ಬೆಂಗಳೂರು : ದುಬೈ ನಿಂದ ಅಕ್ರಮವಾಗಿ ಚಿನ್ನ ಸಾಗಾಟ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಈಗಾಗಲೇ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಈ ಒಂದು ಪ್ರಕರಣದಲ್ಲಿ ನಟಿ ರನ್ಯಾ ಅವರ ಸ್ನೇಹಿತ ಎನ್ನಲಾದ ಹಾಗೂ ಉದ್ಯಮಿಯ ಪುತ್ರ ತರುಣ್ ರಾಜುಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಡಿಆರ್ ಐ ಕಸ್ಟಡಿ ಅವಧಿ ಮುಗಿದ ಹಿನ್ನೆಲೆ ತರುಣ ರಾಜುವನ್ನು ಅಧಿಕಾರಿಗಳು ಜಡ್ಜ್ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಮನವಿ ಮಾಡಿದ್ದರು.ಈ ಹಿನ್ನೆಲೆ ಇಂದು ಜಡ್ಜ್ ವಿಚಾರಣೆ ನಡೆಸಿ ತರುಣ್ ರಾಜು ಗೆ 14 ದಿನಗಳ ಕಾಲ ನ್ಯಾಯಾಂಗ ಬಂದನಕೆ ನೀಡಿ ಆದೇಶ ನೀಡಿದೆ.
ಉದ್ಯಮಿಯ ಪುತ್ರನಾಗಿರುವ ತರುಣ್ ರಾಜು, ನಟಿ ರನ್ಯಾ ರಾವ್ ಸ್ನೇಹಿತನಾಗಿದ್ದು, ರನ್ಯಾ ರಾವ್ ಳಿಂದ ವಿದೇಶಗಳಿಂದ ಅಕ್ರಮವಾಗಿ ಚಿನ್ನ ತರಿಸುತ್ತಿದ್ದ ಎನ್ನಲಾಗಿದೆ. ತರುಣ್ ರಾಜುನನ್ನು ಆರ್ಥಿಕ ಅಪರಾಧಗಳ ನ್ಯಾಯಾಲಯದ ಜಡ್ಜ್ ಮುಂದೆ ಅಧಿಕಾರಿಗಳು ಹಾಜರುಪಡಿಸಿದ್ದರು.