ಮಂಡ್ಯ:ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿ ಕಳೆದ ಏ.9ರಂದು ನಡೆದ ಅಕ್ಷಯ್ ಗೌಡ ಎಂಬ ಯುವಕನ ಕೊಲೆ ಪ್ರಕರಣವನ್ನು ಭೇದಿಸಿರುವ ಮಂಡ್ಯ ನಗರ ಪೂರ್ವ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಡ್ಯನಗರದ ಸ್ವರ್ಣಸಂದ್ರ ಬಡಾವಣೆಯ ಭರತ ಅಲಿಯಾಸ್ ಸಾಹುಕಾರ ಹಾಗೂ ಚಿಕ್ಕೇಗೌಡನದೊಡ್ಡಿಯ ಪ್ರಮೋದ್ ಅಲಿಯಾಸ್ ಕಾಡು ಬಂಧಿತ ಆರೋಪಿಗಳು.
ಕಳೆದ ಏ.9ರ ರಾತ್ರಿ 11.30 ಗಂಟೆಯಲ್ಲಿ ಸ್ವರ್ಣಸಂದ್ರದ ದಾಸೇಗೌಡನ ಬೀದಿ ನಾಗಲಿಂಗೇಶ್ವರ ದೇವಾಲಯದ ಬಳಿ ಕೆಂಪೇಗೌಡನ ಬೀದಿ ನಿವಾಸಿಗಳಾದ ಅಕ್ಷಯ್’ಗೌಡ ಹಾಗೂ ಆತನ ಸ್ನೇಹಿತ ಹೇಮಂತ್ ಇದ್ದಾಗ ಆರೋಪಿಗಳು ಮಾರಕಾಸ್ತ್ರಗಳಿಂದ ಹೊಡೆದು ಅಕ್ಷಯ್ ಗೌಡನನ್ನು ಕೊಲೆ ಮಾಡಿ ಹೇಮಂತ್ ನಿಗೆ ಮರಣಾಂತಿಕ ಹಲ್ಲೆ ನಡೆಸಿ ಓಡಿಹೋಗಿ ತಲೆ ಮರೆಸಿಕೊಂಡಿದ್ದರು.ಆರೋಪಿ
ಗಳನ್ನು ಮದ್ದೂರು- ಕೆ.ಎಂ.ದೊಡ್ಡಿ ರಸ್ತೆಯಲ್ಲಿ ದಸ್ತಗಿರಿ ಮಾಡಲಾಗಿದೆ.
ಕಾರ್ಯಾಚರಣೆಯಲ್ಲಿ ಪಿಎಸ್’ಐ ಶೇಷಾದ್ರಿಕುಮಾರ್, ಎಎಸ್’ಐ ಲಿಂಗರಾಜು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು ಎಂದು ಎಸ್ಪಿ ಯತೀಶ್ ಶ್ಲಾಘಿಸಿದ್ದಾರೆ