ನವದೆಹಲಿ(Newdelhi): ದೇಶದ ನಾಲ್ಕು ಮಹಾನಗರಗಳು ಸೇರಿದಂತೆ ಎಂಟು ನಗರಗಳಲ್ಲಿ ಭಾರ್ತಿ ಏರ್‌ಟೆಲ್ 5ಜಿ ಟೆಲಿಕಾಂ ಸೇವೆಗಳನ್ನು ಶನಿವಾರ ಪ್ರಾರಂಭಿಸುತ್ತಿದೆ.
ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯುತ್ತಿರುವ ‘ಇಂಡಿಯನ್ ಮೊಬೈಲ್ ಕಾಂಗ್ರೆಸ್’ನಲ್ಲಿ ಮಾತನಾಡಿರುವ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್, ಮಾರ್ಚ್ 2024 ರ ವೇಳೆಗೆ ದೇಶದಾದ್ಯಂತ ಹಂತಹಂತವಾಗಿ 5ಜಿ ಸೇವೆ ಒದಗಿಸಲಾಗುತ್ತದೆ ಎಂದು ಹೇಳಿದ್ದಾರೆ.
ದೇಶದ ಎಂಟು ಪ್ರಮುಖ ನಗರಗಳಲ್ಲಿ 5ಜಿ ಮೊಬೈಲ್ ಸೇವೆಗಳನ್ನು ನಾವು ಪ್ರಾರಂಭಿಸುತ್ತಿದ್ದೇವೆ. ಮಾರ್ಚ್ 2023ರ ವೇಳೆಗೆ ಬಹುತೇಕ ಭಾಗಗಳಿಗೆ ಸೇವೆ ಒದಗಿಸುತ್ತೇವೆ. ಮಾರ್ಚ್ 2024ರ ವೇಳೆಗೆ ಇಡೀ ದೇಶಕ್ಕೇ ವೇಗದ ಇಂಟರ್’ನೆಟ್ ಸೇವೆಯನ್ನು ನೀಡುತ್ತೇವೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು 5ಜಿ ದೂರಸಂಪರ್ಕ ಸೇವೆಗಳಿಗೆ ಇಂದು (ಶನಿವಾರ) ಚಾಲನೆ ನೀಡಿದರು. ಆಯ್ದ ನಗರಗಳಲ್ಲಿ 5ಜಿ ದೂರಸಂಪರ್ಕ ಸೇವೆಗೆ ಚಾಲನೆ ನೀಡಲಾಗಿದೆ.