ಬೆಂಗಳೂರು(Bengaluru): ದೇಶದ ಪ್ರಮುಖ ನಗರಗಳಲ್ಲಿ ಏರ್‌ಟೆಲ್ 5ಜಿ ಪ್ಲಸ್ ಆರಂಭ ಆಗಿದೆ ಎಂದು ಕಂಪನಿಯು ತಿಳಿಸಿದೆ.
ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್, ಸಿಲಿಗುರಿ, ನಾಗಪುರ ಮತ್ತು ವಾರಾಣಸಿ ನಗರಗಳಲ್ಲಿ ಗ್ರಾಹಕರು ಹಂತ ಹಂತವಾಗಿ ಆಧುನಿಕ 5ಜಿ ಪ್ಲಸ್ ಸೇವೆಗಳನ್ನು ಪಡೆಯಲಿದ್ದಾರೆ. ಗ್ರಾಹಕರು ತಮ್ಮ ಪ್ರಸ್ತುತ ಡೇಟಾ ಪ್ಲಾನ್‌ಗಳಲ್ಲಿಯೇ ಅತ್ಯಂತ ವೇಗದ 5ಜಿ ಪ್ಲಸ್ ಸೇವೆಗಳನ್ನು ಆನಂದಿಸಬಹುದು ಎಂದು ತಿಳಿಸಿದೆ.
ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಕೇಂದ್ರ ಸ್ಥಾಪಿಸಲು ₹984 ಕೋಟಿ ಹೂಡಿಕೆ ಮಾಡುವುದಾಗಿ ವಾಹನ ಬಿಡಿಭಾಗ ತಯಾರಿಸುವ ಕೆನಡಾದ ಮ್ಯಾಗ್ನ ಕಂಪನಿ ಗುರುವಾರ ತಿಳಿಸಿದೆ.
2.40 ಲಕ್ಷ ಚದರ ಅಡಿಯಲ್ಲಿ ಎಂಜಿನಿಯರಿಂಗ್ ಕೇಂದ್ರ ಇರಲಿದೆ, ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಕಂಪನಿ ಹೇಳಿದೆ.