ಮನೆ ಕ್ರೀಡೆ ಟೀಂ ಇಂಡಿಯಾದ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅಜಿತ್ ಅಗರ್ಕರ್ ಆಯ್ಕೆ ಬಹುತೇಕ ಖಚಿತ

ಟೀಂ ಇಂಡಿಯಾದ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅಜಿತ್ ಅಗರ್ಕರ್ ಆಯ್ಕೆ ಬಹುತೇಕ ಖಚಿತ

0

ತೆರವಾಗಿದ್ದ ಟೀಂ ಇಂಡಿಯಾದ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ವೇಗಿ ಅಜಿತ್ ಅಗರ್ಕರ್ ಆಯ್ಕೆಯಾಗುವುದು ಖಚಿತ ಎನ್ನಲಾಗಿದೆ.

Join Our Whatsapp Group

ಈ ತಿಂಗಳು ವೆಸ್ಟ್ ಇಂಡೀಸ್ ಪ್ರವಾಸ ಮಾಡಲಿರುವ ಟೀಂ ಇಂಡಿಯಾ ನಂತರ ಐರ್ಲೆಂಡ್ ಪ್ರವಾಸ, ಏಷ್ಯಾಕಪ್ ಮತ್ತು ವಿಶ್ವಕಪ್ ಆಡಲಿದೆ. ಹಾಗಾಗಿ ಈ ಬಾರಿಯ ಏಷ್ಯಾಕಪ್ ಟೂರ್ನಿಗೂ ಮುನ್ನ ಖಾಲಿ ಇರುವ ಆಯ್ಕೆ ಸಮಿತಿ ಅಧ್ಯಕ್ಷರನ್ನು ನೇಮಕ ಮಾಡಲು ಬಿಸಿಸಿಐ ನಿರ್ಧರಿಸಿದೆ.

ಆಯ್ಕೆ ಸಮಿತಿ ಅಧ್ಯಕ್ಷರಾಗುವಂತೆ ಬಿಸಿಸಿಐ, ಅಜಿತ್ ಅಗರ್ಕರ್ ಅವರನ್ನು ಸಂಪರ್ಕಿಸಿದ್ದು, ವೇತನ ಹೆಚ್ಚಳದ ಭರವಸೆಯನ್ನು ನೀಡಿದೆ ಎಂದು ವರದಿಯಾಗಿದೆ. ಹೀಗಾಗಿ ಬಿಸಿಸಿಐ ಭರವಸೆಯ ನಂತರ, ಅಗರ್ಕರ್ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಈ ಹಿಂದೆ ಐಪಿಎಲ್ ​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸುತ್ತದ್ದ ಅಗರ್ಕರ್ ಇತ್ತೀಚೆಗೆ ಆ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಸದ್ಯಕ್ಕೆ ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರು ವಾರ್ಷಿಕ 90 ಲಕ್ಷ ವೇತನ ಪಡೆದರೆ, ಮುಖ್ಯ ಆಯ್ಕೆದಾರರು 1 ಕೋಟಿ ವೇತನ ಪಡೆಯುತ್ತಾರೆ. ಹೀಗಾಗಿ ವೇತನ ಕಡಿಮೆ ಎಂಬ ಕಾರಣದಿಂದಾಗಿ ಟೀಂ ಇಂಡಿಯಾದ ಹಲವು ಮಾಜಿ ಆಟಗಾರರು ಈ ಹುದ್ದೆಗೆ ನೀಡಿದ ಆಫರ್ ಅನ್ನು ತಿರಸ್ಕರಿಸಿದ್ದರು.

ಇದೇ ವೇಳೆ ಆಯ್ಕೆ ಸಮಿತಿಗೆ ನೀಡಿರುವ ವೇತನವನ್ನು ಪರಿಶೀಲಿಸಲು ಬಿಸಿಸಿಐ ನಿರ್ಧರಿಸಿದೆ.

ಅಜಿತ್ ಅಗರ್ಕರ್ ಟೀಂ ಇಂಡಿಯಾ ಪರ 191 ಏಕದಿನ, 26 ಟೆಸ್ಟ್ ಮತ್ತು 4 ಟಿ20 ಪಂದ್ಯಗಳನ್ನಾಡಿದ್ದು, ಈ ಪಂದ್ಯಗಳಲ್ಲಿ ಕ್ರಮವಾಗಿ 58, 288 ಮತ್ತು 3 ವಿಕೆಟ್ ಪಡೆದಿದ್ದಾರೆ. ಅಲ್ಲದೆ, ಅಗರ್ಕರ್ ಏಕದಿನದಲ್ಲಿ 3 ಅರ್ಧಶತಕಗಳೊಂದಿಗೆ 1269 ರನ್, ಟೆಸ್ಟ್​ ನಲ್ಲಿ 1 ಶತಕ ಮತ್ತು 15 ಅರ್ಧಶತಕದೊಂದಿಗೆ 571 ರನ್ ಬಾರಿಸಿದ್ದಾರೆ.