ಅಜಯ್ ದೇವಗನ್ ಅವರು ಇತ್ತೀಚೆಗೆ ಸಿನಿಮಾ ಆಯ್ಕೆಯಲ್ಲಿ ಸಾಕಷ್ಟು ಭಿನ್ನತೆ ತೋರುತ್ತಿದ್ದಾರೆ. ಇತ್ತೀಚೆಗೆ ಅವರು ‘ಮೈದಾನ್’ ಸಿನಿಮಾ ಮೂಲಕ ಗಮನ ಸೆಳೆದಿದೆ. ಭಾರತದ ಮೊದಲ ದಲಿತ ಕ್ರಿಕೆಟಿಗ ಪಾಲ್ವಂಕರ್ ಬಾಲೂ ಅವರ ಬಯೋಪಿಕ್ನಲ್ಲಿ ಅಜಯ್ ದೇವಗನ್ ನಟಿಸಲಿದ್ದಾರೆ.
ನಿರ್ಮಾಪಕಿ ಪ್ರೀತಿ ಸಿನ್ಹಾ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅನೌನ್ಸ್ ಮಾಡಿದ್ದಾರೆ. ಈ ಚಿತ್ರದಲ್ಲಿ ಪಾಲ್ವಂಕರ್ ಬಾಲೂ ಪಾತ್ರದಲ್ಲಿ ಅಜಯ್ ದೇವಗನ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ತಿಗ್ಮಂಶು ದುಲಿಯಾ ಅವರು ನಿರ್ದೇಶನ ಮಾಡುತ್ತಿದ್ದಾರೆ. ರಾಮಚಂದ್ರ ಗುಹಾ ಬರೆದ ‘ಎ ಕಾರ್ನರ್ ಆಫ್ ಎ ಫಾರೆನ್ ಫೀಲ್ಡ್’ ಪುಸ್ತಕ ಆಧರಿಸಿ ಸಿನಿಮಾದ ಕಥೆ ಸಿದ್ಧವಾಗಿದೆ. ಈ ಚಿತ್ರದ ಶೂಟಿಂಗ್ ಈ ವರ್ಷದ ಕೊನೆಯಲ್ಲಿ ಆರಂಭ ಆಗೋ ಸಾಧ್ಯತೆ ಇದೆ.
ಪಾಲ್ವಂಕರ್ ಬಾಲೂ ಅವರು ದಲಿತ ಸಮುದಾಯದಲ್ಲಿ ಜನಿಸಿದರು. ಅವರು ಪುಣೆ ಕ್ರಿಕೆಟ್ ಕ್ಲಬ್ನಲ್ಲಿ ಆರಂಭದಲ್ಲಿ ಗ್ರೌಂಡ್ ಕೀಪರ್ ಆಗಿದ್ದರು. ನಂತರ ಅವರು ಕ್ರಿಕೆಟರ್ ಆದರು. ಈ ಪ್ರಯಾಣದಲ್ಲಿ ಅವರು ಎಷ್ಟೊಂದು ಚಾಲೆಂಜ್ಗಳನ್ನು ಎದುರಿಸಿದರು ಎನ್ನುವುದನ್ನು ಉಲ್ಲೇಖಿಸಲಾಗಿದೆ.