ಮನೆ ರಾಷ್ಟ್ರೀಯ ಆದಿತ್ಯ L-1 ಉಡಾವಣೆ ಯಶಸ್ವಿ

ಆದಿತ್ಯ L-1 ಉಡಾವಣೆ ಯಶಸ್ವಿ

0

ಶ್ರೀಹರಿಕೋಟಾ(ಆಂಧ್ರಪ್ರದೇಶ): ಭಾರತದ ಡ್ರೀಮ್​ ಪ್ರಾಜೆಕ್ಟ್​ ಆದಿತ್ಯಾ ಎಲ್​ 1 ರಾಕೆಟ್​ ಯಶಸ್ವಿಯಾಗಿ ಕಕ್ಷೆಗೆ ಉಡಾವಣೆಗೊಂಡಿದೆ. ಆಂಧ್ರಪ್ರದೇಶದ ಶ್ರೀ ಹರಿಕೋಟಾದಿಂದ ಆದಿತ್ಯ ಎಲ್​ 1 ಅನ್ನು ಸರಿಯಾಗಿ 11:50ಕ್ಕೆ ಉಡ್ಡಯನ ಮಾಡಲಾಯಿತು.

ಶ್ರೀ ಹರಿಕೋಟಾ ಉಡ್ಡಯನ ಕೇಂದ್ರದಲ್ಲಿ ಆದಿತ್ಯ ಎಲ್​ -1 ಮಿಷನ್​ನ ತಂತ್ರಜ್ಞರು, ಇಸ್ರೋ ಅಧ್ಯಕ್ಷ ಸೋಮನಾಥ್​, ಕೇಂದ್ರ ಸಚಿವ ಹಾಗೂ ಇನ್ನಿತರ ಇಸ್ರೋ ವಿಜ್ಞಾನಿಗಳು ಈ ಉಡ್ಡಯನಕ್ಕೆ ಸಾಕ್ಷಿಯಾದರು.

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತದ ಮಹತ್ವಕಾಂಕ್ಷೆಯ ಆದಿತ್ಯ ಎಲ್‌1 ನೌಕೆಯನ್ನ ಇಸ್ರೋ ಉಡಾವಣೆ ಮಾಡಿದ್ದು, ಆದಿತ್ಯ ಎಲ್-1  ಹೊತ್ತು ಪಿಎಸ್ ಎಲ್ ವಿ C-57 ಸೂರ್ಯನತ್ತ ಹೊರಟಿದೆ.

ಆದಿತ್ಯ ಎಲ್1 ನೌಕೆ, ಒಟ್ಟು 7 ವೈಜ್ಞಾನಿಕ ಉಪಕರಣಗಳನ್ನ ಹೊತ್ತು ಸೂರ್ಯಶೋಧಕ್ಕೆ  ಹೊರಟಿದೆ.  ಇದರಲ್ಲಿ ಮೂರು ಉಪಕರಣಗಳು ಸೂರ್ಯನನ್ನು ನೋಡುತ್ತಾ ವಿವಿಧ ಭಾಗಗಳ ಅಧ್ಯಯನ ಮಾಡುತ್ತೆ. ಉಳಿದ ಮೂರು ಉಪಕರಣಗಳು, ಸೂರ್ಯನಿಂದ ಬರುವ ವಿಕಿರಣ ಮತ್ತು ವಸ್ತುಗಳನ್ನು ಅಳತೆ ಮಾಡುವ ಕೆಲಸ ಮಾಡುತ್ತೆ. ವಿಶೇಷ ಅಂದ್ರೆ ಆದಿತ್ಯ ಎಲ್‌1ನಲ್ಲಿರುವ ಉಪಕರಣಗಳು ಎಲ್‌1 ಪಾಯಿಂಟ್‌ ನಲ್ಲೇ ಸುತ್ತುತ್ತಾ ಕೃತಕ ಗ್ರಹಣ ಕೂಡ ಸೃಷ್ಟಿಸಬಲ್ಲವು ಎನ್ನಲಾಗಿದೆ.

ಹಿಂದಿನ ಲೇಖನಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ: 2.38 ಕೋಟಿ ರೂ. ಸಂಗ್ರಹ
ಮುಂದಿನ ಲೇಖನವಿಚ್ಛೇದನಕ್ಕೆ ಮೊದಲು ಮರುಮದುವೆ ಕೇವಲ ದ್ವಿಪತ್ನಿತ್ವ ಮಾತ್ರವಲ್ಲ, ಅತ್ಯಾಚಾರ : ಹೈಕೋರ್ಟ್