ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಬಂಧನಕ್ಕೆ ಒಳಗಾಗಿ ಜೈಲುಪಾಲಾಗಿದ್ದಾರೆ. ಅವರ ವಿರುದ್ಧದ ತನಿಖೆಗೆ ನೇಮಿಸಿದ್ದಂತ ಗೌರವ್ ಗುಪ್ತ ಸಮಿತಿಯು ತನ್ಮ ವರದಿಯನ್ನು ಸಲ್ಲಿಸಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರಿಗೆ ಗೌರವ್ ಗುಪ್ತಾ ನೇತೃತ್ವದ ಸಮಿತಿಯು ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ಸಂಬಂಧ ತನಿಖಾ ವರದಿಯನ್ನು ಸಲ್ಲಿಸಿದೆ.
ಸುಮಾರು 230 ಪುಟಗಳ ಪ್ರಕರಣದ ವರದಿಯಲ್ಲಿ ನಟಿ ರನ್ಯಾ ರಾವ್ ಅವರಿಗೆ ಶಿಷ್ಟಾಚಾರ ಸೌಲಭ್ಯ ನೀಡಲು ಡಿಜಿ ರಾಮಚಂದ್ರ ರಾವ್ ಸೂಚಿಸಿಲ್ಲ. ಆದರೇ ರನ್ಯಾ ರಾವ್ ಪ್ರೋಟೋಕಾಲ್ ಬಳಕೆ ಮಾಡ್ತಿದ್ದದ್ದು ಗೊತ್ತಿತ್ತು ಎಂದು ಹೇಳಿದ್ದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ಸಂಬಂಧ 230 ಪುಟಗಳ ವರದಿಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಲಾಗಿದ್ದು, ಕೇಸ್ ನಲ್ಲಿ ಡಿಜಿ ರಾಮಚಂದ್ರ ರಾವ್ ಪಾತ್ರ ಒಳಗೊಂಡಿರೋದನ್ನು ಉಲ್ಲೇಖಿಸಲಾಗಿದೆ.














