ಇದು ಈ ಹಿಂದಿನ ಆಸನ ಭಂಗಿಯಿಂದ ಮುಂದುವರಿದ ಚಲನವಲನಗಳಿಂದ ಕೂಡಿದ ಆಸನ, ಕೈಗಳನ್ನ ನೆಲದ ಮೇಲೂರುವುದಕ್ಕೆ ಪ್ರತಿಯಾಗಿ ಅವುಗಳನ್ನು ಸೊಂಟದ ಮೇಲೆ ಒತ್ತಿರಿಸಬೇಕು. ಇಲ್ಲವೇ ಕೈಗಳನ್ನು ಬೆನ್ನಿನ ಹಿಂಭಾಗದಲ್ಲಿ ಜೋಡಿಸಿ ಈ ಹಿಂದೆ ʼಪಾಶ್ವೋತ್ತಾನಾಸನʼ ದಲ್ಲಿ ವಿವರಿಸುವ ರೀತಿಯಲ್ಲಿ ಬೆನ್ನ ಹಿಂದೆ ನಮಸ್ತೆ ಎಂಬ ಭಂಗಿಯನ್ನು ತೋರಿಸಬೇಕು. ಈ ವಿವಿಧವಾದ ಚಲನವಲನದಲ್ಲಿ ಕಾಲುಗಳು ನೀಡಲಾಗಿ ಹಿಗ್ಗುವಿಕೆ ಹೆಚ್ಚುವುದು.
ಪರಿಣಾಮಗಳು :-
೧. ಈ ಆಸನಭಂಗಿಯಲ್ಲಿ ಜಾನುರಜ್ಜುಗಳು ಮತ್ತು ಅಪಕರ್ಷಕ ಸ್ನಾಯು (ABDUCTOR) ಗಳಿರುವ ಮಾಂಸ ಖಂಡಗಳು ಪೂರ್ಣವಾಗಿ ಬೆಳೆಯಲು ಅವಕಾಶವಾಗುತ್ತದೆ. ಅಲ್ಲದೆ ರಕ್ತವು ಮುಂಡಕ್ಕೂ ರುಂಡಕ್ಕೂ ಸರಾಗವಾಗಿ ಹರಿದಾಡುತ್ತದೆ. “ಶೀರ್ಷಾಸನ”ವನ್ನು ಅಭ್ಯಾಸಿಸಲಾಗದವರು, ಈ ಆಸನದ ಭಂಗಿಯನ್ನಭ್ಯಾಸಿಸಿ ಆಹಾರ ಪಚನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಪ್ರಯೋಜನವನ್ನು ಗಳಿಸಬಹುದು.
ಹೊಸದಾಗಿ ಆಸನಗಳನ್ನು ಅಭ್ಯಾಸಿಸುವವರಿಗೆ ಮೇಲೆ ವಿವರಿಸಿದ ನಿಲುವು ಭಂಗಿಗಳು ಅತ್ಯಗತ್ಯ. ಅಭ್ಯಾಸಿಯು ಈ ಆಸನಭ್ಯಾಸದಲ್ಲಿ ಮುಂದುವರೆದಂತೆಲ್ಲ ದೇಹವನ್ನು ಸುಲಭವಾಗಿ ಭಾಗಿಸುವ ಶಕ್ತಿಯನ್ನು ಗಳಿಸುತ್ತಾನೆ. ಆಗ ಅವನು ನಿಲುವು ಭಂಗಿಗಳುಳ್ಳ ಆಸನನಾಭ್ಯಾಸವನ್ನು ಬಿಡಬಹುದಾದರು ಕಡ್ಡಾಯವಾಗಿ ವಾರಕ್ಕೊಂದು ದಿವಸವಾದರೂ ಈ ಆಸನಾಭ್ಯಾಸಗಳನ್ನು ಅನುಸರಿಸುವುದು ಉತ್ತಮ. ಈನುಲುವು ಭಂಗಿಗಳೆಲ್ಲವೂ ದೇಹದ ಭಾರವನ್ನು ತಗ್ಗಿಸಲು ಸಹಕಾರಿಯಾಗಿದೆ.