ಮನೆ ಸುದ್ದಿ ಜಾಲ ಒಂದು ಶೋರೂಂಗೆ ಲೈಸೆನ್ಸ್ ಪಡೆದು, ಇನ್ನೆರಡು ಶೋರೂಂ ನಡೆಸುತ್ತಿರುವ ಅದ್ವೈತ್ ಹುಂಡೈ: ಕಣ್ಣುಮುಚ್ಚಿ ಕುಳಿತ ಆರ್‌’ಟಿಓ...

ಒಂದು ಶೋರೂಂಗೆ ಲೈಸೆನ್ಸ್ ಪಡೆದು, ಇನ್ನೆರಡು ಶೋರೂಂ ನಡೆಸುತ್ತಿರುವ ಅದ್ವೈತ್ ಹುಂಡೈ: ಕಣ್ಣುಮುಚ್ಚಿ ಕುಳಿತ ಆರ್‌’ಟಿಓ ಇಲಾಖೆ

0

ಮೈಸೂರು(Mysuru): ವಾಹನ ಪರವಾನಗಿ ಪಡೆಯದೇ ವಾಹನಗಳನ್ನು ಸಂಚಾರಕ್ಕೆ ಬಳಸುವ ವ್ಯಕ್ತಿಗಳ ವಿರುದ್ಧ ಕೆಂಡಕಾರುವ ಆರ್‌’ಟಿಓ ಅಧಿಕಾರಿಗಳು, ಒಂದೇ ಶೋರೂಂ ನಡೆಸಲು ಪರವಾನಗಿ ಪಡೆದು ಅಕ್ರಮವಾಗಿ ಇನ್ನೆರಡು ಶೋರಂಗಳನ್ನು ನಡೆಸುತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿದ್ದಾರೆ.

ಝಾನ್ಸಿ ರಾಣಿ ಲಕ್ಷ್ಮಿಬಾಯಿ ರಸ್ತೆಯಲ್ಲಿರುವ ಅದ್ವೈತ್ ಹುಂಡೈ ಶೋರೂಂ ನಡೆಸಲು ದಾಖಲೆಗಳನ್ನು ಸಲ್ಲಿಸಿ ಪರವನಾಗಿ ಪಡೆದುಕೊಂಡಿದ್ದು, ಜೆ.ಪಿ.ನಗರ ಹಾಗೂ ಬೆಳವಾಡಿಯಲ್ಲಿ ಅದೇ ದಾಖಲಾತಿಗಳನ್ನು ಮುಂದಿಟ್ಟುಕೊAಡು ವ್ಯಾಪಾರ ಪರವಾನಗಿ ಪಡೆಯದೇ ಹಲವಾರು ವರ್ಷಗಳಿಂದ ಶೋರೂಂ ನಡೆಸುತ್ತಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದ ಜನರು ಯಾವುದಾದರೊಂದು ನಿಯಮ ಗಾಳಿಗೆ ತೂರಿದರೇ ಮಹಾಪ್ರಮಾದ ಎಸಗಿರುವಂತೆ ವರ್ತಿಸುವ ಆರ್‌’ಟಿಓ ಅಧಿಕಾರಿಗಳು ಅಕ್ರಮವಾಗಿ ಎರಡು ಶೋರಂ ನಡೆಸುತ್ತಿರುವ ವ್ಯಕ್ತಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಜಾಣ ಕುರುಡನ್ನು ಪ್ರದರ್ಶಿಸುತ್ತಿರುವುದು ವಿಪರ್ಯಾಸ.

ಏನಿದು ಪ್ರಕರಣ?

ಝಾನ್ಸಿ ರಾಣಿ ಲಕ್ಷ್ಮಿಬಾಯಿ  ರಸ್ತೆಯಲ್ಲಿದ್ದ ಅದ್ವೈತ್ ಹುಂಡೈ ಶೋರೂಂನಲ್ಲಿ ಇತ್ತೀಚಿಗೆ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದು, ಶೋರಂನಲ್ಲಿದ್ದ ಕಾರುಗಳು ಬೆಂಕಿಗೆ ಆಹುತಿಯಾಗಿದ್ದವು. ನಂತರ ಅದ್ವೈತ್ ಹುಂಡೈ ಶೋರೂಂನ ಮಾಲೀಕ ಇನ್ಶೂರೆನ್ಸ್ ಕ್ಲೈಮ್‌’ಗೆ ಹಾಕಿದ್ದ ದಾಖಲೆಗಳಲ್ಲಿ ತೋರಿಸಿದ್ದಷ್ಟು ಕಾರುಗಳು ಶೋರೂಂನಲ್ಲಿರಲಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಅಲ್ಲದೇ ಇನ್ಶೂರೆನ್ಸ್ ಹಣ ಪಡೆಯುವ ಕಾರಣಕ್ಕಾಗಿ ಮಾಲೀಕನೇ ಶಾರ್ಟ್ ಸರ್ಕ್ಯೂಟ್ ಮಾಡಿಸಿದ್ದಾನೆ ಎಂಬ ಆರೋಪವು ಇದೆ.

ಆದರೆ ಈ ಎಲ್ಲಾ ಬೆಳವಣಿಗೆಗಳ ನಂತರವೂ ಕೂಡ ಅದ್ವೈತ್ ಹುಂಡೈ ಶೋರೂಂನ ಮಾಲೀಕ ಇನ್ನೆರಡು ಕಡೆ ಶೋರಂಗಳನ್ನು ತೆರೆಯಲು ಆರ್‌’ಟಿಓ ಇಲಾಖೆಯಲ್ಲಿ ವ್ಯಾಪಾರ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಿದ್ದು, ಈ ವ್ಯಕ್ತಿಯ ಮೇಲೆ ಹಲವು ಆರೋಪಗಳ ತನಿಖೆ ನಡೆಸಬೇಕಾಗಿದ್ದ ಕಾರಣಕ್ಕಾಗಿ ವ್ಯಾಪಾರ ಪರವಾಗಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.

ಆದಾಗಿಯೂ ಅದ್ವೈತ್ ಹುಂಡೈ ಮಾಲೀಕ ಜೆ.ಪಿ.ನಗರ ಹಾಗೂ ಬೆಳವಾಡಿಯಲ್ಲಿ ಶೋರೂಂ ತೆರೆದು ಕೆಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದಾರೆ. ಆರ್‌’ಟಿಓ ಅಧಿಕಾರಿಗಳು ಇದನ್ನೂ ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ. ಇದು ಅಧಿಕಾರಿಗಳ ಬೇಜವಬ್ದಾರಿ ಹಾಗೂ ಭ್ರಷ್ಟಚಾರಕ್ಕೆ ಹಿಡಿದ ಕನ್ನಡಿಯಾಗಿದೆ. ಇನ್ನು ಮುಂದಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಅದ್ವೈತ್ ಹುಂಡೈ ಅಕ್ರಮವಾಗಿ ನಡೆಸುತ್ತಿರುವ ಶೋರಂಗಳ ತನಿಖೆ ನಡೆಸಿ, ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ.