ಉಡುಗೆ ತೊಡುಗೆ ವಿಚಾರದಲ್ಲಿ ನಟಿ ಸಾಯಿಪಲ್ಲವಿ ಸಾಮಾನ್ಯರಲ್ಲಿ ಸಾಮಾನ್ಯ ಹುಡುಗಿಯಂತೆ ಇರೋದು ವಾಡಿಕೆ. ನೋ ಮೇಕಪ್, ನೋ ಗ್ಲ್ಯಾಮರ್ ಡ್ರೆಸ್ ಅನ್ನೋದು ಸಾಯಿಪಲ್ಲವಿ ಪಾಲಿಸಿ. ಆದರೆ ಇದೀಗ ತಂಗಿ ಮಾಡಿರೋ ಯಡವಟ್ಟಿನಿಂದ ಸಾಯಿಪಲ್ಲವಿ ಬಟ್ಟೆ ವಿಚಾರದಲ್ಲಿ ಟ್ರೋಲ್ ಆಗಿದ್ದಾರೆ. ಸಾಯಿಪಲ್ಲವಿ ಸ್ವಿಮ್‌ಸೂಟ್ ಧರಿಸಿರುವ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದೆ.
ಅನೇಕರು ಉದ್ದೇಶಪೂರ್ವಕವಾಗಿ ಸ್ವಿಮ್‌ಸೂಟ್ ಧರಿಸಿ ಫೋಟೋ ಪೋಸ್ಟ್ ಮಾಡುವಂತೆ ಸಾಯಿಪಲ್ಲವಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಲ್ಲ. ಸಾಯಿಪಲ್ಲವಿ ತಂಗಿ ಪೂಜಾ ಕಣ್ಣನ್ ಹಾಕಿರುವ ಪೋಸ್ಟ್ ಸಾಯಿಪಲ್ಲವಿಯನ್ನು ಇಣುಕಿ ನೋಡುವಂತೆ ಮಾಡಿದೆ. ಬೀಚ್‌ನಲ್ಲಿ ಅಕ್ಕ ಸಾಯಿಪಲ್ಲವಿ ತಂಗಿ ಪೂಜಾ ವೆಕೇಷನ್ ಎಂಜಾಯ್ ಮಾಡಿದ್ದು, ಇದರ ಕ್ಲೋಸ್‌ಅಪ್ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಫೋಟೋಗಳಲ್ಲಿ ಎಲ್ಲಿಯೂ ಸಾಯಿಪಲ್ಲವಿ ಮೈಕಾಣುವಂತೆ ಪೋಸ್ ನೀಡಿಲ್ಲ. ಇಷ್ಟಾದ್ರೂ ಟ್ರೋಲ್ ಆಗೋಕೆ ಕಾರಣ ಸಾಯಿಪಲ್ಲವಿ ಬೀಚ್‌ವೇರ್ ಅಥವಾ ಸ್ವಿಮ್‌ಸೂಟ್ ಧರಿಸಿದ್ದಾರೆ ಅನ್ನೋದು. ಗ್ಲ್ಯಾಮರ್ ಬಟ್ಟೆ ಇರಲಿ ಕೊನೆ ಪಕ್ಷ ಸ್ಲೀವ್‌ಲೆಸ್ ಡ್ರೆಸ್‌ನಲ್ಲೂ ಸಾಯಿಪಲ್ಲವಿ ಕಾಣಿಸಿಕೊಳ್ಳೋದು ವಿರಳ. ಆದರೆ ಬೀಚ್‌ನಲ್ಲಿ ಎಂಥಹ ಉಡುಗೆ ಧರಿಸಬೇಕೋ ಅಂಥಹ ಉಡುಗೆ ಧರಿಸಿದ್ದಾರೆ ಸಾಯಿಪಲ್ಲವಿ. ಇಷ್ಟಕ್ಕೇ ಸಾಯಿಪಲ್ಲವಿ ಫೋಟೋಗೆ ಕೆಟ್ಟ ಕಾಮೆಂಟ್‌ಗಳು ಬಂದಿದೆ.
ಕಾಮೆಂಟ್ ಬಾಕ್ಸ್‌ನಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಆದರೆ ಇದು ಬೀಚ್‌ನಲ್ಲಿ ಸಾಮಾನ್ಯ ಉಡುಗೆಯಾಗಿದ್ದು ಇಷ್ಟಕ್ಕೇ ರಾಮಾಯಣದ ಸೀತೆ ಪಾತ್ರಧಾರಿ ಸಾಯಿಪಲ್ಲವಿಯನ್ನ ಗುರಿ ಮಾಡಿ ಕಾಮೆಂಟ್ ಮಾಡ್ತಿರೋದು ಖಂಡನೀಯ ಎಂಬ ಕಾಮೆಂಟ್ ಕೂಡ ಬಂದಿದೆ. ಒಟ್ಟಿನಲ್ಲಿ ತಂಗಿ ಮಾಡಿರೋ ಚಿಕ್ಕ ತಪ್ಪಿಗೆ ಅಕ್ಕ ಸಾಯಿಪಲ್ಲವಿ ದಂಡ ತೆರುವ ಪ್ರಸಂಗ ನಡೆದಿದೆ.














