ಮನೆ ಅಪರಾಧ ಅನೈತಿಕ ಸಂಬಂಧ ಶಂಕೆ: ಪತ್ನಿಯನ್ನು ಕೊಂದ ಪತಿ

ಅನೈತಿಕ ಸಂಬಂಧ ಶಂಕೆ: ಪತ್ನಿಯನ್ನು ಕೊಂದ ಪತಿ

0

ಬೆಂಗಳೂರು(Bengaluru): ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆಂಬ ಅನುಮಾನ ಹೊಂದಿದ್ದ ಪತಿ ಆಕೆಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ಸಿ ಪಾಳ್ಯದಲ್ಲಿ ನಡೆದಿದೆ.

ನ್ಯಾನ್ಸಿ ಪ್ಲೋರಾ(29) ಮೃತ ಗೃಹಿಣಿ ಎಂದು ಗುರುತಿಸಲಾಗಿದೆ. ಆರೋಪಿ ಪತಿ ಜಾನ್ ಸುಪ್ರಿತ್​ನನ್ನು ಬಂಧಿಸಲಾಗಿದೆ.

ಶಾಮಿಯಾನ ಹಾಕುವ ಉದ್ಯಮ ಮಾಡುತ್ತಿದ್ದ ಜಾನ್ ಸುಪ್ರಿತ್ ಕಳೆದ ಎಂಟು ವರ್ಷಗಳ ಹಿಂದೆ ನ್ಯಾನ್ಸಿ ಪ್ಲೋರಾಳನ್ನು ಮದುವೆಯಾಗಿದ್ದ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅನೈತಿಕ ಸಂಬಂಧದ ಅನುಮಾನದಲ್ಲಿ ಮನೆಯಲ್ಲಿ ಆಗಾಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ನಿನ್ನೆ ಸಂಜೆ ಸುಮಾರು 6 ಗಂಟೆಗೆ ಪತ್ನಿಯ ಕತ್ತು ಸೀಳಿ ಕೊಲೆಮಾಡಿದ್ದಾನೆ.

ಆರೋಪಿಯನ್ನು ಬಂಧಿಸಿರುವ ಕೆ.ಆರ್.ಪುರಂ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಹಿಂದಿನ ಲೇಖನಭಾರತ್ ಜೋಡೊ ಯಾತ್ರೆಯ ಲೋಗೊ, ವೆಬ್’ಸೈಟ್ ಬಿಡುಗಡೆ
ಮುಂದಿನ ಲೇಖನಬಿಲ್ಕಿಸ್ ಬಾನು ಪ್ರಕರಣ: ಅತ್ಯಾಚಾರ ಅಪರಾಧಿಗಳನ್ನು ಅಭಿನಂದಿಸುವುದು ಕೆಟ್ಟ ಅಭಿರುಚಿ