ಬೆಂಗಳೂರು: ಇಸ್ರೋದ ಮಹತ್ವಾಕಾಂಕ್ಚಿ ಚಂದ್ರಯಾನ-3 ಯಶಸ್ವಿಯಾದ ಬೆನ್ನಲ್ಲೇ ಸೂರ್ಯನನ್ನು ಅಧ್ಯಯನ ನಡೆಸಲು ಇಸ್ರೋ ಸಿದ್ದತೆ ನಡೆಸಿದೆ.
ಸೆಪ್ಟೆಂಬರ್ 2 ರಂದು ಶನಿವಾರ ಬೆಳಿಗ್ಗೆ 11.50ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ಆದಿತ್ಯ ಎಲ್–1’ ಅನ್ನು ಉಡಾವಣೆ ಮಾಡುವುದಾಗಿ ಇಸ್ರೊ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ
ಸೂರ್ಯನನ್ನು ಅಧ್ಯಯನ ಮಾಡಲು ಮೊದಲ ಬಾಹ್ಯಾಕಾಶ-ಆಧಾರಿತ ಭಾರತೀಯ ವೀಕ್ಷಣಾಲಯ ನೌಕೆಯ ಹಾರಾಟವನ್ನು ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದಿಂದ ಬೆಳಗ್ಗೆ 11:50 ಗಂಟೆಗೆ ನಿಗದಿಪಡಿಸಲಾಗಿದೆ.
https://lvg.shar.gov.in/VSCREGISTRATION/index.jsp ನಲ್ಲಿ ನೋಂದಾಯಿಸುವ ಮೂಲಕ ಶ್ರೀಹರಿಕೋಟಾದ ಲಾಂಚ್ ವ್ಯೂ ಗ್ಯಾಲರಿಯಿಂದ ಲಾಂಚ್ ಮಾಡುವುದನ್ನು ವೀಕ್ಷಿಸಲು ನಾಗರಿಕರನ್ನು ಆಹ್ವಾನಿಸಲಾಗಿದೆ. ನೋಂದಣಿಯ ಪ್ರಾರಂಭವನ್ನು https://isro.gov.in/Aditya_L1.htmlಅಲ್ಲಿ ಪ್ರಕಟಿಸಲಾಗುತ್ತದೆ ಎಂದು ಇಸ್ರೋ ಹೇಳಿದೆ.
ಹತ್ತು ಸೆಂ.ಮೀ.ವರೆಗೆ ಆಳಕ್ಕೆ ಪ್ರಗ್ಯಾನ್ ರೋವರ್‌ನಲ್ಲಿ ಅಳವಡಿಸಲಾಗಿರುವ “ಚಂದ್ರಾ’ಸ್ ಸರ್ಫೆಸ್ ಥರ್ಮೋಫಿಸಿಕಲ್ ಎಕ್ಸ್‌ಪರಿಮೆಂಟ್’ ‘ (Chandra’s Surface Thermophysical Experiment -ChaSTE) ಸಲಕರಣೆಯು ಚಂದ್ರನ ದಕ್ಷಿಣ ಧ್ರುವದ ನೆಲದಲ್ಲಿ ಹತ್ತು ಸೆಂ.ಮೀ.ವರೆಗೆ ಆಳಕ್ಕೆ ರಂಧ್ರ ಕೊರೆದು ಪರೀಕ್ಷಿಸಿದೆ. ಅಷ್ಟು ಆಳ ಹಾಗೂ ಅದಕ್ಕೆ ಸಮೀಪದ ಸ್ತರಗಳಲ್ಲಿ ತಾಪಮಾನ ವ್ಯತ್ಯಾಸ ದೃಢಪಟ್ಟಿದೆ. ಈ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಅಧ್ಯಯನ ನಡೆಸಿದ ಬಳಿಕ ಸಮಗ್ರ ವಿವರ ನೀಡಲು ಸಾಧ್ಯ ಎಂದು ಇಸ್ರೋ ಹೇಳಿದೆ.