋಟೋ ಅಪ್ಲೋಡ್ ಆಗಿ 30 ನಿಮಿಷದಲ್ಲೇ ಸುಮಾರು 14,500 ಮಂದಿಯ ಲೈಕ್ ಗಿಟ್ಟಿಸಿಕೊಂಡಿದ್ದಾರೆ.















