ಮನೆ ಮನರಂಜನೆ ‘ಆದಿಪುರುಷ್​’ ಮಳೆ ನಡುವೆಯೂ ಹಲವು ಕಡೆಗಳಲ್ಲಿ ಹೌಸ್​ಫುಲ್​

‘ಆದಿಪುರುಷ್​’ ಮಳೆ ನಡುವೆಯೂ ಹಲವು ಕಡೆಗಳಲ್ಲಿ ಹೌಸ್​ಫುಲ್​

0

ಜೂನ್​ 16ರಂದು ತೆರೆಕಂಡ ‘ಆದಿಪುರುಷ್​’ ಸಿನಿಮಾ (Adipurush Movie) ಹೇಳಿಕೊಳ್ಳುವಂತಹ ಕಲೆಕ್ಷನ್​ ಮಾಡಿಲ್ಲ. ಈ ಚಿತ್ರಕ್ಕೆ ಪ್ರೇಕ್ಷಕರಿಂದ ನೆಗೆಟಿವ್​ ಪ್ರತಿಕ್ರಿಯೆ ಸಿಕ್ಕಿದ್ದೇ ಹೆಚ್ಚು. ಓಂ ರಾವತ್​ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಪ್ರಭಾಸ್​ (Prabhas) ಅವರ ಅಭಿಮಾನಿಗಳು ‘ಆದಿಪುರುಷ್​’ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು.

Join Our Whatsapp Group

ಆದರೆ ಆ ನಿರೀಕ್ಷೆಯ ಮಟ್ಟವನ್ನು ತಲುಪಲು ಈ ಸಿನಿಮಾಗೆ ಸಾಧ್ಯವಾಗಲಿಲ್ಲ. ರಾಮಾಯಣದ ಕಥೆಯನ್ನು ಆಧರಿಸಿ ಈ ಸಿನಿಮಾದಲ್ಲಿ ಅನೇಕ ತಪ್ಪುಗಳು ಇವೆ ಎಂಬುದನ್ನು ಪ್ರೇಕ್ಷಕರು ಪತ್ತೆ ಹೆಚ್ಚಿದರು. ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದರಿಂದ ಸಿನಿಮಾದ ಕಲೆಕ್ಷನ್​ ಮೇಲೆ ಪರಿಣಾಮ ಬೀರಿತು. ಆದರೆ ಅಚ್ಚರಿ ಎಂಬಂತೆ ಎರಡನೇ ವೀಕೆಂಡ್​ನಲ್ಲಿ ‘ಆದಿಪುರುಷ್​’ ಕಲೆಕ್ಷನ್​ ಕೊಂಚ ಸುಧಾರಿಸಿದೆ. ಜೂನ್​ 24ರಂದು ಹಲವು ಕಡೆಗಳಲ್ಲಿ ಹೌಸ್​ಫುಲ್​ ಆಗಿದೆ.

ಎರಡನೇ ವೀಕೆಂಡ್​ನಲ್ಲಿ ‘ಆದಿಪುರುಷ್​’ ಸಿನಿಮಾ ಸಂಪೂರ್ಣವಾಗಿ ತನ್ನ ಆಟ ನಿಲ್ಲಿಸಲಿದೆ ಎಂದು ಕೆಲವರು ಊಹಿಸಿದ್ದರು. ಆದರೆ ಆ ರೀತಿ ಆಗಿಲ್ಲ. ಮೊದಲ ವಾರದಲ್ಲಿ ಸಿನಿಮಾ ನೋಡಲು ಸಾಧ್ಯವಾಗದೇ ಇರುವವರು 2ನೇ ವೀಕೆಂಡ್​ನಲ್ಲಿ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಇದರಿಂದ ಜೂನ್​ 24ರಂದು ಈ ಸಿನಿಮಾದ ಕಲೆಕ್ಷನ್​ ಸ್ವಲ್ಪ ಏರಿಕೆ ಆಗಿದೆ. ಭಾನುವಾರ (ಜೂನ್​ 25) ಕೂಡ ಇದೇ ರೀತಿ ಹೌಸ್​ಫುಲ್​ ಆದರೆ ಚಿತ್ರದ ಟೋಟಲ್​ ಗಳಿಕೆ ಹೆಚ್ಚಾಗಲಿದೆ.

ಹೈದರಾಬಾದ್​ನಲ್ಲಿ ಶನಿವಾರ ಸಿಕ್ಕಾಪಟ್ಟೆ ಮಳೆ ಸುರಿದಿದೆ. ಮಳೆಯ ರಭಸಕ್ಕೆ ಅನೇಕ ರಸ್ತೆಗಳು ಜಲಾವೃತಗೊಂಡಿವೆ. ಟ್ರಾಫಿಕ್​ ಸವಾರರು ತುಂಬ ಸಮಸ್ಯೆ ಎದುರಿಸಿದ್ದಾರೆ. ಅಚ್ಚರಿ ಏನೆಂದರೆ ಈ ಪರಿ ಮಳೆಯ ನಡುವೆಯೂ ‘ಆದಿಪುರುಷ್​’ ಸಿನಿಮಾ ಅನೇಕ ಕಡೆಗಳಲ್ಲಿ ಹೌಸ್​ಫುಲ್​ ಆಗಿದೆ. ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಲು ಜನರು ಬಯಸುತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ. ಇನ್ನೂ ಅನೇಕರು ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡುವುದಕ್ಕಾಗಿ ಕಾದಿದ್ದಾರೆ. ‘ಅಮೇಜಾನ್ ಪ್ರೈಂ ವಿಡಿಯೋ’ ಮೂಲಕ ‘ಆದಿಪುರುಷ್​’ ಚಿತ್ರ ಒಟಿಟಿಗೆ ಬರಲಿದೆ. ಆದರೆ ದಿನಾಂಕ ಇನ್ನೂ ನಿಗದಿ ಆಗಿಲ್ಲ.

‘ಆದಿಪುರುಷ್​’ ಸಿನಿಮಾ ಭಾರತದ ಮಾರುಕಟ್ಟೆಯಲ್ಲಿ 268 ಕೋಟಿ ರೂಪಾಯಿ ಮಾಡಿದೆ. ವಿಶ್ವಾದ್ಯಂತ ಇದರ ಗಳಿಕೆ 386 ಕೋಟಿ ರೂಪಾಯಿ ಆಗಿದೆ. ಈ ಸಿನಿಮಾದ ಬಜೆಟ್​ ದುಬಾರಿ ಆಗಿರುವುದರಿಂದ ಚಿತ್ರಮಂದಿರದಲ್ಲಿ ಆಗಿರುವ ಈ ಕಲೆಕ್ಷನ್​ ತೃಪ್ತಿದಾಯಕವಾಗಿಲ್ಲ. ಪ್ರಭಾಸ್​ ಅವರು ಈ ಸಿನಿಮಾದಲ್ಲಿ ರಾಮನ ಪಾತ್ರ ಮಾಡಿದ್ದಾರೆ. ಸೀತೆಯಾಗಿ ಕೃತಿ ಸನೋನ್ ಅವರು ನಟಿಸಿದ್ದಾರೆ. ರಾವಣನಾಗಿ ಸೈಫ್​ ಅಲಿ ಖಾನ್​, ಲಕ್ಷ್ಮಣನಾಗಿ ಸನ್ನಿ ಸಿಂಗ್​, ಆಂಜನೇಯನಾಗಿ ದೇವದತ್ತ ನಾಗೆ ಅಭಿನಯಿಸಿದ್ದಾರೆ. ಈ ಚಿತ್ರದಿಂದ ನಿರ್ದೇಶಕ ಓಂ ರಾವತ್​ ಅವರು ಸಖತ್​ ಟ್ರೋಲ್​ಗೆ ಒಳಗಾಗಿದ್ದಾರೆ.

ಹಿಂದಿನ ಲೇಖನಕಾಂಗ್ರೆಸ್ 5 ಗ್ಯಾರಂಟಿ ಯೋಜನೆಗಳ ಭರವಸೆ ಈಡೇರಿಸದಿದ್ದರೆ ವಿಧಾನಸೌಧದಲ್ಲಿ ಪ್ರತಿಭಟನೆಯ ಎಚ್ಚರಿಕೆ: ಮಾಜಿ ಸಿಎಂ ಯಡಿಯೂರಪ್ಪ
ಮುಂದಿನ ಲೇಖನಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಏಷ್ಯಾಕಪ್ ಆಡುವುದು ಅನುಮಾನ!