ಮನೆ ರಾಷ್ಟ್ರೀಯ ಹೈದರಾಬಾದ್‌ ನಲ್ಲಿ ಹಾರಿಸಿದ ‘ಏರ್ ಬಲೂನ್’ ಹುಮನಾಬಾದ್ ನಲ್ಲಿ ಧರೆಗೆ

ಹೈದರಾಬಾದ್‌ ನಲ್ಲಿ ಹಾರಿಸಿದ ‘ಏರ್ ಬಲೂನ್’ ಹುಮನಾಬಾದ್ ನಲ್ಲಿ ಧರೆಗೆ

0

ಹುಮನಾಬಾದ್: ಪರಿಸರದಲ್ಲಿನ ಉಷ್ಣವಲಯ ಮತ್ತು ವಾಯುಮಂಡಲದ ಎತ್ತರಗಳಲ್ಲಿ ಸ್ಥಳೀಯ ಹವಾಮಾನವನ್ನು ಮೇಲ್ವಿಚಾರಣೆ ಮಾಡಲು ಆಕಾಶಕ್ಕೆ ಹಾರಿಸಿದ ಏರ್ ಬಲೂನ್ ಶನಿವಾರ ಬೆಳಗಿನ ಜಾವ ತಾಲೂಕಿನ ಜಲಸಂಗಿ ಗ್ರಾಮದಲ್ಲಿ ಧರೆಗೆ ಉರುಳಿ ಬಿದ್ದಿದೆ.

Join Our Whatsapp Group

ಹೈದರಾಬಾದ್‌ನ TIFR ಬಲೂನ್ ಕೇಂದ್ರದಿಂದ ಜನವರಿ 17ರಂದು ಉಡಾವಣೆ ಮಾಡಲಾಗಿತ್ತು, ತಾಂತ್ರಿಕ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಜಲಸಂಗಿ ಗ್ರಾಮದಲ್ಲಿ ಬಂದು ಬಿದ್ದಿದ್ದು ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿತ್ತು. ಆಕಾಶದಿಂದ ಧರೆಗೆ ಬರುತ್ತಿರುವುದನ್ನು ಕಂಡ ಕೆಲ ಜನರು ಭಯಭೀತರಾಗಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸದ್ಯ ಏರ್ ಬಲೂನ್ ಬಿಳುವುದರಿಂದ ಯಾವುದೇ ಅನಾಹುತ, ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಏರ್ ಬಲೂನಲ್ಲಿ ಒಂದು ವಿಶಿಷ್ಟ ಲಕ್ಷಣವೆಂದರೆ, ವಿವಿಧ ತಾಂತ್ರಿಕ ಅಂಶಗಳು ಅಳವಡಿಸಿದ ಕಾರಣ ಹೈದರಾಬಾದ್ ಬಲೂನ್ ಕೇಂದ್ರದ ಅಧಿಕಾರಿಗಳು ಕೂಡ ಅದನ್ನು ಹಿಂಬಾಲಿಸಿಕೊಂಡು ಗ್ರಾಮಕ್ಕೆ ಬಂದಿದ್ದಾರೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ. ಯಂತ್ರದ ಕುರಿತು ಮಾಹಿತಿ ನೀಡಿದರು. ಯಾರೂ ಕೂಡ ಭಯಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಇಂತಹ ಬಲೂನ್‌ಗಳನ್ನು ವರ್ಷದಲ್ಲಿ ಎರಡು ಋತುಗಳಲ್ಲಿ ಉಡಾಯಿಸಲಾಗುತ್ತದೆ. ಜನವರಿ – ಏಪ್ರಿಲ್ ಮತ್ತು ಅಕ್ಟೋಬರ್ ದಿಂದ ಡಿಸೆಂಬರ್ ವರೆಗೆ ಹಾರಿಸಿ ಪರಿಸರದಲ್ಲಿನ‌ ವಾತಾವರಣದ ಕುರಿತು ಪರೀಕ್ಷೆ ನಡೆಸುತ್ತವೆ ಎಂದು ಸ್ಥಳದಲ್ಲಿದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.