ಮನೆ ರಾಷ್ಟ್ರೀಯ ಜೂ.24 ರಿಂದ ‘ಅಗ್ನಿಪಥ್’ ಯೋಜನೆಯಡಿ ವಾಯುಪಡೆಗೆ ನೇಮಕಾತಿ

ಜೂ.24 ರಿಂದ ‘ಅಗ್ನಿಪಥ್’ ಯೋಜನೆಯಡಿ ವಾಯುಪಡೆಗೆ ನೇಮಕಾತಿ

0

ನವದೆಹಲಿ (New Delhi): ‘ಅಗ್ನಿಪಥ್’ ಯೋಜನೆಯಡಿ ಜೂನ್ 24 ರಿಂದ ಭಾರತೀಯ ವಾಯುಪಡೆಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ವಾಯುಪಡೆ ಮುಖ್ಯಸ್ಥ ವಿ.ಆರ್.ಚೌಧರಿ ಶುಕ್ರವಾರ ತಿಳಿಸಿದ್ದಾರೆ.

ಸಶಸ್ತ್ರ ಪಡೆಗಳ ನೇಮಕಾತಿಗಾಗಿ ಸರ್ಕಾರವು ಇತ್ತೀಚೆಗೆ ‘ಅಗ್ನಿಪಥ್’ ಯೋಜನೆಯನ್ನು ಘೋಷಿಸಿತು. ಯೋಜನೆಗೆ ವಯೋಮಿತಿ ಹದಿನೇಳುವರೆ ವರ್ಷದಿಂದ 21 ವರ್ಷಗಳನ್ನು ನಿಗದಿ ಮಾಡಿತ್ತು. ಆದರೆ, ಮೊದಲ ನೇಮಕಾತಿಯಲ್ಲಿ ವಯೋಮಿತಯನ್ನು 23 ವರ್ಷಗಳಿಗೆ ಹೆಚ್ಚಿಸಲಾಗಿದೆ ಎಂದು ಏರ್ ಚೀಫ್ ಮಾರ್ಷಲ್ ಚೌಧರಿ ಹೇಳಿದ್ದಾರೆ.

ಈ ಬದಲಾವಣೆಯು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಅಗ್ನಿವೀರರಾಗಿ ಸೇರ್ಪಡೆಗೊಳ್ಳಲು ಸಹಾಯವಾಗಲಿದೆ. ವಾಯುಪಡೆಯ ಆಯ್ಕೆ ಪ್ರಕ್ರಿಯೆಯು ಜೂನ್ 24 ರಿಂದ ಪ್ರಾರಂಭವಾಗುತ್ತದೆ ಅವರು ಹೇಳಿದರು.

2022ರ ಅವಧಿಯಲ್ಲಿ ಅಗ್ನಿಪಥ್ ಯೋಜನೆಯಡಿ ನೇಮಕಗೊಳ್ಳಲು ಗರಿಷ್ಠ ವಯಸ್ಸಿನ ಮಿತಿಯನ್ನು 23ಕ್ಕೆ ಹೆಚ್ಚಿಸಲಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಯುವಕರು ಹೊಸ ಮಾದರಿಯ ನೇಮಕಾತಿಯ ಅಡಿಯಲ್ಲಿ ವಾಯುಪಡೆ ಸೇರಲಿದ್ದಾರೆ ಎಂದು ಅವರು ಹೇಳಿದರು.

ನಾಲ್ಕು ವರ್ಷಗಳ ಅಲ್ಪಾವಧಿ ನೇಮಕಾತಿ ಯೋಜನೆಯ ಬಗ್ಗೆ ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.‌