ಮೈಸೂರು(Mysuru): ತಾಲೂಕು ಪಂಚಾಯಿತಿ ವ್ಯಾಪ್ತಿಯ ಇಲವಾಲ, ಧನಗಳ್ಳಿ, ಗೋಪಾಲಪುರ, ಬೀರಿಹುಂಡಿ ಗ್ರಾಮ ಪಂಚಾಯತಿಯ ಆಡಿಟ್ ಅನ್ನು ಎಜಿ ಆಡಿಟ್ ಮಾಡಿಸುವಂತೆ, ಹಾಗೂ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಸಾಮಾಜಿಕ ಹೋರಾಟಗಾರ ಎಂ ರವೀಂದ್ರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಿರುವ ಕುರಿತು ಪಿಡಿಓಗಳ ವಾಟ್ಸ್’ಅಪ್ ಸಂಭಾಷಣೆ ಆರೋಪಕ್ಕೆ ಪುಷ್ಟಿ ನೀಡಿದೆ.
ಈ ಕುರಿತು ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ ಇದಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರದಲ್ಲಿ ತೊಡಗಿದ್ದ ಅಧಿಕಾರಿಗಳಲ್ಲಿ ಕೆಲವರು ದಿನಾಂಕ 27/11/2022 ರಂದು ಮಧ್ಯಾಹ್ನ 12:46 ರಿಂದ 2:52 ರವರೆಗೆ ಮೈಸೂರು ಜಿಲ್ಲೆಯ PDOಗಳ ಸಂಘದ ವಾಟ್ಸ್ ಅಪ್ ಗ್ರೂಪ್ (MDPDOWA)ಇಲ್ಲಿ ನಡೆಸಿರುವ ಅಕ್ರಮಗಳ ಬಗ್ಗೆ ಚರ್ಚಿಸಿದ್ದು ಅಲ್ಲದೆ, ಅಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಬಿಂಬಿಸಿಕೊಂಡು ಅಂತಹ ಅಧಿಕಾರಿಗಳನ್ನು ಟಾರ್ಗೆಟ್ ಮಾಡುವ ರೀತಿಯಲ್ಲಿ, ಮತ್ತು ಆಡಿಟರ್ ಸತೀಶ್ ಇವರಿಂದ ಬಾಧಿತರಾದವರು ಆರ್ಟಿಐ ಕಾರ್ಯಕರ್ತ ರ ಹತ್ತಿರ ಅಳಲು ತೋಡಿಕೊಂಡಿರುವುದನ್ನು ಚರ್ಚಿಸಿದ್ದಾರೆ.
ಗ್ರಾಮ ಪಂಚಾಯಿತಿಯಿಂದ 70,000 ರಿಂದ 80,000 ರೂ ಲಂಚ ನೀಡುವುದು ಆರ್ಟಿಐ ಕಾರ್ಯಕರ್ತನಿಗೆ ಹೇಗೆ ತಿಳಿದೀತು? ನಮ್ಮವರೇ ಯಾರೋ ಅವರಿಗೆ ಮಾಹಿತಿ ನೀಡಿದ್ದಾರೆ .. ಎಂಬಿತ್ಯಾದಿಯಾಗಿ ಚರ್ಚಿಸಿದ್ದಾರೆ.
ಏನಿದು ಪ್ರಕರಣ ?
ಮೈಸೂರು ಜಿಲ್ಲೆಯಲ್ಲಿ ಹಲವು ಗ್ರಾಮ ಪಂಚಾಯತಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದು, 2021-22 ನೇ ಸಾಲಿನ ತಮ್ಮ ಗ್ರಾಮ ಪಂಚಾಯತಿಯಲ್ಲಿ ನಡೆದ ಸೋಶಿಯಲ್ ಆಡಿಟ್ ನಲ್ಲಿ ಮೈಸೂರಿನ ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲದ ಕೆಲವು ಅಧಿಕಾರಿಗಳ ಜೊತೆ ಶಾಮೀಲಾಗಿ ತಾವು ನಡೆಸಿರುವ ಅಕ್ರಮವನ್ನು ಮರೆಮಾಚಿ, ತಮ್ಮ ತಮ್ಮ ಗ್ರಾಮ ಪಂಚಾಯತಿಯಲ್ಲಿ ನಿರ್ವಹಿಸಿರುವ ಲೆಕ್ಕಪತ್ರಗಳು, ಬಿಲ್ ಗಳು ಕ್ರಮಬದ್ಧವಾಗಿದ್ದು, ಬಳಸಿರುವ ಅನುದಾನವು ಕಾನೂನು ಬದ್ಧವಾಗಿರುತ್ತದೆ ಎಂಬ ರೀತಿಯಲ್ಲಿ ಆಡಿಟ್ ವರದಿ ತರಿಸಿಕೊಳ್ಳಲು ಹಣ ನೀಡಿರುವ ಬಗ್ಗೆ ಉಲ್ಲೇಖಿಸಿ ಕೆಲವು ಗ್ರಾಮಪಂಚಾಯತಿಗಳ ಆಡಿಟ್ ಅನ್ನು ಏಜಿ ಆಡಿಟ್ ಮಾಡಿಸುವಂತೆ ಜಿಪಂ ಸಿಇಓ ಬಳಿ ಮನವಿ ಸಲ್ಲಿಸಲಾಗಿತ್ತು.
ವಾಟ್ಸ್’ಅಪ್ ಸಂಭಾಷಣೆ
Mayappa : ನೂರಕ್ಕೆ ನೂರು ನಿಯಮವನ್ನು ಪಾಲಿಸಿರುವ ಯಾವುದೇ ಗ್ರಾಮ ಪಂಚಾಯತಿಗಳು ಇಡೀ ಕರ್ನಾಟಕದಲ್ಲಿ ಹುಡುಕಿದರೂ ಸಿಗುವುದಿಲ್ಲ ಹಾಗಾಗಿ ಆಡಿಟ್ ಮಾಡಲು ಆದೇಶವೇನಾದರು ಆದರೆ ಇಡೀ ಜಿಲ್ಲೆಗೆ ಸಂಬಂಧಿಸಿದ ಎಲ್ಲಾ ಪಂಚಾಯಿತಿಗಳನ್ನು ಮಾಡಿಸಲಿ ಆದರೆ ಯಾರೋ ಆಯ್ಕೆ ಮಾಡಿಕೊಟ್ಟ ನಾಲ್ಕು ಪಂಚಾಯತಿಗಳನ್ನು ಮಾತ್ರ ಆಡಿಟ್ ಮಾಡುವುದು ಎಷ್ಟು ಸರಿ ಇದರಲ್ಲಿ ಯಾರದೂ ಕೈವಾಡವಿದೆ ಪರಿಶೀಲಿಸುವುದು ಸೂಕ್ತ
Shivanna PDO : ನಮ್ಮವರ ಕೈವಾಡ ಇರುವುದು ನಿಜ
+91 9606270779 : ಈ ರೀತಿಯಲ್ಲಿ ದೂರು ಬಂದಾಗ ಸಂಘದ ಮೂಲಕ ಸಮಸ್ಯೆಗಳಿಗೆ ಪರಿಹಾರ ಮಾಡಲು ಸಹಕರಿಸಿ
Mayappa : ಇದು ಸದನ ಸಮಿತಿಯ ಮುಂದೆ ಬಂದು ನಂತರ ಶಿಫಾರಸು ಮಾಡಬೇಕು ಹಾಗಾಗಿ ಯಾರೂ ಆತಂಕ ಪಡಬೇಡಿ ಇದರ ಹಿಂದೆ ಯಾರಿದ್ದಾರೆ ಎಂದು ಪರಿಶೀಲಿಸಿ .
Kumar PDO: Yes
Mayappa : ಇದರ ಹಿಂದೆ ಯಾರಿದ್ದಾರೆ ಎಂದು ಮೊದಲು ತಿಳಿದುಕೊಳ್ಳಿ ನಂತರ ಅವರು ಮಾಡಿರುವ ಎಲ್ಲಾ ಪಂಚಾಯತಿಗಳನ್ನು ಎ ಜಿ ಆಡಿಟ್ ಮಾಡಿಸಲಿ .
+91 7019835897 (Nethra Manjunath): PDOS ge tondre kodoke antane jana huttkondiddare…. Yen Karmano.
+91 8880747588 (Ravi N R) : Houdu
Mayappa : ಖಂಡಿತ ಇದರ ಹಿಂದೆ ನಮ್ಮವರೇ ಯಾರೋ ಇದ್ದಾರೆ ಅವರು ಕೂಡ ಇದೇ ತಪ್ಪನ್ನು ಮಾಡಿರುತ್ತಾರೆ ಆದರೂ ಕೂಡ ಇತರರ ಕಾಲು ಎಳೆಯುವುದನ್ನು ಮಾಡುತ್ತಾರೆ, ಮೊದಲ ಅವರಿಗೆ ಇದರ ಅನುಭವ ಆಗಬೇಕು .
Shilpa Pratheep: Nammalli Oghattu irbeku ondu gp problem agli erdu gp problem agli Ella Vidhyadalliyu yaru yarannu bittukodade samartane madikolluvudannu kalibeku allivarge inta samasyegalu baruttale iruttave. Nammavare e tara madbardu yellaru gaajina maneyalle irodu.
Mayappa: Yes
ಅವರು ಯಾರು ಎಂದು ತಿಳಿದುಕೊಂಡು ಮಾಹಿತಿ ನೀಡಿದರೆ ಖಂಡಿತ ಎಲ್ಲಿಂದ ಎಲ್ಲಿಗೆ ಹೋದರು ಅವರ ಪಂಚಾಯತಿಗಳನ್ನು ಮತ್ತೊಮ್ಮೆ ಏಜಿ ಆಡಿಟ್ ಗೆ ಒಳಪಡಿಸುವ ವರೆಗೆ ಬಿಡುವುದಿಲ್ಲ ಅವರು ಯಾವ ರೀತಿ ನಿಯಮಗಳನ್ನು ಅನುಸರಿಸಿದ್ದಾರೆ ಎಂಬುದು ನಮಗೂ ಒಂದು ಬಾರಿ ತಿಳಿಯಲಿ .
Reply to 7019835897: Not only gp all govt officials also
Mayappa : ಇದರ ಹಿಂದೆ ಯಾರಿದ್ದಾರೆ ಎಂದು ತಿಳಿದರೆ ಖಂಡಿತ ಎಲ್ಲರೂ ಇದರ ಹಿಂದೆ ನಿಲ್ಲೋಣ ಅವರು ಮಾಡಿರುವ ಎಲ್ಲಾ ಪಂಚಾಯಿತಿಗಳನ್ನು ಸದನ ಸಮಿತಿ ಮುಂದೆ ಬಂದು ಶಿಫಾರಸು ಮಾಡಿಸೋಣ ಅವರು ಎಷ್ಟು ಪಾರದರ್ಶಕವಾಗಿ ಎಲ್ಲಾ … Mayappa: ರವೀಂದ್ರ ಮಾಡುವ ಆರೋಪಗಳನ್ನು ಪರಿಶೀಲಿಸಿ, 70 ರಿಂದ 80,000 ಲಂಚ ಕೊಟ್ಟು ದಾಖಲೆಗಳನ್ನು ಸರಿಪಡಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ, ಇದರ ಹಿಂದೆ ಕಂಡಿತ ನಮ್ಮವರ ಕೈವಾಡ ಇರುತ್ತದೆ . ಇವರು ಅವರನ್ನು ಎತ್ತಿಕಟ್ಟಿ ಮಾಡಿಸಿರುವ ಕೆಲಸ
ಎಂಬುದು ಎಲ್ಲರಿಗೂ ತಿಳಿದಿದೆ ಇದರ ಹಿಂದೆ ಯಾರಿದ್ದಾರೆ ಎಂದು ನೋಡಿ ಅವರು ಮಾಡಿರುವ ಪಂಚಾಯಿತಿಗಳನ್ನು ಖಂಡಿತ ಸದನ ಸಮಿತಿ ಮುಂದೆ ತಂದು ಎಸಿಡಿಟಿಗೆ ಶಿಫಾರಸ್ಸು ಮಾಡುವ ಮೂಲಕ ಅವರಿಗೆ ಸರಿಯಾದ ಪಾಠ ಕಲಿಸಬೇಕು, ಈ ರೀತಿ ಒಬ್ಬರ ಮೇಲೊಬ್ಬರನ್ನು ಎತ್ತಿಕಟ್ಟಿ ಇದನ್ನು ಮೊದಲು ನಿಲ್ಲಿಸಬೇಕು .
Shivanna PDO : ಯಾರು ಅಂತ ಗೊತ್ತು ಮುಂದೆ ಏನಾಗುತ್ತದೆಂದು ನೋಡಿ ಮುಂದೆ ನಾವು ಮಾಡುತ್ತೇವೆ .
Shilpa : ಯಾರು ಅಂತ ಗೊತ್ತಿದ್ದರೆ ಗುಂಪಿನಲ್ಲಿ ಹಾಕಿ ಶಿವಣ್ಣ ಎಲ್ಲ ಕೇಳೋಣ .
Mayappa: ಖಂಡಿತ ಗ್ರೂಪ್ನಲ್ಲಿ ಹೇಳಿ ರಾಜ್ಯ ಸಂಘದಿಂದ ಅವರು ಮಾಡಿರುವ ಎಲ್ಲಾ ಪಂಚಾಯತಿಗಳ ಪಟ್ಟಿಯನ್ನು ತೆಗೆದು ಸದನ ಸಮಿತಿಯ ಮುಂದೆ ತಂದು ಅದನ್ನು ಎಜಿಆರ್ ಏಟಿಗೆ ಶಿಫಾರಸು ಮಾಡುವಂತೆ ಒತ್ತಡ ಹಾಕುತ್ತೇವೆ .
Shivanna PDO: Confirm Madkondu elitheve
Narahari PDO: Kanditha helale beku
Mayappa : ನಾವು ದುಡ್ಡು ಕೊಡ್ತೀವಿ ಅಂತ ಇವರಿಗೆ ಏನು ಗೊತ್ತಿರುತ್ತೆ ಆರ್ಟಿಐ ಕಾರ್ಯಕರ್ತನಿಗೆ .
+91 9606270779 (Pdo Swamy..) : ಅವನು ಯಾರ ಹತ್ತಿರನು ದುಡ್ಡು ಕೇಳಿ ಪಡೆದಿಲ್ಲ ನಮ್ಮವರು ಕೊಟ್ಟಿಲ್ವಾ ?!
ಸತೀಶ್ ಆಡಿಟ್ ಮಾಡಿರುವ ಗ್ರಾಮಪಂಚಾಯಿತಿ ಮಾತ್ರ ನೋಟ್ ಆಗಿದೆ ಇವರಿಂದ ಯಾರು ಬಾಧಿತರು ಅವರೇ ತಮ್ಮ ಕಷ್ಟ ಹೇಳಿಕೊಂಡು ಇರಬಹುದು ಆದ್ರೆ PDOಗಳ ಈ ಬೆಳವಣಿಗೆ ಒಳ್ಳೆಯದಲ್ಲ ಎಲ್ಲರೂ ಯೋಚಿಸಿ ನಿರ್ಧರಿಸಿ ಇಲ್ಲಿ ನಾನು ಕೆಲಸ ಮಾಡಿರುವ panchayitinu ಇದೆ. ಇಲ್ಲಿ ಪ್ರಾಮಾಣಿಕ ಅಪ್ರಾಮಾಣಿಕ ಅನ್ನ ಪ್ರಶ್ನೆಯಲ್ಲ ಆಯಾ ಗ್ರಾಮ ಪಂಚಾಯತಿ ಪರಿಸ್ಥಿತಿ ಮೇಲೆ ಬದಲಾಗುತ್ತದೆ all are graduates ಇದ್ದರ adru ಒಂದು family thara ನೋಡಿ Personnel ಮುದ್ದೆಯಾಗಿ ನೋಡಬೇಡಿ ಎಲ್ಲರಿಗೂ ಕ್ಷೇಮವೆನಿಸುತ್ತದೆ. “
ಈ ಸಂಭಾಷಣೆಗಳಿಂದ ಭ್ರಷ್ಟಚಾರ ನಡೆದಿರುವುದು ಸಾಬೀತಾಗಿದ್ದು, ಈ ಗ್ರಾಮಪಂಚಾಯಿತಿಗಳ 2021-22 ಸಾಲಿನ ಆಡಿಟ್ ಅನ್ನು ಸಹ ಎ ಜಿ ಆಡಿಟ್ ಮಾಡಿಸಿ ದುರ್ಬಳಕೆ ಆಗಿರುವ ಸರ್ಕಾರಿ ಹಣಕ್ಕೆ ನ್ಯಾಯ ಒದಗಿಸಿ ಸದರಿ ಅಧಿಕಾರಿಗಳು ಅಧಿಕಾರಿಗಳ ತರವಲ್ಲದ ರೀತಿಯಲ್ಲಿ ನಡೆದುಕೊಂಡಿರುವುದರಿಂದ ಭ್ರಷ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಸಾಮಾಜಿಕ ಹೋರಾಟಗಾರ ರವೀಂದ್ರ ಎಂ ಒತ್ತಾಯಿಸಿದ್ದಾರೆ.