ಮನೆ ರಾಷ್ಟ್ರೀಯ ಸೂರ್ಯನ ಅಪರೂಪದ ಚಿತ್ರ ಸೆರೆಹಿಡಿದು ಭೂಮಿಗೆ ರವಾನಿಸಿದ ಆದಿತ್ಯ ಎಲ್​-1: ಇಸ್ರೋ

ಸೂರ್ಯನ ಅಪರೂಪದ ಚಿತ್ರ ಸೆರೆಹಿಡಿದು ಭೂಮಿಗೆ ರವಾನಿಸಿದ ಆದಿತ್ಯ ಎಲ್​-1: ಇಸ್ರೋ

0

ಹೈದರಾಬಾದ್: ಸೌರ ಅಧ್ಯಯನಕ್ಕಾಗಿ ಹಾರಿ ಬಿಡಲಾದ ಭಾರತದ ಆದಿತ್ಯ ಎಲ್ 1 ಮಿಷನ್ ಮೊದಲ ಬಾರಿಗೆ ಸೂರ್ಯನ ಚಿತ್ರಗಳನ್ನು ಸೆರೆ ಹಿಡಿದು ಕಳುಹಿಸಿದೆ.

ಅಲ್ಟ್ರಾವೈಲೆಟ್ ತರಂಗಾಂತರದ ಬಳಿಯ ಈ ಫೋಟೋಗಳಿಂದ ಸೂರ್ಯನ ಫೋಟೋಸ್ಪಿಯರ್ (ದ್ಯುತಿಗೋಳ) ಹಾಗೂ ಕ್ರೋಮೋಸ್ಪಿಯರ್ ಸಂಕೀರ್ಣವಾದ ಒಳನೋಟಗಳನ್ನು ಇದು ಒದಗಿಸುತ್ತದೆ ಎಂದು ಇಸ್ರೋ ತಿಳಿಸಿದೆ.

ಎಸ್‌ ಯುಐಟಿ ಸೆರೆಹಿಡಿದಿರುವ ಚಿತ್ರಗಳನ್ನು ಹಂಚಿಕೊಂಡಿದೆ. ಇದು ಸೌರ ವೀಕ್ಷಣೆ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಪ್ರಮುಖ ಮೈಲಿಗಲ್ಲು ಎಂದು ಬಣ್ಣಿಸಲಾಗುತ್ತಿದೆ.

200 ರಿಂದ 400 ನ್ಯಾನೊಮೀಟರ್‌ಗಳ ತರಂಗಾಂತರ ವ್ಯಾಪ್ತಿಯಲ್ಲಿ ಎಸ್‌ ಯುಐಟಿ ಸೆರೆಹಿಡಿದಿರುವ ಚಿತ್ರಗಳು ಸೂರ್ಯನ ದ್ಯುತಿಗೋಳ ಮತ್ತು ವರ್ಣಗೋಳದ ಬಗ್ಗೆ ಅಭೂತಪೂರ್ವ ಮಾಹಿತಿಯನ್ನು ಒದಗಿಸುತ್ತವೆ. ಸೂರ್ಯನ ಗೋಚರಿಸುವ ‘ಮೇಲ್ಮೈ’ಯನ್ನು ದ್ಯುತಿಗೋಳ ಎಂದು ಕರೆಯಲಾಗುತ್ತದೆ. ಅದರ ಮೇಲಿರುವ ಪಾರದರ್ಶಕ ಪದರವನ್ನು ಕ್ರೋಮೋಸ್ಪಿಯರ್ ಎಂದು ಕರೆಯಲಾಗುತ್ತದೆ.

ಸೂರ್ಯನ ಈ ಪದರಗಳು ಸೂರ್ಯನ ಕಲೆಗಳು ಮತ್ತು ಜ್ವಾಲೆಗಳು ಸೇರಿದಂತೆ ವಿವಿಧ ಸೌರ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಲು ಇದು ಮುಖ್ಯವಾಗಿದೆ. ಇದು ಬಾಹ್ಯಾಕಾಶ ಹವಾಮಾನ ಮತ್ತು ಭೂಮಿಯ ಹವಾಮಾನದ ಮೇಲೆ ಆಳವಾದ ಪರಿಣಾಮಗಳನ್ನು ಬೀರುತ್ತದೆ.

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ರಾಕೆಟ್, ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್-XL (PSLV-XL) ಮೂಲಕ ಆದಿತ್ಯ-L1 ಅನ್ನು ಸೆಪ್ಟೆಂಬರ್ 2 ರಂದು ಉಡಾವಣೆ ಮಾಡಲಾಗಿತ್ತು.

ಆದಿತ್ಯ ಎಲ್​1 ಅನ್ನು ಭೂಮಿಯ ಕಕ್ಷೆಯಿಂದ ಹೊರಕ್ಕೆ ತೆಗೆದುಕೊಂಡು ಹೋಗಿ ಲ್ಯಾಗ್ರೇಂಜ್ 1ರಲ್ಲಿ (ಭೂಮಿಯ ಮತ್ತು ಸೂರ್ಯನ ಗುರುತ್ವಾಕರ್ಷಣೆಯು ಪರಸ್ಪರ ಶೂನ್ಯವಾಗಿರುವ ಬಿಂದುವನ್ನು ಲ್ಯಾಗ್ರೇಂಜ್ ಬಿಂದು 1 ಅಥವಾ ಎಲ್​​1 ಎಂದು ಕರೆಯಲಾಗುತ್ತದೆ) ಸ್ಥಾಪಿಸಲಾಗಿದೆ. ಅಲ್ಲಿದ್ದುಕೊಂಡು ಈ ಉಪಗ್ರಹವು ಸೂರ್ಯ ಬಗ್ಗೆ ಅನ್ವೇಷಣೆ ನಡೆಸುತ್ತಿದೆ. ಸೂರ್ಯನ ಮೇಲ್ಮೈ, ಸೂರ್ಯನ ಕಿರಣ, ತಾಪಮಾನ, ಸೌರಜ್ವಾಲೆ, ಸೂರ್ಯನ ಸುತ್ತಲಿನ ವಾತಾವರಣದ ಬಗ್ಗೆ ಆದಿತ್ಯ ಎಲ್​-1 ಅಧ್ಯಯನ ನಡೆಸುತ್ತಿದೆ.