ಹದಿನೈಂದು ವರ್ಷದ ಮೂರ್ತಿ,ಬುದ್ಧಿವಂತ ವಿದ್ಯಾರ್ಥಿ ಎಂದು ಹೆಸರು ಪಡೆದಿದ್ದ. ಬೇರೆಯವರೊಂದಿಗೆ ಹೆಚ್ಚು ಬರೆಯುವ ಗಂಭೀರ ಸ್ವಭಾವದವನು. ಎರಡು ವರ್ಷಗಳ ಹಿಂದೆ ಅವನು ಎಸ್ ಎಸ್ ಎಲ್ ಸಿ ಯಲ್ಲಿ ಫೇಲಾದದ್ದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತ್ತು. ಅಲ್ಲಿಂದೀಚೆಗೆ ಆತ ಯಾವಾಗಲೂ ಮನೆಯಲ್ಲೆ ಇರುತ್ತಾನೆ ಯಾರೊಂದಿಗೂ ಮಾತನಾಡುವುದಿಲ್ಲ ತನ್ನ ರೂಮಿನಲ್ಲಿ ಸುಮ್ಮನೆ ಕುಳಿತಿರುತ್ತಾನೆ.ಊಟ ಮಾಡಲು, ಸ್ನಾನ ಮಾಡಲು ಬಟ್ಟೆ ಬದಲಾಯಿಸಲು ತಾಯಿ ಬಲವಂತ ಮಾಡಬೇಕು. ಆಗಾಗ್ಯ ತನ್ನಷ್ಟಕ್ಕೆ ತಾನೇ ನಗುತ್ತಾನೆ. ಮಾತನಾಡಿಕೊಳ್ಳುತ್ತಾನೆ.ದಿನ ಕ್ರಮೇಣ ಅವನ ಸ್ಥಿತಿ ಹದಗೆಡುತ್ತಿದ್ದು. ಈಗ ಮನೆಯಿಂದ ಹೊರಬರಲು ನಿರಾಕರಿಸುತ್ತಾನೆ.ಕೆಲವು ಸಾರಿ ಬಟ್ಟೆಯಲ್ಲೇ ಉಚ್ಚೆ ಮಾಡಿಕೊಳ್ಳುತ್ತಾನೆ.ಮತ್ತು ಅವರ ಬಗ್ಗೆ ಗಮನವೇ ಇರುವುದಿಲ್ಲ
ರಾಜೀವ, ಕಾರ್ಖಾನೆಯೋಂದರಲ್ಲಿ ಸೂಪರ್ ವೇಸರ್. ಸಮರ್ಥನಾದ ನಂಬಿಕೆಗೆ ಅರ್ಹನಾದ ವ್ಯಕ್ತಿ ಎನಿಸಿಕೊಂಡಿದ್ದ ಕಳೆದ ಆರು ತಿಂಗಳಿಂದ ಆತ ಕೆಲಸಕ್ಕೆ ಸರಿಯಾಗಿ ಹೋಗುತ್ತಿಲ್ಲ ತನ್ನನ್ನು ಕೆಲಸದಿಂದ ವಜಾ ಮಾಡಲು ತನ್ನ ಮೇಲಾಧಿಕಾರಿಗಳು ಮಸಾಲತ್ತು ಮಾಡುತ್ತಿದ್ದಾರೆ ತನ್ನ ಕೈ ಕೆಳಗಿನ ನೌಕರರು ತನ್ನ ಬಗ್ಗೆಯೇ ಮಾತನಾಡುತ್ತಿತ್ತ ಮಾತನಾಡಿಕೊಳ್ಳುತ್ತಾರೆ ಎಂದು ದೂರುತ್ತಾನೆ.ನೀವು ನನ್ನ ಬಗ್ಗೆ ಮೇಲಿನವರಿಗೆ ದೂರು ಬರೆಯುತ್ತಿದ್ದೀರಿ ಎಂದು ಆಕ್ಷೇಪಿಸಿ, ತನ್ನ ಸಹೋದ್ಯೋಗಿಗಳೊಂದಿಗೆ ಮೂರು ಬಾರಿ ಜಗಳ ಮಾಡಿದ್ದಾನೆ. ಮನೆಯಲ್ಲಿ ಹೆಂಡತಿಯ ಶೀಲವನ್ನು ಶಂಕಿಸಿ, ಆಕೆಯನ್ನು ಹೊಡೆಯುತ್ತಾನೆ ಬೇರೆ ಯಾವ ಗಂಡಸಿನೊಂದಿಗೂ ಆಕೆ ಮಾತನಾಡಕೂಡದೆಂದು ಕಟ್ಟಪ್ಪನೆ ಮಾಡಿದ್ದಾನೆ. ಆಕೆ ಊಟ ಬಡಿಸಿದರೆ. ವಿಷವಿಕ್ಕುತ್ತಾಳೆ ಎಂದು ಸಂದೇಹಿಸಿ, ಮೊದಲು ಅವಳು ತಿನ್ನುವಂತೆ ಮಾಡುತ್ತಾನೆ. ತನ್ನ ಚಟುವಟಿಕೆಗಳನ್ನೆಲ್ಲಾ ಮೇಲಧಿಕಾರಿಗಳಿಗೆ ವರದಿ ಮಾಡುವ ಯಂತ್ರವಿದೆ ಎಂದು ನಂಬಿ, ಮಲಗುವ ಮೊದಲು ಅದಕ್ಕಾಗಿ ಮನೆಯ ಮೂಲೆ ಮೂಲೆಯನೆಲ್ಲ ಶೋಧಿಸುತ್ತಾನೆ. “ನನಗೇನಾಗಿದೆ ಚೆನ್ನಾಗಿದ್ದೇನೆ ಎಂದು ಯಾವುದೇ ವೈದ್ಯರನ್ನು ಕಾಣಲು ನಿರಾಕರಿಸುತ್ತಾನೆ.
ಲಕ್ಷ್ಮಕ್ಕ ಒಳ್ಳೆಯ ಹುಡುಗಿ.ಅವಳ ಗಂಡ ಒಬ್ಬ ಸಣ್ಣ ರೈತ. ಇವರದು ಅನ್ಯೋನ್ಯ ದಾಂಪತ್ಯ ಎಂದು ಹಳ್ಳಿಯವರೆಲ್ಲಾ ಹೇಳುತ್ತಾರೆ. 15 ದಿನಗಳ ಹಿಂದೆ ಹಾಕಿ ಚೆನ್ನಾಗಿದ್ದಳು ಒಂದು ದಿನ ಇದ್ದಕ್ಕಿದ್ದಂತೆ ಆಕೆ ವಿಚಿತ್ರವಾಗಿ ಮಾತನಾಡಲಾರಂಭಿಸಿದಳು. ಅವಳೇನೇ ಮಾತನಾಡುತ್ತಾಳೆ ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ ಏನವ್ವಾ, ನೀನು ಹೇಳೋದು ಎಂದು ಕೇಳಿದರೆ ಕೇಳಿದವರ ಮೇಲೆ ಸಿಡುಕಿ ಕಿರುಚಾಡುತ್ತಾಳೆ. ಮನೆ ಕೆಲಸ ಮಾಡಲು ಮೂರು ಬಾರಿ, ಮನೆ ಬಿಟ್ಟು ಓಡಿ ಹೋಗಲು ಪ್ರಯತ್ನಿಸಿದಳು. ತಡೆಯಲು ಬಂದ ಗಂಡನಿಗೆ ಚೆನ್ನಾಗಿ ಬಾರಿಸಿದಳು. ಊಟ ಬಟ್ಟೆ ಹರಿದು,ಅವನ ಕೈ ಕಚ್ಚಿದಳು. ಊಟ ಕೊಟ್ಟರೆ,ಬುಸಿ ಎಸೆಯುತ್ತಾಳೆ. ನಿದ್ರೆ ಮಾಡುವುದಿಲ್ಲ ರಾತ್ರಿಯೆಲ್ಲಾ ಗಲಾಟೆ ಮಾಡುತ್ತಾ ಎಲ್ಲರಿಗೂ ತೊಂದರೆ ಕೊಡುತ್ತಾಳೆ. ಒಮ್ಮೆ ಸಗಣಿಯನ್ನು ತೆಗೆದುಕೊಂಡು, ಮೈ ಮುಖಗಳಿಗೆಲ್ಲಾ ಬಳಿದುಕೊಂಡಳು. ಗಂಡ ಅವಳ ಕಾಟ ತಡೆರಲಾರದೆ, ಕೈ ಕಾಲು ಕಟ್ಟಿ ರೂಮಿನಲ್ಲಿ ಕೂಡಿಯಾಕಿದ್ದಾನೆ.
ಮೂರ್ತಿ, ರಾಜೀವ ಮತ್ತು ಲಕ್ಷ್ಮಕ್ಕ ಈ ಹೀಗಾಡಲು ಕಾರಣ ಇಚಿತ್ತ ವಿಕಲತೆ. ಈ ಖಾಯಿಲೆ ಸಾಮಾನ್ಯವಾಗಿ ಹದಿವಯಸ್ಸಿನವರನ್ನು, ಪ್ರೌಢರನ್ನು ಕಾಡುತ್ತದೆ.ಸ್ವಲಸ್ವಲ್ಪವಾಗಿಯೇ ಪ್ರಾರಂಭವಾಗುವ ಈ ಖಾಯಿಲೆ ಬರಲು ಕಾರಣ ಏನು ಎಂಬುದು ಇನ್ನೂ ನಿಖರವಾಗಿ ಗೊತ್ತಿಲ್ಲ.