ಮನೆ ಉದ್ಯೋಗ ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ: ಜೂನಿಯರ್ ಎಕ್ಸಿಕ್ಯೂಟಿವ್‌ ಹುದ್ದೆಗೆ ಅರ್ಜಿ ಆಹ್ವಾನ

ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ: ಜೂನಿಯರ್ ಎಕ್ಸಿಕ್ಯೂಟಿವ್‌ ಹುದ್ದೆಗೆ ಅರ್ಜಿ ಆಹ್ವಾನ

0

ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ (ಎಎಐ) ಜೂನಿಯರ್ ಎಕ್ಸಿಕ್ಯೂಟಿವ್ (ಏರ್ ಟ್ರ್ಯಾಫಿಕ್ ಕಂಟ್ರೋಲ್) ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಸದರಿ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು 2022 ರ ಜುಲೈ 14 ರವರೆಗೆ ಆನ್‌ಲೈನ್‌ ಮೂಲಕ ಅರ್ಜಿ ಹಾಕಬಹುದು. ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಜೂನಿಯರ್ ಎಕ್ಸಿಕ್ಯೂಟಿವ್ (ಏರ್‌ ಟ್ರ್ಯಾಫಿಕ್ ಕಂಟ್ರೋಲ್) ಗೆ 400 ಹುದ್ದೆಗಳು ಖಾಲಿ ಇವೆ. ಪದವಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತ ಓದಿರಬೇಕು ಅಥವಾ ಇಂಜಿನಿಯರಿಂಗ್ ಪದವಿಯನ್ನು ಪಾಸ್‌ ಮಾಡಿದವರು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಗರಿಷ್ಠ 27 ವರ್ಷ ವಯಸ್ಸು ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರಲಿದೆ.

ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಫೀಶಿಯಲ್ ವೆಬ್‌ಸೈಟ್‌ https://www.aai.aero/ ಗೆ ಭೇಟಿ ನೀಡಬಹುದು. ಜೂನ್‌ 15 ರಂದು ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಲಿಂಕ್ ಬಿಡುಗಡೆ ಮಾಡಲಾಗುತ್ತದೆ. ಈ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್‌ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ಎಎಐ ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಮಾಸಿಕ ಆರಂಭಿಕ ವೇತನ ರೂ.40,000 ನೀಡಲಾಗುತ್ತದೆ.

ಜೂನ್‌ 15 ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ, ಅರ್ಜಿ ಸಲ್ಲಿಸಲು ಜುಲೈ 14 ಕೊನೆಯ ದಿನ.ಆನ್‌ಲೈನ್‌ ಪರೀಕ್ಷೆ ದಿನಾಂಕವನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.