ಪ್ರಸಾರಿತʼವೆಂದರೆ ಅಗಲಿಸಲ್ಪಟ್ಟ, ನೀಳಮಾಡಿದ ಎಂದರ್ಥ. ಪಾದವೆಂದರೆ ಹೆಜ್ಜೆ ಆದುದರಿಂದ ಈ ಆಸನದಲ್ಲಿ ಕಾಲುಗಳನ್ನ ಅಗಲಿಸಿ, ಅವನ್ನು ನೀಳವಾಗಿ ಚಾಚುವ ಅಭ್ಯಾಸವು ದೊರಕುತ್ತದೆ.
ಅಭ್ಯಾಸ ಕ್ರಮ :-
೧. ಮೊದಲು ʼತಡಾಸನʼದಲ್ಲಿ ನಿಲ್ಲಬೇಕು.
೨. ಬಳಿಕ ಉಸಿರನ್ನು ಒಳಕ್ಕೆಳೆದು, ಎರಡು ಕೈಗಳನ್ನೂ ಸೊಂಟದ ಮೇಲಿರಿಸಿ, ಕಾಲುಗಳೆರಡನ್ನು 4 ½ – 5ಅಡಿಗಳಷ್ಟು ನಿಲ್ಲಬೇಕು.
೩. ಆಮೇಲೆ ಮಂಡಿಚಿಪ್ಪುಗಳನ್ನ ಮೇಲಕ್ಕೆ ಸೆಳೆದು, ಕಾಲುಗಳೆರಡನ್ನೂ ಬಿಗಿಗೊಳಿಸಬೇಕು. ಬಳಿಕ ಉಸಿರನ್ನು ಹೊರಗೆ ಬಿಟ್ಟು ಅಂಗೈಗಳನ್ನ ಎರಡು ಕಾಲುಗಳ ಮಧ್ಯಭಾಗದಲ್ಲಿ ನೆಲದ ಮೇಲೆ ಅವು ಮತ್ತು ಹೆಗಲುಗಳೂ ಒಂದೇ ರೇಖೆಯಲ್ಲಿರುವಂತೆ ಅಳವಡಿಸಬೇಕು.
೪. ಈಗ ಉಸಿರನ್ನ ಒಳಕ್ಕೆಳೆದು, ತಲೆಯನ್ನ ಮೇಲೆತ್ತಿ, ಬೆನ್ನಿನ ಭಾಗವನ್ನು ನಿಮ್ನಗೊಳಿಸಬೇಕು.
೫. ಉಸಿರಣ್ಣ ಹೊರಕ್ಕೆ ಬಿಟ್ಟು ಮೊಣಕೈಗಳನ್ನ ಭಾಗಿಸಿ, ನಡು ಮಂಡೆಯನ್ನು (ತಲೆಯಮೇಲ್ಭಾಗ) ನೆಲದಮೇಲಿರಿಸಿ, ದೇಹದ ಭಾರವೆಲ್ಲವನ್ನು ಕಾಲುಗಳಿಗೆ ಅಳವಡಿಸಬೇಕು. ದೇಹದ ಹೊರೆಯನ್ನು ಎಂದಿಗೂ ತಲೆಗೇರಿಸಬಾರದು. ಕಾಲುಗಳೆರಡು ಅಂಗೈಗಳೆರಡು ಮತ್ತು ತಲೆ ಇವೆಲ್ಲವೂ ಒಂದೇ ಸರಳ ರೇಖೆಯಲ್ಲಿರುವಂತೆ ತಿರುಗಿಸಬೇಕು.
೬. ಈ ಭಂಗಿಯಲ್ಲಿ ಸುಮಾರು ಅರ್ಧ ನಿಮಿಷದಷ್ಟು, ಆಗ ನೀಳವಾದ ಮತ್ತು ಸಮಾನಾದ ಶ್ವಾಸೋಚ್ಛಾಸಗಳನ್ನು ನಡೆಸಬೇಕು.
೭. ಈಗ ಉಸಿರನ್ನ ಒಳಕ್ಕೆಳೆದು, ತಲೆಯನ್ನು ನೆಲದಿಂದ ಮೇಲೆ ಮಾಡಬೇಕು. ಬಳಿಕ ತಲೆಯನ್ನು ನೇರವಾಗಿ ಮೇಲೆತ್ತಿ, ಇದರಲ್ಲಿಯ ೪ನೇ ಸ್ಥಿತಿಯಲ್ಲಿರುವಂತೆ ಬೆನ್ನನ್ನು ಮತ್ತೆ ನಿಮ್ನ ಗೊಳಿಸಬೇಕು.
೮. ಬಳಿಕ ಉಸಿರನ್ನು ಹೊರಕ್ಕೆ ಬಿಟ್ಟು, ಮತ್ತೆ ಎರಡನೇ ಸ್ಥಿತಿಗೆ ಬರಬೇಕು.
೯. ಕೊನೆಗೆ ಹಿಂದಕ್ಕೆ ಜಿಗಿದು, ಮತ್ತೆ ತಾಡಾಸನಕ್ಕೆ ಬಂದು ನಿಲ್ಲಬೇಕು.














