ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಗಣಿ ಬಸಳ್ಳಿ ಗ್ರಾಮದಲ್ಲಿ ಗಂಡನ ಅನೈತಿಕ ಸಂಬಂಧಕ್ಕೆ 4 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಹೆಂಡತಿ ಬಲಿಯಾದ ಘಟನೆ ನಡೆದಿದೆ.
ಭಾರತಿ(20) ಹತ್ಯೆಯಾದ ಮಹಿಳೆಯಾಗಿದ್ದು, ಗಂಡ ಮಂಜುನಾಥನ ಪ್ರಿಯತಮೆ ಮನೆಯ ಹಿಂಭಾಗದ ಹೊಲದಲ್ಲಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆ.
ಭಾರತಿಯ ಮದುವೆ ಕಳೆದ 4ತಿಂಗಳ ಹಿಂದಷ್ಟೆ ಮಂಜುನಾಥ್ ಎಂಬುವವನೊಂದಿಗೆ ನೆರೆವೇರಿತ್ತು. ಆದರೆ ಮದುವೆಯಾಗುವುದಕ್ಕಿಂತ ಮುಂಚೆನೆ ಮಂಜುನಾಥನಿಗೆ ಕಾಂತಾ ಎಂಬ ಮಹಿಳೆಯ ಜೊತೆ ಅನೈತಿಕ ಸಂಬಂಧ ಇತ್ತು.
ಇನ್ನು ಮಂಜುನಾಥ್ ಮದುವೆಯಾದ ವಿಷಯ ತಿಳಿಯುತ್ತದ್ದಂತೆ ಕಾಂತಾ ಪ್ರಿಯತಮನ ಮನೆಗೆ ಬಂದು ಆತನ ಹೆಂಡತಿ ಭಾರತಿಯನ್ನು ಮನೆಯ ಹಿಂಭಾಗದ ಹೊಲಕ್ಕೆ ಕರೆದುಕೊಂಡು ಹೋಗಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಹತ್ಯೆಮಾಡಿದ ಬಳಿಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾಳೆ.
ತನ್ನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡು ಆಕೆಯನ್ನು ಮದುವೆಯಾಗಿದಕ್ಕೆ ಕೊಲೆಮಾಡಿದ್ದಾಗಿ ಕಾಂತಾ ಪೊಲೀಸರ ಬಳಿ ಹೇಳಿದ್ದಾಳೆ.
ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.














