ಪ್ರಾಚೀನ ಕಾಲದಲ್ಲಿ ಕೆಲವು ಆಯುರ್ವೇದ ಪಂಡಿತರು ಯೋಗ ಮತ್ತು ಕುಂಡಲಿಯನ್ನು ವೈದ್ಯ ವೃತ್ತಿಯಲ್ಲಿ ಅಳವಡಿಸಿಕೊಂಡಿದ್ದರು. ಅವರು ದೇಹದ ಉಸಿರಾಟ ಮತ್ತು ನರವ್ಯೂಹಕ್ಕೆ ಹತ್ತಿರದ ಸಂಬಂಧವನ್ನು ಕಲ್ಪಿಸಿದರು. ಆದುದರಿಂದ ಪ್ರಾಣಾಯಾಮವು ನರಗಳ ವ್ಯವಸ್ಥೆ, ನೆನಪಿನ ಶಕ್ತಿ ಮತ್ತು ಬುದ್ಧಿ ಶಕ್ತಿ ಹೆಚ್ಚಿಸುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. ಅದಕ್ಕಾಗಿ ಶ್ವಾಸಕೋಶವು ಆರೋಗ್ಯಕರವಾಗಿರಬೇಕಾದುದು ಬಹಳ ಮುಖ್ಯ. ಆಗ ಆಡುಸೋಗೆಯ ಬಳಕೆಯ ಕುರಿತು ಯೋಚಿಸಲಾರಮಿಸಿದರು ಮತ್ತು ಪ್ರಯೋಗಿಸಲಾರಂಭಿಸಿದರು. ಸಾಮಾನ್ಯವಾಗಿ ಆಡುಸೋಗೆಯನ್ನು ಮನೆಯ ಸುತ್ತಲೂ ಬೇಲಿಯಂತೆ ಬೆಳೆಯಲಾಗುತ್ತದೆ. ಇದರ ನಂಜು ನಿರೋಧಕ ಗುಣದಿಂದಾಗಿ ಇದನ್ನು ‘ವಾಸ ಸ್ಥಳವನ್ನು ಕಾಪಾಡುವವರು ’ಎಂದು ಕರೆಯುತ್ತಾರೆ. 5ನೇ ಶತಮಾನದಲ್ಲಿಯೇ ಅಡುಸೋಗೆಯನ್ನು ಶ್ವಾಸಕೋಶದ ತೊಂದರೆ ಮತ್ತು ಕ್ಷಯರೋಗಕ್ಕೆ ಬಳಸಬಹುದೆಂದು ಬುದ್ಧನ ಅಭಿಪ್ರಾಯವಾಗಿತ್ತು. ಸಂಸ್ಕೃತದ ಸ್ವಚ್ಛಶಾಸ್ತ್ರದಲ್ಲಿ ಹೂಗಳ ಬಣ್ಣ ಮತ್ತು ಆಕಾರದಿಂದಾಗಿ ಇದನ್ನು ಸಿಂಹದ ಮುಖಕ್ಕೆ ಮತ್ತು ಗಂಡು ಕುದುರೆಯ ಹಲ್ಲಿಗೆ ಹೋರಿಸಿದ್ದಾರೆ ಇತ್ತೀಚಿನ ದಿನಗಳಲ್ಲಿ ಆಡುಸೋಗೆಯನ್ನು ಸ್ತ್ರೀಯರಲ್ಲಿನ ಮಾನಸಿಕ ಸ್ರಾವದ ತೊಂದರೆಗೂ ಬಳಸಲಾಗುತ್ತಿದ್ದು ಅಶೋಕ ಮರಕ್ಕಿರುವಷ್ಟೇ ಮಹತ್ವ ಆಡುಸೋಗೆಗೂ ಇರುವುದು ದೃಢಪಟ್ಟಿದೆ.
ಸಸ್ಯವರ್ಣನೆ :
ಇದರ ವೈಜ್ಞಾನಿಕ ಹೆಸರು ಇದರ ಕಾಂಡವು ಪೊದೆಯಂತೆ ಸಾಧಾರಣ 5 ರಿಂದ 6 ಅಡಿಗಳಷ್ಟು ಎತ್ತರ ಬೆಳೆಯುತ್ತದೆ..ಹಸಿರು ಬಣ್ಣದ ಎಲೆಗಳು ಗಿಣ್ಣಿನ ಕೆಳಭಾಗದಲ್ಲಿ ಅಭಿಮುಖವಾಗಿ ಜೋಡಣೆಗೊಂಡಿರುತ್ತದೆ. ಎಲೆಗಳು ದೀರ್ಘ ವೃತ್ತಾಕಾರದಲ್ಲಿದ್ದು ಬುಡದಲ್ಲಿ ಅಗಲವಿದ್ದು ತುದಿ ಚೂಪಾಗಿರುತ್ತದೆ. ಖಂಡದ ತುದಿಯಲ್ಲಿ ಬಿಳಿಯ ಬಣ್ಣದ ತೊಟ್ಟಿಲ್ಲದ ಹೂಗಳು ಗೊಂಚಲನಲ್ಲಿ ಬೆಳೆಯುತ್ತವೆ.
ಮಣ್ಣು:
ಫಲವತ್ತಾದ ಜೇಡಿಮಣ್ಣು ಈ ಬೆಳೆಗೆ ಉತ್ತಮ.
ಬೇಸಾಯ ಕ್ರಮಗಳು:
ಬೀಜದಿಂದ ಮತ್ತು ಕಾಂಡದ ತುಂಡುಗಳಿಂದ ಸಸ್ಯಾಭಿವೃದ್ಧಿ ಮಾಡಬವುದು. ಎಂಟ ರಿಂದ ಹತ್ತು ಸೆಂಟಿಮೀಟರ್ ಉದ್ದದ ಕಾಂಡದ ತುಂಡನ್ನು ಪಾಲಿಥೀನ್ ಚೀಲದಲ್ಲಿ ಅಥವಾ ಎತ್ತರದ ಮಂಡಿಗಳಲ್ಲಿ ನಾಟಿ ಮಾಡಬಹುದು.
ಕೊಯ್ಲು ಮತ್ತು ಇಳುವರಿ :
ಕಾಂಡದ ತುಂಡುಗಳನ್ನು ನಾಟಿ ಮಾಡಿದ ಒಂದೆರಡು ತಿಂಗಳಲ್ಲೇ ಎಲೆಗಳನ್ನು ಬೆಳೆಸಬಹುದು. ದೀರ್ಘಾವಧಿಯ ಬೆಳೆಯಾದ್ದರಿಂದ ಒಮ್ಮೆ ನೆಟ್ಟಲ್ಲಿ ಹಲವಾರು ವರ್ಷಗಳವರೆಗೆ ಯಾವುದೇ ಆರೈಕೆಯನ್ನು ಅಪೇಕ್ಷಿಸದೆ ಸೋಂಪಾಗಿ ಬೆಳೆಯುತ್ತದೆ.ಈ ಗಿಡದ ಎಲೆಗಳಲ್ಲಿ ಹೆಚ್ಚಿನ ಸಾರಜನಕ, ರಂಜಕ ಮತ್ತು ಪೊಟ್ಯಾಶ್ ಅಂಶವಿರುವುದರಿಂದ ಉತ್ತಮ ಹಸಿರು ಗೊಬ್ಬರ ವಾಗಿಯೂ ಬಳಸಬಹುದು. ಆರು ತಿಂಗಳು ಬೆಳೆಯಿಂದ ಒಂದು ಗಿಡದಿಂದ ಎರಡು ಮೂರು ಕೆಜಿ ಎಲೆಗಳನ್ನು ಲಭ್ಯವಾಗುತ್ತದೆ.
ಉಪಯುಕ್ತ ಭಾಗಗಳು :
ಬೇರು, ಎಲೆ, ಹೂ, ಕಾಂಡ,ಎಲ್ಲವೂ ಔಷಧೀಯ ಗುಣ ಹೊಂದಿವೆ.
ರಾಸಾಯನಿಕ ಘಟಕಗಳು:
ತೈಲಾಂಶ, ಕೊಬ್ಬು, ರೆಸಿನ್, ವಾಸಿಸಿನ್ ಎಂಬ ಕ್ಷಾರ ಆಡ ತೋಡಿಕ್ ಆಮ್ಲ,ಸಕ್ಕರೆ, ಅಂಟು ಮುಂತಾದ ರಾಸಾಯನಿಕ ಅಂಶಗಳಿವೆ. ಅಡುಸೋಗೆಯ ಬೇರಿನ ತೊಗಟೆಯಲ್ಲಿ ಹೆಚ್ಚಿನ ವಾಸಿಸಿನ್ ಅಂಶವಿದ್ದು ಎಲೆಯಲ್ಲಿ ಶೇಕಡ 0.25 ರಷ್ಟು ಮಾತ್ರ ಇರುತ್ತದೆ. ವಾಸಿಸಿನ್ ಎಂಬ ರಾಸಾಯನಿಕವೇ ಔಷಧಿ ಗುಣದ ಮೂಲ.