ಮನೆ ರಾಷ್ಟ್ರೀಯ ಅಹಮದಾಬಾದ್ : ರಾಜ್‌ಕೋಟ್‌ನಲ್ಲಿ ಸರ್ಕಾರಿ ಗೌರವಗಳೊಂದಿಗೆ ಇಂದು ಮಾಜಿ ಸಿಎಂ ವಿಜಯ್ ರೂಪಾನಿ ಅಂತ್ಯಕ್ರಿಯೆ

ಅಹಮದಾಬಾದ್ : ರಾಜ್‌ಕೋಟ್‌ನಲ್ಲಿ ಸರ್ಕಾರಿ ಗೌರವಗಳೊಂದಿಗೆ ಇಂದು ಮಾಜಿ ಸಿಎಂ ವಿಜಯ್ ರೂಪಾನಿ ಅಂತ್ಯಕ್ರಿಯೆ

0

ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಅವರ ಅಂತ್ಯಕ್ರಿಯೆ ಇಂದು ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆಯಲಿದೆ.

ಅಂತ್ಯಕ್ರಿಯೆ ಇಂದು (ಜೂನ್ 16) ಸಂಜೆ ಗುಜರಾತ್‌ನ ರಾಜ್‌ಕೋಟ್ ನಲ್ಲಿ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ. ವಿಜಯ್ ರೂಪಾನಿ ಅವರು ರಾಜ್‌ಕೋಟ್‌ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಹಿನ್ನೆಲೆಯಲ್ಲಿ ಅಂತಿಮ ಯಾತ್ರೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಅಲ್ಲಿ ಆಯೋಜಿಸಲಾಗಿದೆ.

ವಿಮಾನ ಅಪಘಾತದಿಂದಾಗಿ ಗುರುತು ಇಲ್ಲದ ಹಲವು ಶವಗಳ ಪೈಕಿ ವಿಜಯ್ ರೂಪಾನಿಯವರ ಮೃತದೇಹವನ್ನು ಗುರುತಿಸಲು ಡಿಎನ್‌ಎ ಪರೀಕ್ಷೆ ಕೈಗೊಳ್ಳಲಾಗಿತ್ತು. ಅವರ ಸಹೋದರಿಯ ಡಿಎನ್‌ಎ ಜೊತೆಗೆ ರೂಪಾನಿಯವರ ಡಿಎನ್‌ಎ ಮ್ಯಾಚ್ ಆಗಿದ್ದು, ಶವವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಇಂದು ಬೆಳಿಗ್ಗೆ 11:30ರ ವೇಳೆಗೆ ಅಹಮದಾಬಾದ್ ಸಿವಿಲ್ ಆಸ್ಪತ್ರೆಯಿಂದ ಮೃತದೇಹವನ್ನು ಕುಟುಂಬ ಸದಸ್ಯರಿಗೆ ನೀಡಲಾಯಿತು.

ವಿಮಾನದ ಮೂಲಕ ಮೃತದೇಹವನ್ನು ರಾಜ್‌ಕೋಟ್‌ಗೆ ಕೊಂಡೊಯ್ಯಲಾಗಿದ್ದು, ಮಧ್ಯಾಹ್ನ 2 ಗಂಟೆಯ ವೇಳೆಗೆ ಅಲ್ಲಿ ತಲುಪುವ ನಿರೀಕ್ಷೆಯಿದೆ. ಸಂಜೆ 5 ಗಂಟೆಗೆ ಅಂತಿಮ ಯಾತ್ರೆ ಆರಂಭವಾಗಿ, ಸಂಜೆ 6 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ. ರಾಜಕೀಯ ನಾಯಕರು, ಪಕ್ಷದ ಕಾರ್ಯಕರ್ತರು, ಹಾಗೂ ಸಾವಿರಾರು ಅಭಿಮಾನಿಗಳು ಅಂತಿಮ ನಮನ ಸಲ್ಲಿಸಲು ಆಗಮಿಸುವ ಸಾಧ್ಯತೆ ಇದೆ.