ಮನೆ ಸುದ್ದಿ ಜಾಲ ಅಜ್ಮೇರ್‌ ದರ್ಗಾ ಹಿಂದೆ ದೇಗುಲವಾಗಿತ್ತು: ಸಮೀಕ್ಷೆಗೆ ಹಿಂದೂ ಸೇನೆ ಆಗ್ರಹ

ಅಜ್ಮೇರ್‌ ದರ್ಗಾ ಹಿಂದೆ ದೇಗುಲವಾಗಿತ್ತು: ಸಮೀಕ್ಷೆಗೆ ಹಿಂದೂ ಸೇನೆ ಆಗ್ರಹ

0

ಅಜ್ಮೇರ್: ರಾಜಸ್ಥಾನದ ಅಜ್ಮೇರ್‌ನಲ್ಲಿರುವ, ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾ ಹಿಂದೆ ಹಿಂದು ದೇಗುಲವಾಗಿತ್ತು. ದರ್ಗಾದ ಕಿಟಕಿಗಳಲ್ಲಿ ಹಿಂದು ಚಿಹ್ನೆಗಳಿವೆ. ಆದ್ದರಿಂದ ಭಾರತೀಯ ಪುರಾತತ್ವ ಇಲಾಖೆಯಿಂದ (ಎಎಸ್ಐ) ಸಮೀಕ್ಷೆ ನಡೆಯಲಿ ಎಂದು ಮಹಾರಾಣ ಪ್ರತಾಪ್ ಸೇನಾ ಆಗ್ರಹಿಸಿದೆ.

ಆದರೆ, ಈ ಪ್ರತಿಪಾದನೆಯನ್ನು ದರ್ಗಾ ಆಡಳಿತ ಅಲ್ಲಗಳೆದಿದ್ದು, ಯಾವುದೇ ಕುರುಹು ಇಲ್ಲ ಎಂದು ಹೇಳಿದೆ.

ವರದಿಗಾರರನ್ನು ಉದ್ದೇಶಿಸಿ ಮಾತನಾಡಿದ  ‘ಮಹಾರಾಣ ಪ್ರತಾಪ್ ಸೇನಾ’ದ ರಾಜವರ್ಧನ್ ಸಿಂಗ್ ಪರ್ಮಾರ್, ದರ್ಗಾವು ಪ್ರಾಚೀನ ಹಿಂದು ದೇಗುಲವಾಗಿತ್ತು. ದರ್ಗಾದ ಗೋಡೆಗಳಲ್ಲಿ ಮತ್ತು ಕಿಟಕಿಗಳಲ್ಲಿ ಸ್ವಸ್ತಿಕ ಚಿಹ್ನೆ ಇದೆ. ಭಾರತೀಯ ಪುರಾತತ್ವ ಇಲಾಖೆ ದರ್ಗಾದಲ್ಲಿ ಸಮೀಕ್ಷೆ ನಡೆಸಬೇಕೆಂದು ಆಗ್ರಹಿಸುತ್ತೇವೆ ಎಂದು ಹೇಳಿದ್ದಾರೆ.

ಈ ಕುರಿತು ‘ಅಂಜುಮಾನ್ ಸಯ್ಯದ್ ಜದ್‌ಗಾನ್’ಅಧ್ಯಕ್ಷ ಮೊಯಿನ್ ಚಿಸ್ತಿ ಪ್ರತಿಕ್ರಿಯಿಸಿ, ‘ಹಿಂದು ದೇಗುಲವಾಗಿತ್ತೆಂಬ ಪ್ರತಿಪಾದನೆ ಆಧಾರರಹಿತ. ಪ್ರತಿ ವರ್ಷ ಹಿಂದುಗಳೂ ಸೇರಿದಂತೆ ಲಕ್ಷಾಂತರ ಮಂದಿ ದರ್ಗಾಕ್ಕೆ ಭೇಟಿ ನೀಡುತ್ತಾರೆ ದರ್ಗಾದಲ್ಲಿ ಎಲ್ಲೂ ಸ್ವಸ್ತಿಕ ಚಿಹ್ನೆ ಇಲ್ಲ. ನೂರಾರು ವರ್ಷಗಳಿಂದ ದರ್ಗಾ ಇಲ್ಲಿದೆ. ಹೀಗಾಗಿ ಯಾವುದೇ ಪ್ರಶ್ನೆ ಉದ್ಭವಿಸದು. ಹಿಂದೆಂದೂ ಇಲ್ಲದಂಥ ವಾತಾವರಣ ಇಂದು ದೇಶದಲ್ಲಿ ಸೃಷ್ಟಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಿಂದಿನ ಲೇಖನಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಸ್ವಾಮೀಜಿ ನೇಮಕ
ಮುಂದಿನ ಲೇಖನಕೋಮುವಾದಿ ಪಕ್ಷದಿಂದ ದೇಶಕ್ಕೆ ಅಪಾಯ: ಬಿಜೆಪಿ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ