ಮನೆ ಮನರಂಜನೆ ರಜೆ ಸಿಕ್ತು ಅಂತ ನಟಿ ರಶ್ಮಿಕಾ ಮಂದಣ್ಣ ಶ್ರೀಲಂಕಾ ಪ್ರವಾಸ..!

ರಜೆ ಸಿಕ್ತು ಅಂತ ನಟಿ ರಶ್ಮಿಕಾ ಮಂದಣ್ಣ ಶ್ರೀಲಂಕಾ ಪ್ರವಾಸ..!

0

ಬಾಲಿವುಡ್ ಸಿನಿಮಾ ಇಂಡಸ್ಟ್ರೀಯಲ್ಲಿ ಭಾರಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಇದೀಗ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದಾರೆ. ವಿಶೇಷ ಅಂದ್ರೆ ಇದು ಗರ್ಲ್ಸ್ ಟ್ರಿಪ್. ಬಾಯ್‌ಫ್ರೆಂಡ್ ಜೊತೆ ವಿದೇಶಿ ಪ್ರವಾಸ ಮಾಡುತ್ತಿದ್ದ, ರಶ್ಮಿಕಾ ಇದೀಗ ಭಾರತಕ್ಕೆ ಹತ್ತಿರವಿರುವ ಶ್ರೀಲಂಕಾದ ಸುಂದರ ಜಾಗದಲ್ಲಿ ಗೆಳತಿಯರ ಜೊತೆ ಮಸ್ತಿ ಮಾಡಿದ್ದಾರೆ.

ವಿಶೇಷ ಅಂದರೆ, ರಶ್ಮಿಕಾಗೆ ಎರಡೇ ದಿನ ರಜೆ ಇತ್ತಂತ್ತೆ. ಹೀಗಾಗಿ ಈ ಕಡಿಮೆ ಅವಧಿಯಲ್ಲಿ ಶ್ರೀಲಂಕಾದಲ್ಲಿ ಶಾರ್ಟ್ ಟ್ರಿಪ್ ಮಾಡಿದ್ದಾರೆ ನಟಿ ರಶ್ಮಿಕಾ.‌ ಶೀಘ್ರದಲ್ಲೇ ಮದುವೆಯಾಗ್ತಿರುವ ರಶ್ಮಿಕಾ ಹೀಗೆ ಗೆಳತಿಯರ ಜೊತೆ ಬಿಂದಾಸ್ ಟ್ರಿಪ್ ಮಾಡೋದನ್ನು ನೋಡ್ದವರೆಲ್ಲ ಇದು ಬ್ಯಾಚುಲರ್ ಪಾರ್ಟಿಯಾ ಎಂದು ಕೇಳುತ್ತಿದ್ದಾರೆ.

ಮುಂದಿನ ವರ್ಷ ಫೆಬ್ರವರಿ 26ಕ್ಕೆ ರಶ್ಮಿಕಾ, ವಿಜಯ್ ದೇವರಕೊಂಡ ಮದುವೆ ಫಿಕ್ಸ್ ಆಗಿದ್ದು, ಈಗ ಅದರ ತಯಾರಿಯಲ್ಲೂ ತೊಡಗಿಕೊಂಡಿದ್ದಾರೆ ರಶ್ಮಿಕಾ. ಒಂದರ್ಥದಲ್ಲಿ ಇದು ಬ್ಯಾಚುಲರ್ ಪಾರ್ಟಿ ಥರವೂ ಆಗೋದರಲ್ಲಿ ಅನುಮಾನವಿಲ್ಲ. ರಶ್ಮಿಕಾ ಗರ್ಲ್ಸ್ ಗ್ಯಾಂಗ್ ಜೊತೆ ಜಾಲಿ ಟ್ರಿಪ್ ಮಾಡಲು ಮದುವೆಯಾದ ಬಳಿಕ ಸಮಯ ಸಿಗುವುದು ಕಷ್ಟ. ಹೀಗಾಗಿ ಪ್ರೀಪ್ಲ್ಯಾನ್ ಆಗಿ ರಶ್ಮಿಕಾ ಬೆಸ್ಟ್ ಫ್ರೆಂಡ್ಸ್ ಜೊತೆ ಟ್ರಿಪ್ ಮಾಡಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ಫೋಟೋಸ್ ಪೋಸ್ಟ್ ಮಾಡಿರುವ ರಶ್ಮಿಕಾ ಇತ್ತೀಚೆಗೆ ನನಗೆ 2 ದಿನ ರಜೆ ಸಿಕ್ತು. ಹೀಗಾಗಿ ನನ್ನ ಗರ್ಲ್ಸ್ ಗ್ಯಾಂಗ್ ಜೊತೆ ಸಮಯ ಕಳೆಯಲು ಅವಕಾಶ ಸಿಕ್ತು. ಶ್ರೀಲಂಕಾದ ಸುಂದರ ತಾಣಗಳಲ್ಲಿ ನಾವು ಸಮಯ ಕಳೆದೆವು. ಗರ್ಲ್ಸ್ ಟ್ರಿಪ್ ಎಷ್ಟೇ ಚಿಕ್ಕದಾಗಿದ್ರೂ ಅದು ಅತ್ಯುತ್ತಮವಾಗಿರುತ್ತದೆ. ಈ ಗುಂಪಿನಲ್ಲಿ ಕೆಲವರು ಮಿಸ್ ಆಗಿದ್ದಾರೆ. ಅವರೂ ಬೆಸ್ಟ್ ಫ್ರೆಂಡ್ಸ್. ಗರ್ಲ್ಸ್ ಟ್ರಿಪ್ ಯಾವಾಗ್ಲೂ ಬೆಸ್ಟ್ ಎಂದು ಹೇಳುತ್ತಾ ತಮ್ಮ ಪ್ರವಾಸದ ಖುಷಿಯನ್ನ ಪದಗಳ ಮೂಲಕ ಹಾಡಿ ಹೊಗಳಿದ್ದಾರೆ.