ಮನೆ ಸುದ್ದಿ ಜಾಲ ಅಯೋಧ್ಯೆ ಶ್ರೀರಾಮನ ವಿಗ್ರಹಕ್ಕೆ ರೇಷ್ಮೆ, ಉಣ್ಣೆ ವಸ್ತ್ರ ಸಿದ್ಧಪಡಿಸುತ್ತಿರುವ ಆಗ್ರಾ ಮಹಿಳೆ

ಅಯೋಧ್ಯೆ ಶ್ರೀರಾಮನ ವಿಗ್ರಹಕ್ಕೆ ರೇಷ್ಮೆ, ಉಣ್ಣೆ ವಸ್ತ್ರ ಸಿದ್ಧಪಡಿಸುತ್ತಿರುವ ಆಗ್ರಾ ಮಹಿಳೆ

0

ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಇಡೀ ದೇಶವೇ ಸಜ್ಜುಗೊಂಡಿದೆ. ಆಗ್ರಾದ ಮಹಿಳೆಯೊಬ್ಬರು ಶ್ರೀರಾಮನ ವಿಗ್ರಹಕ್ಕೆ ರೇಷ್ಮೆಯ ವಸ್ತ್ರವನ್ನು ಸಿದ್ಧಪಡಿಸುತ್ತಿದ್ದಾರೆ. ಅಯೋಧ್ಯೆಯಲ್ಲಿ ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ರಾಮಮಂದಿರವನ್ನು ಉದ್ಘಾಟಿಸಲಿದ್ದಾರೆ.

ಆಗ್ರಾದ ದಯಾಲ್‌ಬಾಗ್ ಪ್ರದೇಶದ ನಿವಾಸಿ ಏಕ್ತಾ ಅವರು ಪ್ರಾಣ ಪ್ರತಿಷ್ಠಾ ಅಥವಾ ರಾಮ ಮಂದಿರದ ಪ್ರತಿಷ್ಠಾಪನೆಯ ದಿನಾಂಕ ಘೋಷಿಸಿದ ದಿನದಿಂದಲೇ ರಾಮ ಲಲ್ಲಾನಿಗಾಗಿ ರೇಷ್ಮೆ ಮತ್ತು ಉಣ್ಣೆಯ ವಸ್ತ್ರಗಳನ್ನು ತಯಾರಿಸಲು ಆರಂಭಿಸಿದ್ದಾರೆ.

ಉದ್ಘಾಟನೆಯ ಸಮಯದಲ್ಲಿ ತಾನು ಸಿದ್ಧಪಡಿಸಿದ ವಸ್ತ್ರವನ್ನು ದೇವರಿಗೆ ಆಯ್ಕೆ ಮಾಡಲಾಗುವುದು ಎಂಬ ಭರವಸೆ ಇದೆ ಎಂದಿದ್ದಾರೆ. ರಾಮ ಲಲ್ಲಾ ವಿಗ್ರಹ ಗಾತ್ರದ ಬಗ್ಗೆ ಆರಂಭದಲ್ಲಿ ನನಗೆ ತಿಳಿದಿರಲಿಲ್ಲ, ಆದ್ದರಿಂದ ಅವರು ಎಲ್ಲಾ ಗಾತ್ರದ ಉಡುಪುಗಳನ್ನು ತಯಾರಿಸಲು ಆರಂಭಿಸಿದೆ ಎಂದು ಏಕ್ತಾ ಹೇಳಿದ್ದಾರೆ.

ಯಾರಾದರೂ ಅಯೋಧ್ಯೆಗೆ ಭೇಟಿ ನೀಡಿ ಬಂದರೆ ಅವರನ್ನು ಮೊದಲು ಭೇಟಿಯಾಗಿ ಪ್ರತಿಮೆಯ ಗಾತ್ರದ ಬಗ್ಗೆ ಕೇಳಿ ತಿಳಿದುಕೊಳ್ಳಲು ಪ್ರಯತ್ನಿಸಿದ್ದರು.

ಇಲ್ಲಿಯವರೆಗೆ, ಅವರು ದೇವರ ವಿಗ್ರಹಕ್ಕಾಗಿ ಸುಮಾರು 12 ರೇಷ್ಮೆ ಮತ್ತು ಉಣ್ಣೆಯ ವಸ್ತ್ರಗಳನ್ನು ಸಿದ್ಧಪಡಿಸಿದ್ದಾರೆ ಮತ್ತು ಈ ಉಡುಪುಗಳನ್ನು ಜನವರಿ 22 ರಂದು ದೇವಾಲಯದ ಟ್ರಸ್ಟ್‌ಗೆ ಉಡುಗೊರೆಯಾಗಿ ನೀಡಲು ಉದ್ದೇಶಿಸಿದ್ದಾರೆ.